ಪಿ.ಎಸ್.ಎಸ್.ಇ.ಎಮ್.ಆರ್.ಶಾಲೆಯಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ

 ಸಂಜೆವಾಣಿ ವಾರ್ತೆ

ದಾವಣಗೆರೆ.ಜ.೧೩; ನಗರದ ಹೊರವಲಯದಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಬಾಪೂಜಿ ಎಸ್ ಪಿ ಎಸ್ ಎಸ್ ಪಿ ಯು ಕಾಲೇಜು ತೋಳಹುಣಸೆಯ ಶಿವಗಂಗೋತ್ರಿ ಆವರಣದಲ್ಲಿ ನಡೆದ 26ನೆಯ ವರ್ಷದ ಶಾಲೆ ಮತ್ತು ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮವು ವೈಭವೋಪೇತವಾಗಿ ಜರುಗಿತು. ಮಕ್ಕಳಲ್ಲಿ ನಮ್ಮ ಭಾರತೀಯ ಸಂಸ್ಕೃತಿ-ಪರAಪರೆಯನ್ನು ಬಿಂಬಿಸುವ ಅನೇಕ ನೃತ್ಯರೂಪಕಗಳು ಮನಸೂರೆಗೊಂಡವು. ಭವ್ಯವಾದ ವೇದಿಕೆಯು ವೈಕುಂಟ ನಿಲಯದಂತೆ ಶೋಭಿಸುತ್ತಿತ್ತು. ವೇದಿಕೆಯಲ್ಲಿ ಪ್ರದರ್ಶನಗೊಂಡ ‘ಶ್ರೀನಿವಾಸ ಕಲ್ಯಾಣ’ ನೃತ್ಯರೂಪಕವು ಪ್ರೇಕ್ಷಕರಿಗೆ ದಿವ್ಯ ಅನುಭೂತಿಯನ್ನು ನೀಡಿತು. ವಿವಿಧ ರಾಜ್ಯಗಳ ಜಾನಪದ ವೇಷಭೂಷಣಗಳಿಂದ ಕೂಡಿದ ನೃತ್ಯಗಳು ಸಹೃದಯರಿಗೆ ಕಣ್ಮನ ಸೆಳೆದವು. ನೃತ್ಯ ರೂಪಕಗಳಿಗೆ ಸಂಯೋಜನೆಯನ್ನು ಭರತನಾಟ್ಯ ಕಲಾವಿಧೆ ಭಾರ್ಗವಿ, ಸಹ-ಸಂಯೋಜಕರಾಗಿ ದಯಾನಂದ, ಹರೀಶ್ ಹಾಗೂ ವಿಜಯ್ ಅವರು ನಿರ್ವಹಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಭಾರತೀಯ ಸಂಸ್ಕೃತಿಯ ವಿಸ್ತರಣೆಯ ರೂವಾರಿಗಳು, SPIಅ ಒಂಅAಙ ಬೆಂಗಳೂರು ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಪ್ರಿತಿಯವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿಮ್ಮ ಪ್ರತಿಭೆಯು ಪ್ರೇಕ್ಷಕರಿಗೆ ಮುದ ನೀಡುವಂತೆ ಅನಾವರಣಗೊಳ್ಳಬೇಕು. ಅವರ ಸ್ಮೃತಿ ಪಟಲದಲ್ಲಿ ಸದಾ ಇರುವಂತೆ ನಿರ್ವಹಿಸಬೇಕು ಎಂದರು.ಶಾಲೆಯ ಮುಖ್ಯಸ್ಥರಾದ  ಮಂಜುನಾಥ ರಂಗರಾಜು ಅವರು ಶಾಲೆಯ ವಾರ್ಷಿಕ ವರದಿಯನ್ನು ವಾಚಿಸುತ್ತಾ ಸಂಸ್ಥೆಯು ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಕೊಡುಗೆಯನ್ನು ನೀಡುತ್ತಾ ಬಂದಿರುವುದನ್ನು ಸ್ಮರಿಸಿದರು ಮತ್ತು ಪೋಷಕರನ್ನು ಉದ್ದೇಶಿಸಿ ಜೀವನಶೈಲಿಯ ಬಗ್ಗೆ ಮಾರ್ಗದರ್ಶನ ಮಾಡಿದರು. ಶಾಲೆಯ ಪ್ರಾಂಶುಪಾಲರಾದ  ಅರುಣ್ ಪ್ರಸಾದ್ ಅವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಬಾಪೂಜಿ ಎಸ್ ಪಿ ಎಸ್ ಎಸ್ ಪಿ ಯು ಕಾಲೇಜಿನ ರಾಜೇಶ್ ಪ್ರಸಾದ್ ಅವರು ವಂದಿಸಿದರು. ಬಿ ಎಚ್ ಪಿ ಇ ಎಮ್ ಶಾಲೆಯ ಹಿರಿಯ ಪ್ರಾಂಶುಪಾಲರಾದ ಶ್ರೀಮತಿ ವನಿತಾ ಜಿ ಎಸ್ ಅವರು ಪಠ್ಯ ಮತ್ತು ಪಠ್ಯೇತರ ಚಟುಚಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಪಠ್ಯ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಿದ 9ನೆಯ ತರಗತಿಯ ಕುಮಾರಿ ಮೌಲ್ಯ ಪಿ ಅವಳು ಶೈಕ್ಷಣಿಕ ವರ್ಷದ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ಪಡೆದಳು.ಕಾರ್ಯಕ್ರಮದಲ್ಲಿ ಡಾ. ಎಸ್ ಎಸ್ ಎನ್ ಪಿ ಎಸ್ ಶಾಲೆಯ ಪ್ರಾಂಶುಪಾಲರಾದ ಕಮಲ್ ಬಿ ಎನ್ ಮತ್ತು ಪಿ ಎಸ್ ಎಸ್ ಇ ಎಮ್ ಆರ್ ಶಾಲೆಯ ಉಪ-ಪ್ರಾಂಶುಪಾಲರಾದ ಉಮಾಪತಿ ಎಚ್.ಜಿ, ರಮೇಶ್ ಬಾಬು ಇನ್ನು ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.