ಪಿ.ಜಿ.ಆರ್ ಸಿಂಧ್ಯೆ ಅವರನ್ನು ಸೌಹಾರ್ದಯುತವಾಗಿ ಭೇಟಿ

ರಾಯಚೂರು,ಜೂ.೧೫-
ರಾಜ್ಯದ ಹಿರಿಯ ರಾಜಕಾರಣಿ, ಕರ್ನಾಟಕದ ಮಾಜಿ ಗೃಹ ಸಚಿವರು, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಪ್ರಧಾನ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯೆ ಅವರನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್ ಬೋಸರಾಜು ಅವರು ಸಾಂದರ್ಭಿಕವಾಗಿ ಭೇಟಿ ಮಾಡಿ ಪುಷ್ಪಗುಚ್ಛ ನೀಡುವ ಮೂಲಕ ಅಭಿನಂದಿಸಿದರು.
ಬೆಂಗಳೂರಿನಲ್ಲಿ ಭಾರತ ಸ್ಕೌಟ್ ಮತ್ತು ಕಾರ್ಯಾಲಯದಲ್ಲಿ ಭೇಟಿ ಮಾಡಿ ಸೌಹಾರ್ದಯುತವಾಗಿ ಕುಷಲೋಪರಿ ವಿಚಾರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ನೂತನ ಸಚಿವರಾದ ಎನ್.ಎಸ್ ಬೋಸುರಾಜು ಅವರನ್ನು ಪಿಜಿಆರ್ ಸಿಂಧ್ಯೆ ಅವರು ಸನ್ಮಾನಿಸಿ ಶುಭ ಕೋರಿ ಅಭಿನಂದಿಸಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಸಿಬ್ಬಂದಿಗಳು ಇದ್ದರು.