ಪಿ.ಎಸ್.ಐ ಡಾಕಪ್ಪ ಅಮಾನತ್ತಿಗೆ ಡಿಎಸ್‌ಎಸ್ ಒತ್ತಾಯ

ರಾಯಚೂರು ನ.೧೮, ಮುದಗಲ್ ಪೊಲೀಸ್ ಠಾಣೆ ಪಿ. ಎಸ್. ಐ ಡಾಕಪ್ಪ ಪ್ರಥಮ ವರ್ತಮಾನ ವರದಿ ಪ್ರಕರಣ ದಾಖಲಿಸಿಕೊಳ್ಳದೆ ಕರ್ತವ್ಯಲೋಪಹಿಸಿಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮತಿ ಅವರನ್ನು ಅಮಾನತಿಗೆ ಒತ್ತಾಯ ಮಾಡಿದ್ದಾರೆ.
ಮುದಗಲ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಿಲಾರಟ್ಟಿ ಗ್ರಾಮದಲ್ಲಿ ಬೈಲಪ್ಪ ತಂದೆ ಹನುಮಪ್ಪ ಈತನನ್ನು ಅದೇ ಗ್ರಾಮದವರಾದ ದುರುಗನಗೌಡ ಹಾಗೂ ಅತನ ಸಹಚರರು ೯ಜನ ಸೇರಿ ಅಕ್ರಮ ಕೂಟ ರಚಿಸಿ ಆತನನ್ನು ಊರಿನ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಚಿತ್ರ ಹಿಂಸೆ ನೀಡಿದ್ದಾರೆ. ಅದೇ ದಿನ ಬೈಲಪ್ಪನ ತಂದೆ ಹನುಮಪ್ಪ ಮುದಗಲ್ ಠಾಣೆಗೆ ಹೋಗಿ ಫಿರ್ಯಾದಿಯನ್ನು ನೀಡಿರುತ್ತಾನೆ. ಆದರೆ ಪಿ. ಎಸ್. ಐ ಡಾಕಪ್ಪ ಫಿರ್ಯಾದಿಯನ್ನು ದಾಖಳಿಸಿಕೊಳ್ಳದೆ ರಾಜಿಕೀಯ ಒತ್ತಡಕ್ಕೆ ಮಣಿದು ರಾಜಿ ಸಂಧಾನ ಮಾಡುವುದಾಗಿ ಬೈಲಪ್ಪನ ತಂದೆ ಹನುಮಪ್ಪನಿಗೆ ಬೆದರಿಸಿ ಕಳುಹಿಸಿರುತ್ತಾನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಂತರ ದಲಿತ ಸಂಘಟನೆಗಳ ಮುಖಂಡರು ಒತ್ತಾಯದ ಮೇರೆಗೆ ನ.೧೫ ರಂದು ಸಂಜೆ ೪:೧೦ ಗಂಟೆಗೆ ಪಿ.ಎಸ್.ಐ. ರವರೇ ತಮ್ಮ ಕಛೇರಿಯಲ್ಲಿ ಪಿರ್ಯಾದಿಯನ್ನು ಗಣೀಕೃತ ಮಾಡಿ ಅವರ ತಂದೆಯ ಸಹಿಯನ್ನು ಮಾಡಿಸಿ ಫಿರ್ಯಾದಿಯನ್ನು ದಾಖಲಿಸಿಕೊಂಡಿರುತ್ತಾರೆ ಪಿ.ಎಸ್.ಐ. ರವರು ಫಿರ್ಯಾದಿಯಲ್ಲಿ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು, ಹಾಗೂ ಘಟನೆಯ ಬಗ್ಗೆ ನನ್ನ ಹಿರಿಯರೊಂದಿಗೆ ವಿಚಾರಿಸಿ ತಡವಾಗಿ ಫಿರ್ಯಾದಿ ನೀಡುತ್ತಿದ್ದೇನೆಂದು ಇವರೇ ಗಣಕೀಕೃತ ಫಿರ್ಯಾದಿಯಲ್ಲಿ ಟೈಪ್ ಮಾಡಿದ್ದು, ಫಿರ್ಯಾದಿದಾರರಿಗೆ ಬೆದರಿಕೆ ಹಾಕಿ ಊರಿನಲ್ಲಿ ಕೆಲವೇ ಮನೆಗಳಿದ್ದು, ನೀವು ಬದುಕುವುದು ಕಷ್ಟವಾಗುತ್ತದೆ ಎಂದು ಹೇಳಿ, ರಾಜಕೀಯ ಒತ್ತಡಕ್ಕೆ ಮಣಿದು ೨ ದಿನ ಎಫ್.ಐ.ಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ. ಯಾವ ಪ್ರಕರಣದಲ್ಲಿ ಫಿರ್ಯಾದಿ ಸಲ್ಲಿಸಿದ ಕೂಡಲೇ ಫಿರ್ಯಾದಿಯನ್ನು ದಾಖಲಿಸಲು ಇಲಾಖೆಯ ನಿಯಮಾವಳಿ ಇದ್ದರು ಪಿ. ಎಸ್. ಐ ಡಾಕಪ್ಪ ಸ್ಥಳೀಯ ಮಾಜಿ ಶಾಸಕರು ಮನಪ್ಪ ವಜ್ಜಲ್ ಹಾಗೂ ಹನುಮಂತಪ್ಪ ಕಂದಗಲ್, ಹಾಗೂ ಸಾಹುಕಾರ ಕಾಚಪೂರು ಇವರ ಒತ್ತಡದಿಂದ ದೂರನ್ನು ದಾಖಲಿಸಲು ವಿಳಂಬ ಮಾಡಿದ್ದರೆ ಆರೋಪ ಮಾಡಿದ್ದಾರೆ.
ಈ ವಿಷಯವನ್ನು ಪರಿಶೀಲಿಸಿ ಪಿ.ಎಸ್.ಐ, ಡಾಕಪ್ಪ ಇವರು ಕರ್ತವ್ಯ ಲೋಪವೆಸಗಿ ದಲಿತರಿಗೆ ರಕ್ಷಣೆ ನೀಡಲು ವಿಫಲರಾಗಿದ್ದು, ಎಫ್.ಐ.ಆರ್. ದಾಖಲಿಸಲು ವಿಳಂಬ ಮಾಡಿದ್ದರಿಂದ ಇವರನ್ನು ಕೂಡಲೇ ಅಮಾನತ್ತು ಮಾಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ.
ಹಕ್ಕೊತ್ತಾಯಗಲಾದ ಪ್ರಥಮ ವರ್ತಮಾನ ವರದಿ ಜಾರಿ ಮಾಡಲು ೨ ದಿವಸ ವಿಳಂಬ ಮಾಡಿದ ಡಾಕಪ್ಪ ಪಿ.ಎಸ್.ಐ. ಮುದಗಲ್ ಪೊಲೀಸ್ ಠಾಣೆ ಇವರನ್ನು ಅಮಾನತ್ತು ಮಾಡಬೇಕು, ಕೂಡಲೇ ಅಪರಾಧಿಗಳನ್ನು ಬಂಧಿಸಬೇಕು, ಸ್ಥಳೀಯ ದಲಿತರಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಹಾಗೂ ಶಾಂತಿ ಸುವ್ಯವಸ್ಥೆ ನೆಲೆಸುವವರೆಗೆ ಅಲ್ಲಿ ತಾತ್ಕಾಲಿಕ ಪೊಲೀಸ್ ಬಂದೋಬಸ್ತ್ ಒದಗಿಸಿಕೊಡಬೇಕು ಮತ್ತು ಸ್ಥಳಕ್ಕೆ ಭೇಟಿ ನೀಡದ ಸಿ.ಪಿ.ಐ. ಮಸ್ಕಿ ಮತ್ತು ಡಿ.ವೈ.ಎಸ್.ಪಿ. ಲಿಂಗಸೂಗೂರು ಇವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.