ಪಿಯುಸಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಹೆಚ್ಚು ಅಂಕ ಪಡೆದ ಐಶ್ವರ್ಯಗೆ ನಗದು ಬಹುಮಾನ ನೀಡಿ ಸನ್ಮಾನ

ಬೀದರ:ಏ.15:ನಗರದ ನೌಬಾದದಲ್ಲಿನ ದಲಿತ ಛಲವಾದಿ ಮಹಾ ಸಭಾ ಸಭಾಂಗಣದಲ್ಲಿ ಹಮ್ಮಿಕೊಂಡ ಡಾ. ಬಿ.ಆರ್ ಅಂಬೆಡ್ಕರ್ ಅವರ ಜಯಂತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲೆಗೆ ಪಿಯುಸಿ ಕಲಾ ವಿಭಾದಲ್ಲಿ ಬೀದರ ಜಿಲ್ಲೆಗೆ ಹೆಚ್ಚು ಅಂಕ ಪಡೆದು ಜಿಲ್ಲೆಯ ಕಿರ್ತಿ ಹೆಚ್ಚಸಿದ ಕೂಲಿ ಕಾರ್ಮಿಕರ ಮಗಳಾದ ಐಶ್ವರ್ಯ ರಮೇಶ ಅವರಿಗೆ ಛಲವಾದಿ ಮಹಾಸಭಾ ಅಧ್ಯಕ್ಷರಾದ ಪ್ರದೀಪ ಜಂಜೀರೆ ಅವರು ಸನ್ಮಾನಿಸಿ ನಗದು ಹಣ ರೂ. ಹತ್ತು ಸಾವೀರ ನೀಡಿ ಗೌರವಿಸಿದ್ದರು ಹಾಗೂ ಅವರ ಮುಂದಿನ ವಿಧ್ಯಾಭ್ಯಾಸಕ್ಕಾಗಿ ಕೂಡ ಸಹಾಯ ಸಹಕಾರ ನೀಡಲಾಗುವುದೆಂದು ಅವರು ಅಶ್ವಾಸನೆ ನೀಡಿದ್ದರು.
ಈ ಸಂದರ್ಭದಲ್ಲಿ ದೇವೆರಾಜ ಆರ್ಯ, ಸುಜೀತ ಬಡಿಗೇರ, ವೈಜಿನಾಥ ಸಾಗರ, ಪತ್ರಕರ್ತರಾದ ಪೃಥ್ವಿರಾಜ, ರ್ವಾನಿ ಮಂಗಲಪೇಟ ಹಾಗೂ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.