
ಶಿರಹಟ್ಟಿ,ಮಾ.10: ಪಟ್ಟಣದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಎಫ್,ಎಮ್,ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯಗಳು ತಾಲೂಕಾ ಪರೀಕ್ಷಾ ಕೇಂದ್ರಗಳಾಗಿ ರೂಪಿಸಲಾಗಿತ್ತು. ಈ ಕೇಂದ್ರಗಳಲ್ಲಿ ತಾಲೂಕಿನ ಒಟ್ಟು ವಿದ್ಯಾರ್ಥಿಗಳು 787 ದಾಖಲಾಗಿದ್ದು, ಇವುಗಳ ಪೈಕಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಒಟ್ಟು 297 ವಿದ್ಯಾರ್ಥಿಗಳಲ್ಲಿ 254 ವಿದ್ಯಾರ್ಥಿಗಳು ಹಾಜರಾಗಿ 43 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಎಫ್,ಎಮ್.ಡಬಾಲಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಒಟ್ಟು ದಾಖಲಾದ 490 ವಿದ್ಯಾರ್ಥಿಗಳಲ್ಲಿ 464 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 26 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಪರೀಕ್ಷಾ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಹೂ ಗುಚ್ಛವನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಜೊತೆಗೆ ಪರೀಕ್ಷಾಕೇಂದ್ರದಲ್ಲಿ ಸಾಕಷ್ಟು ಮೂಲಭೂತ ಸೌಕರ್ಯಗಳು ಗಳನ್ನು ಒದಗಿಸಲಾಗಿದೆ. ಅತ್ಯಂತ ಶಿಸ್ತು ಬದ್ದವಾಗಿ ಪರೀಕ್ಷಾ ಕ್ರಮಗಳನ್ನು ಜರುಗಿಸಲಾಗಿತ್ತು. ಪೊಲೀಸ್ ಸಿಬ್ಬಂದಿಗಳ ಕಟ್ಟುನಿಟ್ಟಿನ ಕ್ರಮದಿಂದಾಗಿ ಸುಲಲಿತಾಗಿ ಕನ್ನಡ ಭಾಷಾ ವಿಷಯ ಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿತು.