ಪಿ.ಕೆ.ಪಿ.ಎಸ್. ಸಂಘಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನೆ

ಮುಧೋಳ, ಏ3: ದೇಶದಲ್ಲಿರುವ ಸಹಕಾರಿ ಕ್ಷೇತ್ರದ ಬ್ಯಾಂಕ್‍ಗಳ ಮೇಲೆ ಆರ್.ಬಿ.ಐ ನಿಯಂತ್ರಣ ಇರುವದರಿಂದ ಯಾವುದೇ ಸಮಸ್ಯೆಗಳು ಉದ್ಬವಿಸುವದಿಲ್ಲ, ಅಷ್ಟೇ ಅಲ್ಲ ಅವು ಭದ್ರತೆ ಮತ್ತು ಸುರಕ್ಷತೆಯಿಂದ ಕೂಡಿವೆ ಆದರೆ ಅಮೇರಿಕಾ ದೇಶದಲ್ಲಿರುವ ಬ್ಯಾಂಕ್‍ಗಳ ಮೇಲೆ ಯಾವುದೇ ನಿಯಂತ್ರಣವಿಲ್ಲದ್ದಕ್ಕೆ ಮೂರು ಬ್ಯಾಂಕ್‍ಗಳು ದಿವಾಳಿ ಆಗಿವೆಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ರನ್ನ ಶುಗರ್ಸ ಅಧ್ಯಕ್ಷ ಆರ್.ಎಸ್.ತಳೇವಾಡ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕಾ ಪಿಕೆಪಿಎಸ್. ಸಂಘಗಳ ನೌಕರರ ಕ್ಷೇಮಾಭಿವೃದ್ದಿ ಸಂಘ ಹಾಗೂ ಪಿಕೆಪಿಎಸ್. ನೌಕರರ ಸಂಘ ಉದ್ಘಾಟಿಸಿ ಮಾತನಾಡಿ ಆರ್.ಬಿ.ಐ ನಿರ್ದೇಶನದಂತೆ ಸಹಕಾರಿ ಬ್ಯಾಂಕುಗಳು ಕೃಷಿಗೆ ನೀಡುವ ಸಾಲದಿಂದ ಬ್ಯಾಂಕಿಗೆ ಯಾವುದೇ ಲಾಭವಿಲ್ಲ, ಬೇರೆ ಸೆಕ್ಟರ್‍ಗಳ ಮೂಲಕ ಬ್ಯಾಂಕಿಗೆ ಲಾಭವಿದೆ, ಸಾಲಗಾರರು ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಬ್ಯಾಂಕ್‍ಗಳು ಅಭಿವೃದ್ದಿಯಾಗಲು ಸಾದ್ಯವೆಂದರು.
1995 ರಲ್ಲಿ ಕೇವಲ 26 ಪಿಕೆಪಿಎಸ್ ಗಳಿದ್ದವರು ಈಗ 42 ಪಿಕೆಪಿಎಸ್‍ಗಳು ಕಾರ್ಯ ನಿರ್ವಹಿಸುತ್ತಿವೆ, ಸಂಘದ ನೂತನ ಕಟ್ಟಡಕ್ಕೆ ಬಿಡಿಸಿಸಿ ಬ್ಯಾಂಕ್‍ದಿಂದ ರು.4ಲಕ್ಷ ಕೊಡಿಸುವದಾಗಿ ತಿಳಿಸಿದರು.
ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಕಾಂಗ್ರೆಸ್ ಧುರೀಣ ಸತೀಶ ಬಂಡಿವಡ್ಡರ ಮಾತನಾಡಿ ಸಹಕಾರಿ ಸಂಘಗಳು ಸದೃಡ ಮತ್ತು ಸುಭದ್ರವಾಗಲಿ, ಸಂಘದ ನೌಕರರಿಗೆ ಸರ್ಕಾರ ಸೇವಾ ಭದ್ರತೆ ಒದಗಿಸಲೆಂದರು.
ಅರಳಿಕಟ್ಟಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಡಾ.ತಿಮ್ಮಣ್ಣ ಅರಳಿಕಟ್ಟಿ ಮಾತನಾಡಿ ಸಂಘದ ನೂತನ ಕಟ್ಟಡಕ್ಕೆ ತಾವು ವೈಯಕ್ತಿಕವಾಗಿ ರು. 2 ಲಕ್ಷ ದೇಣಿಗೆ ನೀಡುವದಾಗಿ ಹೇಳಿದರು.
ಪಿಕೆಪಿಎಸ್. ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ನಿಂಗರಾಜ ಗುಡಿ ಅಧ್ಯಕ್ಷತೆ ವಹಿಸಿದ್ದರು, ತಾಲೂಕಾ ಪಿಕೆಪಿಎಸ್. ಸಂWದÀ ಅಧ್ಯಕ್ಷ ಕೃಷ್ಣಾ ರಾಘಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮರೇಗುದ್ದಿಯ ನೀರುಪಾಧೀಶ್ವರ ಮಹಾಸ್ವಾಮಿಜಿ ಮತ್ತು ತೋಂಟದಾರ್ಯ ಮಹಾಸ್ವಾಮಿಜಿ ಸಾನಿಧ್ಯವಹಿಸಿದ್ದರು, ಕೆಎಂಎಫ್ ನಿರ್ದೇಶಕ ಸಂಜಯ .ತಳೇವಾಡ, ಜಮಖಂಡಿಯ ಎ.ಆರ್. ಎಸ್.ಆರ್.ಬಾಡಗಿ, ಸಿಡಿಓ ಜಯಶ್ರೀ ಸವದಿ, ಡಿಜಿಎಂ ಆರ್.ಎಂ.ಕೋಮಾರ, ಸುನೀಲ ಪತ್ತಾರ ಎಸ್.ಎಸ್.ಯಲಿಗಾರ ಎಂ.ಎಂ.ಮರನೂರ, ಗುರಸಾಂತಯ್ಯ ಹಿರೇಮಠ, ಅಶೋಕ ಬಾಡಗಿ, ಮಹಾಂತೇಶ ನರೇಗಲ್, ಚಂದ್ರಶೇಖರ ಪೂಜಾರಿ, ಚನ್ನಬಸಪ್ಪ ತೇಲಿ, ರಮೇಶ ಜೀರಗಾಳ, ಪಾಂಡುರಂಗ ಘೋರ್ಪಡೆ, ಆನಂದ ಮಜ್ಜಗಿ, ಗಿರೀಶ ಪೂಜಾರ, ಸತೀಶ ಮಳಲಿ, ಸುಭಾಸ ಸಾರವಾಡ, ಭೀಮಪ್ಪ ಅಡವಿ, ಸೋಮಶೇಖರ ಮುಳ್ಳೂರ, ಬಸಪ್ಪ ಶಿಖರಶೆÀಟ್ಟಿ, ಬಸಪ್ಪ ಹಿಕಡಿ, ಕೃಷ್ಣಾ ನಿಂಗನಗೌಡ ಮುಂತಾದವರಿದ್ದರು.
ಎಲ್ಲ ಪಿಕೆಪಿಎಸ್ ಅಧ್ಯಕ್ಷÀರುಗಳನ್ನು ,ನಿರ್ದೇಶಕರುಗಳನ್ನು ಮತ್ತು ಅಧಿಕಾರಿಗಳನ್ನು, ಗಣ್ಯರನ್ನು ಸನ್ಮಾನಿಸಲಾಯಿತು.