ಪಿಯುಸಿ ಪರೀಕ್ಷೆ ರದ್ದು ಬಳ್ಳಾರಿ ಪೋರನ ಜೊತೆ ಪ್ರಧಾನಿ ಮೋದಿ ಸಂವಾದ

ಬಳ್ಳಾರಿ ಜೂ 05 : ಸಿಬಿಎಸ್‌ಇ ನ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ ವಿಷಯದ ಸಾಧಕ ಭಾದಕಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ನಗರದ ವಿದ್ಯಾರ್ಥಿ ಜೊತೆ ಮೊನ್ನೆ ವೀಡಿಯೋ ಸಂವಾದ ನಡೆಸಿದ್ದಾರೆ.
ಈ ವರ್ಷದ ದ್ವಿತೀಯ ಪರೀಕ್ಷೆಯನ್ನು ಕೇಂದ್ರ ಸರ್ಕಾರ ಜೂನ್ ಒಂದರಂದು ಕೋವಿಡ್ ಕಾರಣದಿಂದ ರದ್ದುಪಡಿಸಿದೆ. ಈ ಬಗ್ಗೆ ವಿದ್ಯಾರ್ಥಿಗಳ ಮನದಲ್ಲಿರುವ ಅನಿಸಿಕೆಗಳನ್ನು‌ ತಿಳಿಯಲು ದೇಶದ ವಿವಿಧಡೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ಇಟ್ಟುಕೊಂಡಿದ್ದರು.
ಇದರಲ್ಲಿ ಇಲ್ಲಿನ ತಿಲಕ್ ನಗರದ ನಿವಾಸಿ, ಬೆಂಗಳೂರಿನ‌ ಮಲ್ಲೇಶ್ವರಂನ ಕೇಂದ್ರೀಯ ವಿವಿಯಲ್ಲಿ ದ್ವಿತೀಯ ಪಿಯು ಓದುತ್ತಿರುವ ಅಭಿರಾಮ್ ಜೊತೆ ಮಾತನಾಡಿದರು.
ಅಭಿರಾಮ್ ನಗರದ ವಿಮ್ಸ್ ನ ವೈದ್ಯ ಡಾ.ಕೃಷ್ಣ ಅವರ ಪುತ್ರ. ಈ ವಿದ್ಯಾರ್ಥಿ ಎಸ್.ಎಸ್.ಎಲ್.ಸಿಯನ್ನು ಬಳ್ಳಾರಿಯಲ್ಲಿಯೇ ಅಭ್ಯಾಸ ಮಾಡಿ ದಕ್ಷಿಣ ಭಾರತಕ್ಕೆ ಮೊದಲ ಸ್ಥಾನ‌ ಪಡೆದಿದ್ದ. ಹಾಗಾಗಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಮೋದಿ ಸಂವಾದ ಮಾಡಿದರು. ಅಭಿರಾಮ್ ಮತ್ತು ಅವರ ತಾಯಿ ಜೊತೆನೂ ಮಾತನಾಡಿದರು.
ಕೋವಿಡ್ ಹಿನ್ನಲೆಯಲ್ಲಿ ಆರೋಗ್ಯದ ಮಹತ್ವ ತಿಳಿಸಿದ ಅವರು ಪರಿಸರ ದಿನಾಚರಣೆ ದಿನ ನಿಮ್ಮ ಮನೆ ಬಳಿ ನಾಲ್ಕು ಗಿಡ ನೆಟ್ಟು ಬೆಳಸಿ ಎಂದರು.
ಸ್ವಾತಂತ್ರೋತ್ಸವ ಕುರಿತು ಪ್ರಬಂಧ ಬರೆಯಲು ಸಹ ಹೇಳಿದರು.
ಮೋದಿ ಅವರು ”ನೀವು ಮನಸ್ಸು ಬಿಚ್ಚಿ ಮಾತನಾಡುತ್ತಿರುವುದು ಸಂತೋಷದಾಯಕವಾಗಿದೆ. ಓದುವುದರೊಂದಿಗೆ ಮತ್ತೆ ಯಾವ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೀರಿ? ಪರೀಕ್ಷೆಯ ಬಗ್ಗೆ ಯಾವುದೇ ಆತಂಕ, ಭಯ ಇಟ್ಟುಕೊಳ್ಳಬೇಡಿ. ಆರೋಗ್ಯದಿಂದ ಇರಿ ಎಂದರು
ಅಭಿರಾಮ್ ನ ಹವ್ಯಾಸಗಳ ಬಗ್ಗೆ ಕೇಳಿದಾಗ ದಿನಾಲು ಯೋಗಾಸನ‌ ಮಾಡುವುದು, ತಬಲಾ ಬಾರಿಸುವುದು ಮೊದಲಾದವುಗಳಿಂದ ಕೋವಿಡ್ ಲಾಕ್ ಡೌನ್ ನ ದಿನಗಳನ್ನು ಕಳೆಯುತ್ತಿದೆಂದರು.
ಪ್ರಧಾನಿ ಬಳ್ಳಾರಿ ವಿದ್ಯಾರ್ಥಿ ಜೊತೆ ಸಂವಾದ ಮಾಡಿದ್ದು, ಮತ್ತು ತಮ್ಮೊಂದಿಗೆ ಸಹ ಮಾತನಾಡಿದ್ದರ ಬಗ್ಗೆ ಅಭಿರಾಮ್ ಅವರ ತಾಯಿ ಪ್ರೀತಿ ಭಟ್ ಅವರಿಗೂ ಸಂತಸ ಮೂಡಿಸಿದೆ.