ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಶ್ವೇತಾಗೆ ಸನ್ಮಾನ

ಇಂಡಿ : ಜು.17:ಪಟ್ಟಣದ ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘದ ಶ್ರೀ ಶಾಂತೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಶ್ರೀಮತಿ ಶಾಲಿನಿ ಮಾಣಿಕಚಂದ ಜೋಶಿ ಮಹಿಳಾ ಪಪೂ ಕಾಲೇಜು ಇವರ ಸಂಯುಕ್ತಾಶ್ರಯದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶ್ವೇತಾ ಭೀಮಾಶಂಖರ ಬೈರಗೊಂಡ ಅವರನ್ನು ಈಚೆಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ವೇತಾ ಬೈರಗೊಂಡ, ಪ್ರತಿನಿತ್ಯ ಅಧ್ಯಾಯನವನ್ನು ಕಾಲೇಜಿನ ಉಪನ್ಯಾಸಕರ ಸಲಹೆಯಂತೆ ಮಾಡುತ್ತಿದ್ದೆ.ನಿಯಮಿತ ನಿರಂತರ ಅಧ್ಯಯನವೇ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಯಿತು.ಓದಿದ ಅಧ್ಯಾಯನವನ್ನು ತಪ್ಪದೆ ಬರವಣಿಗೆಯ ರೂಪದಲ್ಲಿ ಬರೆದು ಮನನ ಮಾಡಿಕೊಳ್ಳಬೇಕು.ಬರವಣಿಗೆ ಹಾಗೂ ಪ್ರಶ್ನೆ ಪತ್ರಿಕೆಗೆ ಉತ್ತರಿಸುವ ನಿಪುಣತೆ,ತಮ್ಮ ಗುರಿಗೆ ಸಹಾಯವಾಯಿತು ಎಂದು ಹೇಳಿದರು.ಆದ್ದರಿಂದ ನಿರಂತರ ಅಧ್ಯಾಯ ಮಾಡಿದರೆ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಉಪನ್ಯಾಸಕ ಆರ್.ಎಸ್.ಬಿರಾದಾರ, ಬಿ.ಜಿ.ಮಠ, ಪಂಡಿತ, ವಿಜಯಕುಮಾರ ರಾಠೋಡ,ಎಸ್.ಎಸ್.ಈರನಕೇರಿ, ಸತ್ಯಣ್ಣ ಹಡಪದ, ಆರ್.ಜಿ.ಪೂಜಾರಿ, ಆರ್.ಬಿ.ಅಂಗಡಿ, ಕೆ.ಎಚ್.ತೇಲಿ,ವಿ.ಎಂ.ಶಿಂದೆ, ಫರಾಹ ರಬಾನಿ,ಶೀತಲ ಪಂಡಿತ ಇತರರು ಸನ್ಮಾನ ಸಮಾರಂಭದಲ್ಲಿ ಇದ್ದರು.

ಪ್ರಾಚಾರ್ಯ ಎ.ಬಿ.ಪಾಟೀಲ, ಬಿ.ಎನ್.ಬಿರಾದಾರ ರಾಜ್ಯಕ್ಕೆ ಪಿಯುಸಿ ದ್ವಿತೀಯಾ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ಶ್ವೇತಾ ಭೀಮಾಶÀಂಖರ ಬೈರಗೊಂಡ ವಿದ್ಯಾರ್ಥಿನಿಗೆ ಸನ್ಮಾನಿಸಿದರು.

ಪ್ರಾಚಾರ್ಯ ಬಿ.ಎನ್.ರಾಠೋಡ ಅಧ್ಯಕ್ಷತೆ ವಹಿಸಿದ್ದರು.ವಿಜಯಕುಮಾರ ರಾಠೋಡ ಸ್ವಾಗತಿಸಿದರು.ಎಸ್.ಎಸ್.ಈರನಕೇರಿ ನಿರೂಪಿಸಿದರು,ಸತ್ಯಣ್ಣ ಹಡಪದ ವಂದಿಸಿದರು.