ಪಿ.ಡಿ.ಎ. ಕಾಲೇಜಿನಲ್ಲಿ 350ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉದ್ಯೋಗಉದ್ಯೋಗಾವಕಾಶ ಮತ್ತು ವಿದ್ಯಾರ್ಥಿಗಳ ಸ್ವಾವಲಂಬನೆಗೆ ಪ್ರಾಮುಖ್ಯತೆ :ಶಶೀಲ ನಮೋಶಿ

ಕಲಬುರಗಿ:ಏ.17:ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಅವರನ್ನು ಸ್ವಾವಲಂಬಿಯಾಗಿ ಬೇಳೆಯಲು ಬೇಕಾದ ಎಲ್ಲ ತಾಂತ್ರಿಕ ಸಾಮಥ್ರ್ಯವನ್ನು ಒದಗಿಸುವುದೇ ನಮ್ಮ ಗುರಿ ಹಾಗೂ ಆ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಸಮಾಜಕ್ಕೆ ಅನುಕೂಲವಾಗುವಂತಹ ಸಂಶೋಧನೆ ಹಾಗೂ ನೂತನ ಆವಿಷ್ಕಾರಗಳತ್ತ ವಿದ್ಯಾರ್ಥಿಗಳ ಗಮನಹರಿಸಿ ಅವರನ್ನು ಕ್ರಯಾಶಿಲರಾಗಿರಲು ವಿವಿಧ ತರಬೇತಿ ನೀಡಲಾಗುವುದು ಮತ್ತು ಅವರಲ್ಲಿ ಅತ್ಮ ವಿಶ್ವಾಸ ಹೆಚ್ಚಿಸಿ ಅವರ ತಾಂತ್ರಿಕ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು ಎಂದು ವಿಧಾನ ಪರಿಷತ ಸದಸ್ಯರು ಹಾಗೂ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ ನಮೋಶಿಯವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ಇಲ್ಲಿನ ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಉದ್ಯೋಗಾವಕಾಶ ಪಡೆದುಕೊಂಡ ಕೊನೆಯ ವರ್ಷದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ತಮ್ಮ ಪ್ರಸಂಶೆಯನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಉತ್ತಮವಾದ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದು ವಾರ್ಷಿಕ ಗರಿಷ್ಠ 6 ಲಕ್ಷ ಹಾಗೂ ಕನಿಷ್ಠ 4.5 ಲಕ್ಷ ರೂ ಸಂಭಾವನೆ ಪಡೆಯಲಿದ್ದಾರೆಂದು ತಿಳಿಸಿದರು. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಸ್. ಆರ್. ಮೀಸೆ ಅವರು ಮಾತನಾಡಿ ನಮ್ಮಲ್ಲಿ ಶಿಕ್ಷಕರು ಕೂಡ ಮೌಲ್ಯವರ್ಧಿತ ಪಠ್ಯ ಹಾಗೂ ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಕೌಶಲ್ಯ ದೊರಕಿಸಿಕೊಡುವಲ್ಲಿ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಬಿ. ಭೀಮಳ್ಳಿ, ಆಡಳಿತ ಮಂಡಳಿ ಸದಸ್ಯರಾದ ಡಾ. ಎಸ್. ಆರ್. ಹರವಾಳ, ಡಾ. ಅನೀಲಕುಮಾರ ಪಟ್ಟಣ, ಡಾ. ಕೈಲಾಶ ಪಾಟೀಲ, ನಾಗಣ್ಣ ಘಂಟಿ, ಅನೀಲ ಮರಗೋಳ, ಡಾ. ಶೀವಾನಂದ ಮೇಳಕುಂದಿ, ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಪಿ.ಡಿ.ಎ. ತಾಂತ್ರಿಕ ಮಹಾವಿದ್ಯಾಲಯದ ಪ್ರಚಾರ್ಯ, ಉಪಪ್ರಾಚಾರ್ಯರು, ಡೀನ್, ಪರೀಕ್ಷಾ ಮೇಲಾಧಿಕಾರಿಗಳು, ವಿಭಾಗದ ಮುಖ್ಯಸ್ಥರು, ಟ್ರೇನಿಂಗ್ ಮತ್ತು ಪ್ಲೇಸಮೆಂಟ್ ಅಧಿಕಾರಿ ಹಾಗೂ ಸಂಚಾಲಕರು ಉಪಸ್ಥಿತರಿದ್ದರು.