ಪಿರಿಯಾಪಟ್ಟಣ: ಜೂ.29:- ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಜಾಮಿಯ ಮಸೀದಿ ಈದ್ಗಾ ಮೈದಾನಕ್ಕೆ ಮುಸ್ಲಿಂ ಬಾಂಧವರು ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದರ ಮೂಲಕ ಬಕ್ರೀದ್ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಪಿರಿಯಾಪಟ್ಟಣದ ಜಾಮಿಯ ಮಸೀದಿಯ ಗುರುಗಳಾದ ಹಾಫಿಜ್ ಜಲೀಲ್ ಅವರು ಈದ್ಗಾ ಮೈದಾನದಲ್ಲಿ ಈದ್ ನಮಾಜ್ ನಂತರ ಮಾತನಾಡಿ ತ್ಯಾಗ ಬಲಿದಾನದ ಸಂಕೇತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುತ್ತೇವೆ. ನಾಡಿನಲ್ಲಿ ಶಾಂತಿ ಸುಭದ್ರತೆಗಾಗಿ ಮತ್ತು ಪ್ರತಿಯೊಬ್ಬರ ಏಳಿಗೆಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾರೆ ಕೊಪ್ಪಲ್ ಮಸೀದಿ ಜಾಮಿಯಾ ಮಸೀದಿ ಫಿರ್ದೋಸ್ ಮಸೀದಿ ಮಸ್ಜಿದೆ ಮಾಮೂರ್ ಶಿವಪ್ಪ ಬಡಾವಣೆಯ ಮುಸಲ್ಲ ಟೋನಿನ ಎಲ್ಲಾ ಮುಸ್ಲಿಂ ಬಾಂಧವರು.
ತಾಲೂಕು ತಹಸಿಲ್ದಾರ್ ಕುಂಜಿ ಅಹಮದ್ ಅಬ್ದುಲ್ ಅಜೀಜ್ ಅಹಮದ್ ಕಾರ್ಯದರ್ಶಿ ಶಾಫಿ ಅಹಮದ್ ಜಾವಿದ್ ಅಹಮದ್ ಮುಮ್ತಾಜ್ ಅಹಮದ್ ಮೊಹಮ್ಮದ್ ಶಾಯಾನ್ ಯಾಸಿರ್ ಅಹಮದ್ ಮೊಹಮ್ಮದ್ ದಾನಿಯಾಲ್ ರಯನ್ ಸೇರಿದಂತ್ತೆ ವಿವಿಧ ಮಸೀದಿಗಳ ಮುಖಂಡರುಗಳು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.