ಪಿಯುಸಿ ಪೂರಕ ಪರೀಕ್ಷಾ ಕೇಂದ್ರ ತೆರೆಯುವಂತೆ ಎಸ್‌ಎಫ್‌ಐ ಮನವಿ

ಸಿರವಾರ,ಏ.೨೭- ದ್ವಿತೀಯ ವರ್ಷದ ಪಿಯುಸಿ ವಾರ್ಷಿಕ ಪರೀಕ್ಷೆಯು ಸಿರವಾರ ಪರೀಕ್ಷಾ ಕೇಂದ್ರದಲ್ಲಿ ಜರುಗುವಂತೆ, ಪೂರಕ ಪರೀಕ್ಷೆಯು ಸಹ ಇಲಿಯೇ ಕೇಂದ್ರ ಪ್ರಾರಂಭಿಸುವ ಮೂಲಕ ವಿದ್ಯಾರ್ಥಿಗಳಿಗೆ ನೇರವಾಗ ಬೇಕು ಎಂದು ಒತ್ತಾಯಿಸಿ ಎಸ್.ಎಫ್.ಐ ಹಾಗೂ ಡಿ.ವೈ.ಎಫ್.ಐ ಸಂಘಟನೆಗಳು ಜಂಟಿಯಾಗಿ ತಹಶಿಲ್ದಾರರ ಮುಖಾಂತರ ಉಪ-ನಿರ್ದೇಶಕರು ಪದವಿ ಪೂರ್ವ ಮಹಾ ವಿದ್ಯಾಲಯ ಶಿಕ್ಷಣ ಇಲಾಖೆ ರಾಯಚೂರು ಮನವಿ ಪತ್ರವನ್ನು ನೀಡುವ ಮೂಲಕ ಒತ್ತಾಯಿಸಿದ್ದಾರೆ.
ಸಿರವಾರ ತಾಲೂಕು ಘೋಷಣೆಯಾಗಿ ೧೫ ವರ್ಷಗಳು ಕಳೆದರೂ ಕೂಡ ಮತ್ತು ಸಿರವಾರ ತಾಲ್ಲೂಕಿನಲ್ಲಿ ಐದು ಪಿಯುಸಿ ಕಾಲೇಜುಗಳಿದ್ದು ಒಟ್ಟು ೪೦೦ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪಿಯುಸಿ ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿದ್ಯಾರ್ಥಿಗಳು ಪೂರಕ ಪರೀಕ್ಷೆ ಬರೆಯಲು ೨೫ ಕಿ.ಮೀ. ದೂರದ ಮಾನವಿ ಪಟ್ಟಣಕ್ಕೆ ಹೋಗಿ ಪರೀಕ್ಷೆ ಬರೆಯುವ ಸಂದರ್ಭ ಬಂದೊದಗಿದೆ ಹಾಗೂ ಹಳ್ಳಿಗಳಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸಿನ ವ್ಯವಸ್ಥೆ ಇಲ್ಲದೆ ಇರುವುದರಿಂದ ಅನೇಕ ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ಹಾಜರಾಗದೆ ಪರೀಕ್ಷೆಯನ್ನು ಬಿಟ್ಟಿರುವ ಉದಾಹರಣೆಗಳು ಇದ್ದಾವೆ.
ಅದ್ದರಿಂದ ಈ ಕೂಡಲೇ ಸಿರವಾರ ತಾಲ್ಲೂಕಿನಲ್ಲಿ ಕಡ್ಡಯವಾಗಿ ಪಿಯುಸಿ ಪೂರಕ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿ ಪರೀಕ್ಷೆಯನ್ನು ನಡೆಸಿ ಹಳ್ಳಿಗಳಿಂದ ಬರುವಂತಹ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಳ್ಳುತ್ತೆವೆ.
ಈ ಸಂದರ್ಭದಲ್ಲಿ ಎಸ್.ಎಪ್.ಐ ಸಿರವಾರ ತಾಲೂಕು ಅಧ್ಯಕ್ಷ ಚಿದಾನಂದ.ಕರಿಗೂಳಿ ಚಾಗಭಾವಿ, ಯುವ ಮುಖಂಡರಾದ ಪರ್ವತ ರೆಡ್ಡಿ, ಅರುಣ್ ಕುಮಾರ್, ಜೆ.ಪ್ರಕಾಶ, ವಿರೇಶ ಸ್ವಾಮಿ ಜಂಬಲದಿನ್ನಿ, ಯಲ್ಲಪ್ಪ, ಹನುಮೇಶ ಭಜಂತ್ರಿ ಈ ಮುಂತಾದವರು ಉಪಸ್ಥಿತಿತರಿದ್ದರು.