ಪಿಯು ಕಾಲೇಜುಗಳ ಕ್ರೀಡಾಕೂಟ : ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಲಬುರಗಿ :ಸೆ.23: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ(ಪದವಿ ಪೂರ್ವ ಶಿಕ್ಷಣ ಇಲಾಖೆ)ಯ ವತಿಯಿಂದ ಗುರುವಾರ ಜರುಗಿದ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಜೇವರ್ಗಿಯ ಬಸವೇಶ್ವರ ವೃತ್ತದ ಸಮೀಪವಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ, ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

   ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಚೇತನ 100 ಮೀ. ಓಟದಲ್ಲಿ ಪ್ರಥಮ, ಲಕ್ಷ್ಮೀ ಎತ್ತರ ಮತ್ತು ತ್ರಿವಳಿ ಜಿಗಿತದಲ್ಲಿ ಪ್ರಥಮ, ಮಹಮ್ಮದ್ ಇಲಿಯಾಸ್ ಜಾವಲಿನ ಎಸೆತದಲ್ಲಿ ಪ್ರಥಮ ಹಾಗೂ ಪ್ರಥಮ ಪಿಯು ವಿದ್ಯಾರ್ಥಿಗಳಾದ ಆಕಾಶ ಮತ್ತು ಮರೆಪ್ಪ ಖೋಖೊ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಸಿಬಿಸಿ ಅಧ್ಯಕ್ಷರು ಆದ ಶಾಸಕ, ಕೆಕೆಆರ್‍ಡಿಬಿ ಅಧ್ಯಕ್ಷರಾದ ಡಾ.ಅಜಯಸಿಂಗ್ ಧರ್ಮಸಿಂಗ್, ಸಿಬಿಸಿ ಉಪಾಧ್ಯಕ್ಷ ರವೀಂದ್ರಕುಮಾರ ವೈ.ಕೋಳಕೂರ್, ಕಾಲೇಜಿನ ಪ್ರಾಚಾರ್ಯ ಮಹಮ್ಮದ್ ಅಲ್ಲ್ಲಾಉದ್ದೀನ್ ಸಾಗರ, ಕ್ರೀಡಾಧಿಕಾರಿ ಶಂಕ್ರೆಪ್ಪ ಹೊಸದೊಡ್ಡಿ, ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಉಪನ್ಯಾಸಕರಾದ ಆಸ್ಮಾ ಜಬೀನ್, ನಯಿಮಾ ನಾಹಿದ್, ಶರಣಮ್ಮ ಭಾವಿಕಟ್ಟಿ, ಪ್ರಕಾಶ ಪಾಟೀಲ್, ಮಲ್ಲಿಕಾರ್ಜುನ ದೊಡ್ಡಮನಿ, ಮಲ್ಲಪ್ಪ ರಂಜಣಗಿ, ರೇಣುಕಾ ಚಿಕ್ಕಮೇಟಿ, ಸಾಹೇಬಗೌಡ ಪಾಟೀಲ, ನಾಗಮ್ಮ, ಸಮೀನಾಬೇಗಂ, ರಂಜಿತಾ ಠಾಕೂರ್, ನೂಘಹತ್ ಸುಲ್ತಾನ್, ಪ್ರ.ದ.ಸ ನೇಸರ ಎಂ.ಬೀಳಗಿಮಠ, ಸೇವಕ ಭಾಗಣ್ಣ ವಿ.ಹರನೂರ್ ಹಾಗೂ ವಿದ್ಯಾರ್ಥಿಗಳು ತೀರ್ವ ಹರ್ಷವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.