ಪಿಯುಸಿ ಮಧ್ಯಂತರ ಪರೀಕ್ಷೆಗೆ ನಮೋಶಿ ಆಕ್ಷೇಪ

ಕಲಬುರಗಿ:ನ.17: ಪದವಿ ಪೂರ್ವ ಶಿಕ್ಷಣ ಇಲಾಖೆ ಮಧ್ಯಂತರ ಪರೀಕ್ಷೆಯನ್ನು ಬೋರ್ಡ ನಿಂದಲೇ ನಡೆಸುವುದಾಗಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಸ್ಪಷ್ಟತೆ ಇಲ್ಲ. ಕೂಡಲೇ ಪರೀಕ್ಷೆ ಬಗ್ಗೆ ಸ್ಪಷ್ಟ ರೂಪುರೇಷೆ ನೀಡಬೇಕು ಎಂದು ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿಯ ಹಿರಿಯ ಮುಖಂಡ ಶಶಿಲ್ ಜಿ. ನಮೋಶಿ ಅವರು ಆಗ್ರಹಿಸಿದ್ದಾರೆ.
ಇದೆ ನವೆಂಬರ್ 29ರಿಂದ ದ್ವೀತೀಯ ಪಿಯುಸಿ ಮಧ್ಯಂತರ ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಪರೀಕ್ಷೆಯನ್ನು ಅಂತಿಮ ಪರೀಕ್ಷೆ ಎಂದು ಪರಿಗಣಿಸುವುದಾಗಿ ತಿಳಿಸಲಾಗಿದೆ. ಆದರೆ ಅಂತಿಮ ವರ್ಷದ ಪರೀಕ್ಷಾ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆಯಾ? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಇದರಿಂದ ಪಾಲಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂತಕ್ಕೆ ಒಳಗಾಗಿದ್ದಾರೆ.ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷೆಗೆ ಒಂದು ಪಾವಿತ್ರ್ಯತೆ ಇದೆ ಕರೋನಾ ಮೂರನೇ ಅಲೆ ಹೆಸರಲ್ಲಿ ಮಧ್ಯಂತರ ಪರೀಕ್ಷೆ ನಡೆಸಿ ಅದನ್ನು ಅಂತಿಮ ಪರೀಕ್ಷೆಗೆ ಪರಿಗಣಿಸುವುದಾಗಿ ಇಲಾಖೆ ಹೇಳಿದೆ. ಇದು ತೀವ್ರ ತರಾತುರಿ ನಿರ್ಧಾರವಾಗಿದೆ ಎಂದು ಅವರು ಹೇಳಿಕೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆಯನ್ನು ಅಚಿತಿಮ ಪರೀಕ್ಷೆ ಮಾದರಿಯಲ್ಲಿ ನಡೆಸಲಾಗುತ್ತದೆಯಾ? ಪ್ರಶ್ನೆ ಪತ್ರಿಕೆ ವಿತರಣೆ ಮಾದರಿ ಎಂಥದ್ದು? ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಅಂತಿಮ ಪರೀಕ್ಷೆ ಮಾದರಿ ಮಧ್ಯಂತರ ಪರೀಕ್ಷೆ ಮಾಡಲು ಈಗಿರುವ ತಯಾರಿ ಸಾಕಾಗಲ್ಲ. ಮೌಲ್ಯಮಾಪನ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕೆಲವಡೆ ಕಾಲೇಜ ಆರಂಭವಾಗಿದ್ದೆ ಈಗ ಅತಿಥಿ ಉಪನ್ಯಾಸಕರು ನೇಮಕಕ್ಕೆ ಸುತ್ತೋಲೆ ಹೊರಡಿಸಿದ್ದೆ ಈಚೆಗೆ ಈ ಮಧ್ಯೆ ಪರೀಕ್ಷೆ ನಡೆಸಲು ಹೊರಡಿಸಿದ್ದು ಅವೈಜ್ಞಾನಿಕವಾಗಿದೆ ಎಂದು ಅವರು ಕಟುವಾಗಿ ಟೀಕಿಸಿದ್ದಾರೆ.
ಸರ್ಕಾರದ ನಿಯಮಾವಳಿ ಪಡೆದು ಪರೀಕ್ಷಾ ನಿರ್ಧಾರ ತೆಗೆದುಕೊಳ್ಳಬೇಕು. ಆದಾಗ್ಯೂ, ಇಲ್ಲಿ ಆಗುತ್ತಿರುವುದೇನು? ತಜ್ಞರ ಕರೆದು ಸಮಾಲೋಚಿಸದೇ, ಉಪನ್ಯಾಸಕರ ಅಭಿಪ್ರಾಯ ಪಡೆಯದೇ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದರಲ್ಲದೇ ಕೂಡಲೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಮರ್ಪಕವಾದ ನಿರ್ಧಾರವನ್ನು ತೆಗೆದುಕೊಳ್ಳಲು ಶಿಕ್ಷಣ ಸಚಿವರಿಗೆ ನಮೋಶಿ ಅವರು ಒತ್ತಾಯಿಸಿದ್ದಾರೆ.