ಪಿಯುಸಿ ಪರೀಕ್ಷೆಯಲ್ಲಿ ಖೈರುನ್ನಿಸಾ ಬೇಗಂ ಸಾಧನೆ

ಕಲಬುರಗಿ,ಸೆ.24- ನೆರೆಯ ರಾಯಚೂರ ಜಿಲ್ಲೆಯ ಮುದಗಲ ಪಟ್ಟಣದ ಎಸಿಬಿ ಕಾಲೇಜಿನ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಖೈರುನ್ನಿಸಾ ಬೆಗಂ ತಂದೆ ಖಾದರಸಾಬ್ 600/556 ಅಂಕ ಪಡೆಯುವ ಮೂಲಕ (ಶೇ.93) ಸಾಧನೆ ಮಾಡಿದ್ದಾಳೆ.
ಮಹಾಮಾರಿ ಕೋವಿಡ್-19 (ಕೋರೊನಾ) ಸೋಂಕಿನ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ನಡೆಸದೇ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಿತ್ತು. ಈ ಫಲಿತಾಂಶದಿಂದ ತೃಪ್ತರಾಗದ ಖೈರುನ್ನೀಸಾ ಬೇಗಂ ಪರೀಕ್ಷೆಗೆ ಹಾಜರಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾಳೆ. ವಿದ್ಯಾರ್ಥಿಯ ತಂದೆ ಮುದಗಲ ಪೊಲೀಸ ಠಾಣೆಯಲ್ಲಿ ಮುಖ್ಯಪೆದೆಯಾಗಿ ಸೇವೆಸಲ್ಲಿಸುತಿದ್ದಾರೆ.
ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿ ಪರೀಕ್ಷೆ ಬರೆದು ತೃಪ್ತಿಕರವಾದ ಫಲಿತಾಂಶ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುವ ಖೈರುನ್ನಿಸಾ ಬೇಗಂ ಅವರಿಗೆ ಸಂಸ್ಥೆಯ ಅಧ್ಯಕ್ಷ ಮೊಹ್ಮದ ಸಾದೀಕ ಅಲಿ, ಆಡಳಿತಾಧಿಕಾರಿ ಇಫತ್ ಬೇಗಂ ಹಾಗೂ ಉಪನ್ಯಾಸಕರು, ಸಿಬ್ಬಂದಿಗಳು ಶುಭಹಾರೈಸಿ ಹರ್ಷ ವ್ಯಕ್ತಪಡಿಸಿದ್ದಾರೆ.