ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಶೇ.86.16 ಮತದಾನ

ಪಿರಿಯಾಪಟ್ಟಣ, ಡಿ.23: ತಾಲ್ಲೂಕಿನಲ್ಲಿ ನಡೆದ ಮೊದಲ ಹಂತದ ಗ್ರಾ.ಪಂ ಚುನಾವಣೆ ಶಾಂತಿಯುತವಾಗಿ ನಡೆದು ಶೇ.86.16 ಮತದಾನವಾಗಿದೆ ಎಂದು ತಾಲ್ಲೂಕು ಚುನಾವಣಾಧಿಕಾರಿ ತಹಸೀಲ್ದಾರ್ ಶ್ವೇತಾ ಎನ್. ರವೀಂದ್ರ ಮಾಹಿತಿ ನೀಡಿದರು.
ತಾಲ್ಲೂಕಿನ 34 ಗ್ರಾ.ಪಂ ನ 214 ಕ್ಷೇತ್ರಗಳಲ್ಲಿ 5 ಕ್ಷೇತ್ರಗಳ ಸಂಪೂರ್ಣ ಅವಿರೋಧ ಆಯ್ಕೆ ನಡೆದು 209 ಕ್ಷೇತ್ರಗಳ 255 ಮತಗಟ್ಟೆಗಳಲ್ಲಿ ಮತದಾನ ನಡೆದರೆ 27 ಮಂದಿ ಅವಿರೋಧ ಆಯ್ಕೆಯಾಗಿದ್ದಾರೆ, ಕೊರೊನಾ ಸೋಂಕಿನ ಕಾರಣ ಈ ಬಾರಿಯ ಗ್ರಾ.ಪಂ ಚುನಾವಣೆ ವಿಶೇಷವಾಗಿದ್ದು ಮತದಾನಕ್ಕೆ ಆಗಮಿಸುವವರು ಕಡ್ಡಾಯ ಮಾಸ್ಕ್ ಧರಿಸಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಂದ ಥರ್ಮಲ್ ಸ್ಕ್ಯಾನ್ ತಪಾಸಣೆಗೊಳಪಟ್ಟು ಸ್ಯಾನಿಟೈಜರ್ ಬಳಸಿ ಸಾಮಾಜಿಕ ಅಂತರದೊಂದಿಗೆ ತಮ್ಮ ಹಕ್ಕು ಚಲಾಯಿಸಿದರು, ಹಲವೆಡೆ ಸಾಮಾಜಿಕ ಅಂತರ ಇರದೆ ಗುಂಪು ಗುಂಪಾಗಿ ನಿಂತಿದ್ದರೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ತರಬೇತಿ ಇಲ್ಲದೆ ಕರ್ತವ್ಯಕ್ಕೆ ನಿಯೋಜಿ ಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟು 1,65,106 ಮತದಾರರಲ್ಲಿ 69,556 ಮಹಿಳೆಯರು 72,693 ಪುರುಷರು ಸೇರಿ ಒಟ್ಟು 1,42, 249 ಮತಗಳು ಚಲಾವಣೆಯಾದವು, ಮತ ಹಾಕಿದ್ದಾರೆ, ಜಿಲ್ಲಾ ಚುನಾವಣಾ ಉಸ್ತುವಾರಿ ಕೃಷ್ಣಗೌಡ ತಾಯಣ್ಣವರ, ತಹಸೀಲ್ದಾರ್ ಶ್ವೇತಾ ಎನ್ ರವೀಂದ್ರ, ಎಸ್ಪಿ ರಿಷ್ಯಂತ್ ತಾಲ್ಲೂಕಿನ ವಿವಿಧೆಡೆ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ತಾಲ್ಲೂಕಿನ ಹಲವೆಡೆ ವಯೋವೃದ್ಧ ಹಾಗೂ ಅಂಗವಿಕಲರನ್ನು ಮತದಾನ ಮಾಡಿಸಲು ಬೆಂಬಲಿಗರು ಕರೆತರುವ ವೇಳೆ ಎದುರಾಳಿ ಸ್ಪರ್ಧಿಗಳ ಬೆಂಬಲಿತರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದರೆ ಹಲವೆಡೆ ಮಧ್ಯಾಹ್ನದ ವೇಳೆಗೆ ಮತದಾರರು ಹಾಗೂ ಬೆಂಬಲಿಗರಿಗೆ ತಂಪು ಪಾನೀಯ, ಮಜ್ಜಿಗೆ ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳನ್ನು ವಿತರಿಸಿದರೆ ಕೆಲವೆಡೆ ಬಿರಿಯಾನಿ, ಬಾತು, ಮೊಸರನ್ನ ಅನ್ನ ಸಾಂಬರ್ ವಿತರಣೆ ಕಂಡುಬಂದಿತು.
ಒಟ್ಟಾರೆ ತಾಲ್ಲೂಕಿನಲ್ಲಿ ನಡೆದ ಚುನಾವಣೆ ಆರಕ್ಷಕ ಇಲಾಖೆ ಬಿಗಿ ಬಂದೋಬಸ್ತ್ ಮತ್ತು ಚುನಾವಣಾ ಇಲಾಖೆ ಉತ್ತಮ ಕಾರ್ಯ ವೈಖರಿಯಿಂದ ಶಾಂತಿಯುತವಾಗಿ ನಡೆಯಿತು.
ಫೆÇೀಟೋ ವಿವರ:
ಪಿರಿಯಾಪಟ್ಟಣ ತಾಲ್ಲೂಕಿನ ಬೆಕ್ಕರೆ ಗ್ರಾಮದ ಮತಗಟ್ಟೆ ಬಳಿ ಅಭ್ಯರ್ಥಿಗಳ ಬೆಂಬಲಿಗರು ಮತ ಯಾಚಿಸುತ್ತಿದ್ದ ದೃಶ್ಯ.