ಪಿ.ಎಚ್‍ಡಿ ಪದವಿ ಪ್ರಧಾನ

ಬಾಗಲಕೋಟೆ,ನ.6 : ನಗರದ ಬಸವೇಶ್ವರ ಅಭಿಯಾಂತ್ರಿಕ ಮಹಾವಿದ್ಯಾಲಯದ ಇ&ಸಿ ವಿಭಾಗದ ಪ್ರಾಧ್ಯಾಪಕ ಅಜಯಕುಮಾರ ಚಂದ್ರಶೇಖರ ಕಟಗೇರಿ ಅವರು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿ.ಎಚ್‍ಡಿ ಪದವಿ ಪಡೆದುಕೊಂಡಿದ್ದಾರೆ.
ಡಿಜೈನ್ ಮತ್ತು ಫ್ಯಾಬ್ರಿಕೇಶನ್ ಆಫ್ ನಾವೆಲ್ ಮೆಮ್ಸ್ ಪಿಜೋರೆಸ್ಟಿವ್ ಫ್ರೆಶರ್ ಸೆನ್ಸಾರ್ ಫಾರ್ ಅಪ್ಲಿಕೇಶನ್ ಇನ್ ಹೆಲ್ತಕೇರ್ ಎಂಬ ಮಹಾಪ್ರಬಂಧವನ್ನು ಮಂಡಿಸಿ ಅಜಯಕುಮಾರ ಚಂದ್ರಶೇಖರ ಕಟಗೇರಿ ಅವರು ಪಿ.ಎಚ್‍ಡಿ ಪದವಿ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಬಸವೇಶ್ವರ ಅಭಿಯಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಎಸ್. ಇಂಜನೇರಿ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.