ಪಿಯುಸಿಯಲ್ಲಿ ಉತ್ಕøಷ್ಟ ಸಾಧನೆ ಮಾಡಿದ ಸರ್ವಜ್ಞ ಕಾಲೇಜು ವಿದ್ಯಾರ್ಥಿಗಳು

ಕಲಬುರಗಿ: ಎ.22:ನಗರದ ಸಾಯಿಮಂದಿರ ಹತ್ತಿರವಿರುವ ಸರ್ವಜ್ಞ ಕಾಲೇಜು, ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲರ ಆಶೀರ್ವಾದ ಮತ್ತು ಸ್ಫೂರ್ತಿಯ ಜೊತೆಗೆ ಶಿಕ್ಷಣ ತಜ್ಞ ಹಾಗೂ ಗಣಿತಶಾಸ್ತ್ರ ಉಪನ್ಯಾಸಕರಾದ ಸಂಸ್ಥಾಪಕರಾದ ಪೆÇ್ರ. ಚನ್ನಾರಡ್ಡಿ ಪಾಟೀಲರ ಹಾಗೂ “ಐಐಟಿ’ಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ ಮತ್ತು ಹಿರಿಯ ನುರಿತ ಉಪನ್ಯಾಸಕರ ನೇತೃತ್ವದಲ್ಲಿ ಉನ್ನತ ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ನೀಡಿ, ಪ್ರತಿ ವರ್ಷವೂ ಅತ್ಯುತ್ತಮ ಫಲಿತಾಂಶ ನೀಡುತ್ತಾ ಪ್ರಗತಿಯ ಕಡೆಗೆ ಸರ್ವಜ್ಞ ಕಾಲೇಜು ಸಾಗುತ್ತಿದೆ. ಅನೇಕ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಯಲ್ಲಿ ಕಡಿಮೆ ಅಂಕ ಪಡೆದರೂ ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದ್ದಾರೆ. ಈ ವರ್ಷವೂ ಕೂಡಾ 220ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಯಲ್ಲಿ ಕಡಿಮೆ ಅಂಕ ಪಡೆದೂ ಪಿಯುಸಿಯಲ್ಲಿ ಹೆಚ್ಚಿನ ಫಲಿತಾಂಶ ಗಳಿಸಿ ಅತ್ಯುತ್ತಮವಾದ ಸಾಧನೆ ಮಾಡಿದ್ದಾರೆ ಹಾಗೂ ಕನ್ನಡ ಮಾಧ್ಯಮದ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ವಿದ್ಯಾರ್ಥಿಗಳೂ ಕೂಡ ನಗರ ವಿದ್ಯಾರ್ಥಿಗಳೊಂದಿಗೆ ಪೈಪೆÇೀಟಿ ನೀಡಿ ಉತ್ತಮ ಅಂಕ ಗಳಿಸಿ ಉಜ್ವಲ ಭವಿಷ್ಯ ರೂಪಿಸಿಕೊಂಡು ಕುಟುಂಬಕ್ಕೆ ಆಸರೆಯಾಗುವ ಕನಸು ಕಟ್ಟಿದ್ದಾರೆ.

ವಿದ್ಯಾರ್ಥಿ ವಿಷ್ಣು ತಂದೆ ಸಿದ್ಧಣ್ಣಾ 575 ಅಂಕಗಳು ಪಡೆದು 95.83% ಪ್ರತಿಷತ ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದು, ಇವನು ಎಸ್.ಎಸ್.ಎಲ್.ಸಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ 77.76% ಪಡೆದಿದ್ದನು. ಇತನಿಗೆ ಮೊದ ಮೊದಲು ಸೈನ್ಸ್ ಕಷ್ಟ ಎನಿಸಿದರೂ, ನ್ಯಾಯಮೂರ್ತಿ ಡಾ. ಶಿವರಾಜ ಪಾಟೀಲರ ಸಾಧನೆಯಿಂದ ಪ್ರೇರಣೆ ಪಡೆದು ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಸತತ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಈ ಸಾಧನೆಯನ್ನು ಮಾಡಿದ್ದು ಹೆಮ್ಮೆ.

ಕುಮಾರಿ ಸಲೋನಿ ತಂದೆ ಶ್ಯಾಮ ಜಾಧವ 572 ಅಂಕ ಅಂದರೆ 95.33% ಪಡೆದು ದ್ವಿತೀಯ ಸ್ಥಾನ ಪಡೆದ ಇವಳು ಎಸ್.ಎಸ್.ಎಲ್.ಸಿ ಯಲ್ಲಿ 83.88% ಪಡೆದಿದ್ದಳು, ಭಾವನಾ ಪಾಟೀಲ 571 ಅಂಕ ಅಂದರೆ 95.17% ಪಡೆದು ತೃತೀಯ ಸ್ಥಾನ ಪಡೆದು ಕಾಲೇಜಿಗೆ ಮತ್ತು ಪಾಲಕರಿಗೆ ಕೀರ್ತಿ ತಂದಿದ್ದಾರೆ.

ಈ ರೀತಿ 220ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಗಿಂತಲೂ ಪಿಯುಸಿಯಲ್ಲಿ ಹೆಚ್ಚಿನ ಅಂಕಗಳು ಪಡೆಯುವ ಮೂಲಕ ಸರ್ವಜ್ಞ ಕಾಲೇಜಿನ ಸಾಧನೆಗೆ ತಮ್ಮ ಯಶೋಮಾಲೇ ತೊಡಿಸಿ ಇತಿಹಾಸ ಪುನಃ ಸೃಷ್ಠಿ ಮಾಡಿದ್ದಾರೆ. ಈ ಫಲಿತಾಂಶ ಕಾಲೇಜಿನ ಉಪನ್ಯಾಸಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸಂಭ್ರಮಕ್ಕೆ ಕಾರಣವಾಯಿತು.

122 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ (ಡಿಸ್ಟಿಂಕ್ಷನ್) ಪಡೆದಿದ್ದಾರೆ, 192 ವಿದ್ಯಾರ್ಥಿಗಳು ಪಿಸಿಎಂಬಿಯಲ್ಲಿ ಪಡೆದಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥಾಪಕರಾದ ಪೆÇ್ರ. ಚನ್ನಾರಡ್ಡಿ ಪಾಟೀಲ, ಅಧ್ಯಕ್ಷರಾದ ಶ್ರೀಮತಿ ಗೀತಾ ಚನ್ನಾರಡ್ಡಿ ಪಾಟೀಲರು, ಮುಖ್ಯ ಶೈಕ್ಷಣಿಕ ನಿರ್ದೇಶಕರಾದ ಐಐಟಿ’ಯನ್ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ಪ್ರಾಂಶುಪಾಲರಾದ ಎಂ.ಸಿ. ಕಿರೇದಳ್ಳಿ, ಶ್ರೀ ಪ್ರಭುಗೌಡ ಸಿದ್ದಾರೆಡ್ಡಿ, ವಿನುತಾ ಆರ್.ಬಿ., ಉಪಪ್ರಾಂಶುಪಾಲರಾದ ಪ್ರಶಾಂತ ಕುಲಕರ್ಣಿ, ಕರುಣೇಶ್ ಹಿರೇಮಠ್, ಲಕ್ಷ್ಮೀ ಕುಲಕರ್ಣಿ, ಕಾಂಚನಮಾಲಾ ದೇಶಪಾಂಡೆ, ಗುರುರಾಜ ಕುಲಕರ್ಣಿ ಮತ್ತು ಎಲ್ಲಾ ಬೋಧಕ, ಬೋಧಕೇತರರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.