ಪಿಸ್ತೂಲ್ ಶೂಟಿಂಗನಲ್ಲಿ ಸೇಡಂನ ವಿದ್ಯಾರ್ಥಿನಿ ರಾಷ್ಟ್ರಮಟ್ಟದಲ್ಲಿ ಆಯ್ಕೆ

ಸೇಡಂ,ಫೆ,28: ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಸಂಚಾಲಿತ ವಿದ್ಯಾ ಮಂದಿರ ಸಿ ಬಿ ಎಸ್ ಸಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಸಾಕ್ಷಿರೆಡ್ಡಿ ಅವರು ಪಿಸ್ತೂಲ್ ಶೂಟಿಂಗ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದಕ್ಕೆ ಶಿಕ್ಷಣ ಸಮಿತಿಯ ಅಧ್ಯಕ್ಷರಾದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಗೌರವಾಧ್ಯಕ್ಷ ನಾಗರೆಡ್ಡಿ ಪಾಟೀಲ್ ಹರ್ಷ ವ್ಯಕ್ತಪಡಿಸಿರುವ ಜೊತೆಗೆ ವಿದ್ಯಾರ್ಥಿನಿಯ ಹೆಚ್ಚಿನ ತರಬೇತಿಗಾಗಿ ಶಿಕ್ಷಣ ಸಮಿತಿಯು 5 ಲಕ್ಷ ರೂಪಾಯಿ ಆರ್ಥಿಕ ನೆರವನ್ನು ನೀಡಿ ಗೌರವಿಸಿದರು. ಈ ವೇಳೆಯಲ್ಲಿ ಡಾ. ಸದಾನಂದ ಬೂದಿ, ಡಾ. ಉದಯಕುಮಾರ್ ಶಾಹ, ಶ್ರೀಮತಿ ಅನುರಾಧ ಪಾಟೀಲ್, ಮಲ್ಲಿಕಾರ್ಜುನ ರೆಡ್ಡಿ ದೇಸಾಯಿ, ಶ್ರೀಮತಿ ಶೋಭರಾಣಿ ಪಾಟೀಲ್ ಸೇರಿದಂತೆ ಪಾಲಕರು ಶಿಕ್ಷಕರು ಇದ್ದರು.

ಶಿಕ್ಷಣ ಪಡೆಯುವದರ ಜೊತೆಗೆ ಹೆಚ್ಚಿನ ಆಸಕ್ತಿ ಇರುವಂತಹ ಕ್ರೀಡೆಯಲ್ಲಿ ನಿರಂತರ ತೊಡಗಿಕೊಂಡು ಪ್ರಯತ್ನಿಸಿದಾಗ ಗುರಿ ಮುಟ್ಟಲು ಸಾಧ್ಯವಿದೆ ಅದರಂತೆ ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಪಿಸ್ತೂಲ ಶೂಟಿಂಗನಲ್ಲಿ ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದು ಸಂತಸ ತಂದಿದೆ.

ಪರಮ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಅಧ್ಯಕ್ಷರು
ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ