ಪಿಯು ಕಾಲೇಜಿಗೆ ಕೃಷ್ಣಮೂರ್ತಿ ನೂತನ ಪ್ರಾಚಾರ್ಯ

ಹುಳಿಯಾರು, ನ. ೨೨- ಹುಳಿಯಾರು ಮತ್ತು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಎನ್.ಜಿ. ಕೃಷ್ಣಮೂರ್ತಿ ಅವರು ನೂತನ ಪ್ರಾಚಾರ್ಯರಾಗಿ ಅಧಿಕಾರಿ ಸ್ವೀಕರಿಸಿದರು.
ತುಮಕೂರು ತಾಲ್ಲೂಕಿನ ನಾಗವಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಎನ್.ಜಿ. ಕೃಷ್ಣಮೂರ್ತಿ ಅವರು ಪದೋನ್ನತಿ ಹೊಂದಿ ಹುಳಿಯಾರು ಪಿಯು ಕಾಲೇಜಿಗೆ ನಿಯುಕ್ತಿಗೊಂಡಿದ್ದಾರೆ.
ನೂತನ ಪ್ರಾಚಾರ್ಯರನ್ನು ಉಪನ್ಯಾಸಕರುಗಳಾದ ವಿ.ಎಚ್.ರೇವಣ್ಣ, ಸಿ.ಶಿವರುದ್ರಯ್ಯ, ಕೆ.ಅನಂತಯ್ಯ, ಎಸ್.ಜಿ. ರಮೇಶ್, ಸಿ. ಗಿರೀಶ್, ಎಚ್.ಎಂ. ಮಂಜುನಾಥ್, ಟಿ.ಎನ್. ಮಲ್ಲಿಕಾರ್ಜುನ್, ಆರ್. ನಟರಾಜು, ಎನ್. ಕವಿತ ಹಾಗೂ ಸಿಬ್ಬಂದಿ ಪಿ.ಎಸ್.ರಾಜಕುಮಾರ್ ಆತ್ಮೀಯವಾಗಿ ಸ್ವಾಗತಿಸಿದರು.