ಪಿಯುಸಿ ಹಂತ ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಿಕೊಳ್ಳಲು ನಿರ್ಣಾಯಕ ಹಂತ: ಸಲಗರ

ಬಸವಕಲ್ಯಾಣ:ನ.28: ಇಂದಿನ ವಿದ್ಯಾರ್ಥಿಗಳು ನಾಳೀನ ದೇಶದ ಪ್ರಜೆಗಳು ಹೀಗಾಗಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದರೆ ನಿರಂತರ ಅಧ್ಯಯನ ಹಾಗು ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ ಎಂದು ಶಾಸಕ ಶರಣು ಸಲಗರ ಹೇಳಿದರು.
ನಗರದ ಪುಣ್ಯಕೋಟಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಸಿ ಮಾತನಾಡಿ, ದ್ವಿತೀಯ ಪಿಯುಸಿ ಹಂತವು ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ನಿರ್ಣಾಯಕ ಹಂತವಾಗಿದೆ. ಈ ಸಮಯ ಪ್ರಜ್ಞೆ ಅತ್ಯಂತ ಅವಶ್ಯಕವಾದದ್ದು. ಕಳೆದು ಹೋದ ಸಮಯ ಮತ್ತೆ ಸಿಗಲಾರದು. ಸಿಕ್ಕ ಸಮಯವನ್ನು ವ್ಯರ್ಥ ಮಾಡದೇ ಸದುಪಯೋಗ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜೀವನದಲ್ಲಿ ಅನೇಕ ಕಷ್ಟ ನೋವು ಅಡಚಣೆಗಳನ್ನು ಎದುರಿಸಿ ಯಶಸ್ಸು ಕಂಡವರ ಆದರ್ಶಗಳನ್ನು ತಮ್ಮ ಮಾದರಿಯನ್ನಾಗಿ ಇಟ್ಟುಕೊಳ್ಳಬೇಕು. ರಾಷ್ಟ್ರಪ್ರೇಮ, ಸಾಮಾಜಿಕ ಕಳಕಳಿ, ಗುರು ಹಿರಿಯರ ಹಾಗು ಮಹಿಳೆಯರ ಬಗ್ಗೆ ಅಪಾರವಾದ ಗೌರವ ಬೆಳಸಿಕೋಳ್ಳಬೇಕೆಂದು ಸಲಹೆ ನೀಡಿದ ಅವರು, ಪುಣ್ಯಕೋಟಿ ಕಾಲೇಜು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಳೆದ ಏಳು ವರ್ಷದಿಂದ ಜಿಲ್ಲೆಯಲ್ಲಿ ಉತ್ತಮ ಸ್ಥಾನದಲ್ಲಿ ಇರುವುದು ಕಂಡು ಖುಷಿ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ. ಕಲಾ ಹಾಗು ವಾಣಿಜ್ಯ ವಿಭಾಗದಲ್ಲಿ ಗುಣ ಮಟ್ಟದ ಶಿಕ್ಷಣ ನೀಡುತ್ತಿರುವದು ಹೆಮ್ಮೆಯ ವಿಷಯವಾಗಿದೆ. ಜೊತೆಗೆ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ 25 ಲಕ್ಷ ರೂಗಳನ್ನು ನೀಡುವದಾಗಿ ಭರವಸೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಪೆÇ್ರ. ಸೂರ್ಯಕಾಂತ ಶೀಲವಂತ ಅಧ್ಯಕ್ಷತೆ ಕಾರ್ಯಕ್ರಮದ ವಹಿಸಿದರು. ಉಪಾಧ್ಯಕ್ಷ ಸುಭಾಷಚಂದ್ರ ಪಾಟೀಲ, ಕೋಶಾಧ್ಯಕ್ಷ ಶಶಿಕಾಂತ ಶೀಲವಂತ ಮಾತನಾಡಿದರು. ನಿರ್ದೇಶಕರಾದ ಚಂದ್ರಕಾಂತ ಶೀಲವಂತ, ಸುರೇಖಾ ಎಸ್ ಶೀಲವಂತ, ವಿಶ್ರಾಂತ ಪ್ರಾಂಶುಪಾಲ ನಾಮದೇವ ಲಾತುರೆ ,ಉಪನ್ಯಾಸಕರಾದ ಮಹಾದೇವಿ ದಾಸುರೆ, ಶೈಲಜಾ ಬಿರಾದಾರ, ಸೂರ್ಯಕಾಂತ ರಾಜೋಳೆ, ಉಪಸ್ಥಿತರಿದ್ದರು. ಕು. ಪಾಯಲ ಯಲ್ಲಪ್ಪ ಪ್ರಾರ್ಥನೆ ಗೀತೆ ಹಾಡಿದರು. ಸಂಸ್ಥೆಯ ಕಾರ್ಯದರ್ಶಿ ಉಮಾಕಾಂತ ಶೀಲವಂತ ಸ್ವಾಗತಿಸಿದರೆ, ಕಲ್ಪನಾ ಬಿರಾದರ ನಿರೂಪಿದರು. ತುಕಾರಾಮ ವಂದಿಸಿದರು.