ಪಿರಿಯಾಪಟ್ಟಣ ಪುರಸಭೆಗೆ ಮಂಜುನಾಥ್ ಸಿಂಗ್ ಅಧ್ಯಕ್ಷ, ನಾಗರತ್ನ ಉಪಾಧ್ಯಕ್ಷೆ

ಪಿರಿಯಾಪಟ್ಟಣ, ನ.10: ಪಟ್ಟಣದ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನ.9 ರಂದು ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಸ್ಪಷ್ಟ ಬಹುಮತ ಸದಸ್ಯರನ್ನು ಹೊಂದಿದ್ದ ಜೆಡಿಎಸ್ ಪಕ್ಷದ ವಾರ್ಡ್ 6ರ ಸದಸ್ಯ ಮಂಜುನಾಥ್ ಸಿಂಗ್ ಅಧ್ಯಕ್ಷರಾಗಿ ವಾರ್ಡ್ 17ರ ಸದಸ್ಯೆ ನಾಗರತ್ನ ಉಪಾಧ್ಯಕ್ಷರಾಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದರು.
ಅಧ್ಯಕ್ಷ ಸ್ಥಾನಕ್ಕೆ ಮಂಜುನಾಥ್ ಸಿಂಗ್ ಮತ್ತು ಕಾಂಗ್ರೆಸ್ ಸದಸ್ಯ ಅಬ್ದುಲ್ ಅರ್ಷದ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಾಗರತ್ನ ಮತ್ತು ಕಾಂಗ್ರೆಸ್ ಸದಸ್ಯೆ ಮಂಜುಳಾ ನಾಮಪತ್ರ ಸಲ್ಲಿಸಿದ್ದರು, ಚುನಾವಣೆಯಲ್ಲಿ 14 ಜೆಡಿಎಸ್, 8 ಕಾಂಗ್ರೆಸ್, ಓರ್ವ ಪಕ್ಷೇತರ ಸದಸ್ಯೆ ಸೇರಿದಂತೆ ಒಟ್ಟು 23 ಸದಸ್ಯರು ಹಾಗೂ ಶಾಸಕ
ಕೆ.ಮಹದೇವ್ ಮತ ಚಲಾಯಿಸಿದರು, ಸಂಸದ ಪ್ರತಾಪ್ ಸಿಂಹ ಗೈರಾಗಿದ್ದರು.
ಜೆಡಿಎಸ್ ನ ಮಂಜುನಾಥ್ ಸಿಂಗ್ ಮತ್ತು ನಾಗರತ್ನ ಕ್ರಮವಾಗಿ 16 ಮತಗಳನ್ನು ಪಡೆದರೆ ಕಾಂಗ್ರೆಸ್ ನ ಅಬ್ದುಲ್ ಅರ್ಷದ್ ಮತ್ತು ಮಂಜುಳಾ ಕ್ರಮವಾಗಿ 8 ಮತ ಪಡೆದರು, ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್ ಶ್ವೇತಾ ಎನ್ ರವೀಂದ್ರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹೆಚ್ಚು ಮತ ಪಡೆದ ಮಂಜುನಾಥ್ ಸಿಂಗ್ ಹಾಗೂ ನಾಗರತ್ನ ಅವರ ಆಯ್ಕೆ ಘೋಷಿಸಿದರು.