ಪಿ.ಎಚ್ ಡಿ ಪ್ರದಾನ

ಬಾದಾಮಿ,ಜೂ14: ತಾಲೂಕಿನ ಹಿರೇನಸಬಿ ಗ್ರಾಮದ ರಮೇಶ ಮುತ್ತಪ್ಪ ಮರಡಿ ಇವರು ಕೃಷಿ ಕೀಟಶಾಸ್ತ್ರ ವಿಭಾಗದಲ್ಲಿ ದಾಳಿಂಬೆಯ ಕೀಟಪೀಡೆಗಳ ಸಂಕಿರ್ಣ ಹಾಗೂ ಅವುಗಳ ಸಮಗ್ರ ನಿರ್ವಹಣೆ” ಎಂಬ ವಿಷಯದಲ್ಲಿ ಡಾ. ಎಸ್. ಬಿ. ಜಗ್ಗಿನ್ನವರ ರವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧವನ್ನು ಪೂರ್ಣಗೊಳಿಸಿದ ಪ್ರಯುಕ್ತ ಧಾರವಾಢ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆದ 36 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು, ಕುಲಪತಿಗಳು ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿಯವರ ಸಮ್ಮುಖದಲ್ಲಿ ಪಿ.ಎಚ್ ಡಿ ಪ್ರದಾನ ಮಾಡಲಾಯಿತು.