ಪಿ.ಡಿ.ಓ.ಜೆ.ಇ. ಅಧ್ಯಕ್ಷರ ಮೇಲೆ ಕ್ರಮಕ್ಕೆ ಒತ್ತಾಯ

ರಾಯಚೂರು, ಜೂ.೭- ಕೇಂದ್ರ ಸರಕಾರದ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬರುವ ವಿವಿಧ ಕಾಮಗಾರಿಗಳಲ್ಲಿ ನಡೆದ ಸರಕಾರಿ , ಆರೆಸರಕಾರಿ ನೌಕರಸ್ಥರ ಮೇಲೆ ಬೋಗಸ್ ಬಿಲ್ ಎತ್ತುತ್ತಿರುವ ಪಿ.ಡಿ.ಓ.ಜೆ.ಇ.ಮತ್ತು ಅಧ್ಯಕ್ಷರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡು ಪಿ.ಡಿ.ಓ. ಇವರನ್ನು ಅಮಾನತ್ತು ಗೊಳಿಸಬೇಕೆಂದು ಒತ್ತಾಯಿಸಿ ರಾಷ್ಟ್ರೀಯ ಸಮಾಜ ಪರಿವರ್ತನ ಸಮಿತಿ ಮುಖಂಡರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಾಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯ್ತಿಯಲ್ಲಿ ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಬರುವ ವಿವಿಧ ಕಾಮಗಾರಿಗಳನ್ನು ಕಳಪೆ ಮತ್ತು ಬೋಗಸ್ ಬಿಲ್‌ಗಳನ್ನು ಮಾಡಿ ಎತ್ತಿರುವುದು ಕಾನೂನು ಉಲ್ಲಂಘನೆಯಾಗಿದೆ. ಕಾಮಗಾರಿ ಕ್ರಿಯಾ ಯೋಜನೆ ಪ್ರಕಾರ ಯಾವುದೇ ಮಜರ್‌ಮೆಂಟ್ ಮಾಡದೇ ಕಾಮಗಾರಿ ನಡೆಸಿ ಕ್ರಿಯಾ ಯೋಜನೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿದರು.
೨೧-೨೨ನೇ ಅನುದಾನವನ್ನು ಅರಸಿಗೇರಾ ಗ್ರಾಮದಲ್ಲಿ ಕೆರೆಯ ಹೂಳೆತ್ತುವ ಕಾಮಗಾರಿಯನ್ನೇ ಅದೇ ಗ್ರಾಮದ ೪ ಜನ ಗ್ರಾಮಪಂಚಾಯತ್ ಸದಸ್ಯರು ತೆಲಂಗಾಣದಿಂದ ಕೆಲ ಜನರನ್ನು ಕರೆತಂದು ಕಾಮಗಾರಿ ಸ್ಥಳದಲ್ಲಿ ಇರುವ ಅಲ್ಪಸ್ವಲ್ಪ ಕೂಲಿಕಾರರೊಂದಿಗೆ ನಿಲ್ಲಿಸಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರಂತೆ ಕಾಣುವಂತೆ ಪೋಟೋ ಮತ್ತು ವೀಡಿಯೋ ತೆಗೆದು ಇವರನ್ನು ಊರಿನವರೆಂಬಂತೆ ಬಿಂಬಿಸಿ ಪಿಡಿ.ಓ. ಮತ್ತು ಜೆ.ಇ. ಗ್ರಾ.ಪಂ. ಅಧ್ಯಕ್ಷರು ಹಾಗೂ ಸದರಿ ನಾಲ್ಕು ಜನ ಸದಸ್ಯರು ತಮ್ಮ ಸಂಬಂಧಿಕರ ಹೆಸರಿಗೆ ಬಿಲ್ಲು ಮಾಡಿ ಹಣವನ್ನು ದುರುಪಯೋಗ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಚಂದ್ರಚೂಂಡಾ ಗ್ರಾಮಪಂಚಯತಿ ಪಿ.ಡಿ.ಓ ಮೇಲೆ ಕಳದ ೪ ವರ್ಷದಿಂದ ಇವರ ಮೇಲೆ ಹಲವಾರು ದೂರುಗಳಿವೆ.೧೪ ನೇ ಹಣಕಾಸಿನ ಅನುದಾನವನ್ನು ೪ ವಷರ್ದಿಂದ ಲೆಕ್ಕಪತ್ರಗಳಿಲ್ಲ.ಇದರ ಕ್ರಿಯಾ ಯೋಜನೆ ಕೂಡ ಇಲ್ಲ . ಪಂಚಾಯ್ತಿ ಸದಸ್ಯರಿಗೆ ಲೆಕ್ಕ ನೀಡದ ಈತನು ಜನರ ಸಮಸ್ಯೆಗಳನ್ನು ಹೇಗೆ ಬಗೆಹರಿಸುತ್ತಾರೆ ಎಂಬುದು ಊಹಿಸಬೇಕು.ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನ ವಿವಿಧ ಕಾಮಗಾರಿಗಳು ೧೪ ನೇ ಹಣಕಾಸು ಮತ್ತಿತರ ಕಾಮಗಾರಿ ಅನುದಾನದ ಬಗ್ಗೆ ಕೇಳಿದರೆ ನನ್ನ ಮೇಲೆ ದೂರು ನೀಡಿ ಯಾವ ಅಧಿಕಾರಿ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಮಾತುಗಳು ಪಿ.ಡಿ. ಬಾಯಿಯಿಂದ ಕೇಳಿಬರುತ್ತಿವೆ ಎಂದರೆ ಇದರ ಅರ್ಥ ಅಧಿಕಾರಿಗಳು ಈತನ ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆಂದು ಸಾಬೀತಾಗುತ್ತದೆ.
ಈ ಹಿಂದೆ ಇರುವ ಸಿ.ಇ.ಓ. ಅಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ೨ ಸಾರಿ ಈತನನ್ನು ವರ್ಗಾವಣೆ ಮಾಡಿದರೂ ನೂತನ ಪಿ.ಡಿ.ಓ ರವರಿಗೆ ಚಾರ್ಜ್ ನೀಡದೆ ಮತ್ತೆ ಇ.ಓ. ರಾಮರೆಡ್ಡಿಯೊಂದಿಗೆ ಹಣದ ಆಮಿಷವೊಡ್ಡಿ ಮನವೊಲಿಸಿ,ಅದೇ ಚಂದ್ರಬಂಡಾ ಪಂಚಾಯ್ತಿಯಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಆರೋಪಿಸಿದರು.