ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ- ಪ್ರಾಚಾರ್ಯರಿಗೆ ಬಿಳ್ಕೊಡುಗೆ ಕಾರ್ಯಕ್ರಮ

ಸಿರವಾರ ಸೆ೦೯:ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಹಾಗು ವರ್ಗಾವಣೆಯಾದ ಪ್ರಾಚಾರ್ಯರಿಗೆ ಬಿಳ್ಕೊಡುಗೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತು- ಸಮಯ ಪ್ರಜ್ಞೆ ಮುಖ್ಯ,ವಿದ್ಯಾರ್ಥಿಗಳು ಇವುಗಳ ಪಾಲನೆ ಮಾಡುವುದರ ಮೂಲಕ ಕಾಲೇಜಿಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತರುವಂತಹ ವ್ಯಕ್ತಿಗಳಾಗಬೇಕೆಂದು ಪತ್ರಕರ್ತ ಹಾಗು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ
ಅಧ್ಯಕ್ಷ ಸುರೇಶ ಹೀರಾ ಕರೆ ನೀಡಿದರು.
ವರ್ಗಾವಣೆಯಾದ ಪಂಪಾಪತಿ ಗುರುವಿನಮಠ ಅವರು ಬಿಳ್ಕೋಡುಗೆ ಸ್ವೀಕರಿಸಿ ಮಾತನಾಡಿ
ವಿದ್ಯಾರ್ಥಿಗಳ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಇನ್ನೊಬ್ಬರಿಗೆ ಮಾದರಿ ಆಗಬೇಕು. ಹೆಚ್ಚಿನ ಓದಿಗೆ ಸಮಯ ಮೀಸಲಾಗಿಸಿ, ಇಂದಿನ ಯುವಜನತೆ ಮೊಬೈಲ್ ಗೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರಗಳನ್ನು ಅರಿಯಬೇಕು, ಮಾಹಿತಿಗಾಗಿ ಮೊಬೈಲ್ ಬಳಸಿ, ಹೆಚ್ಚು ಪುಸ್ತಕ ಅಭ್ಯಾಸ ಮಾಡಿ. ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವುದೆ ಹೆಚ್ಚಾಗಿವೆ. ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು.
ನೂತನ ಪ್ರಾಚಾರ್ಯ ವೆಂಕಟೇಶ ಅವರಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು.
ಈ ವೇಳೆ ಸ.ಪ್ರ.ಕಾಲೇಜಿನ ಪ್ರಾಚಾರ್ಯರಾದ ಡಾ.ಪಾಂಡು ನಾಯ್ಕ, ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ರಾಜಶೇಖರ, ಫರೀದ್, ಬಸವಲಿಂಗಮ್ಮ, ಲಿಂಗರಾಜ, ಪತ್ರಕರ್ತ ವಿಜಯಕುಮಾರ್, ಸೇರಿದಂತೆ ವಿದ್ಯಾರ್ಥಿಗಳು ಇದ್ದರು. ಅತಿಥಿ ಉಪನ್ಯಾಸಕಿ ಚಂದ್ರಮತಿ ನಿರೂಪಣೆ ಮಾಡಿದರು, ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.