ಪಿತ್ತದ ಗಂಧಿಗೆ ಮನೆಮದ್ದು

೧. ದೊಡ್ಡಪತ್ರೆ ಗಿಡದ ಎಲೆಯ ರಸವನ್ನು ಸೇವಿಸಿ, ಹಾಗೂ ಎಲೆಯ ಕಲ್ಕವನ್ನು ಗಂಧೆಯ ಮೇಲೆ ಲೇಪಿಸಿ. ಇದರಿಂದ ಗಂಧೆ ಹಾಗೂ ಅದರಿಂದ ಉಂಟಾಗುವ ನೆವೆ ಎರಡೂ ಕಡಿಮೆ ಆಗುತ್ತದೆ.
೨. ಕಡಲೆಕಾಯಿ ಜಾಸ್ತಿ ತಿಂದಾಗ ಅಥವಾ ಪಿತ್ತದ ಅಂಶ ಶರೀರದಲ್ಲಿ ಜಾಸ್ತಿ ಆದಾಗ ಏಳುವ ಕೆಂಪು ಗಂಧೆಗಳಿಗೆ ಹಾಗಲಕಾಯಿ ಎಲೆಯ ರಸವನ್ನು ಲೇಪಿಸುವುದರಿಂದ ಬೇಗ ಗುಣಮುಖವಾಗುತ್ತದೆ.ಅದೇ ಸಮಯದಲ್ಲಿ ರಸವನ್ನು ಹೊಟ್ಟೆಗೂ ಸೇವಿಸುವುದರಿಂದ ಶೀಘ್ರವಾಗಿ ಗುಣಮುಖರಾಗಬಹುದು.
೩. ಬಿಲ್ವಪತ್ರೆಯ ರಸವನ್ನು ಜೇನ್ನುತುಪ್ಪ ಸೇರಿಸಿ ಸೇವಿಸಿ. ದಿನಕ್ಕೆ ೨ ಬಾರಿ (೩ ದಿನಗಳು).
೪.ಕಬ್ಬಿನಗಿಡದ ಬೇರನ್ನು ಸುಟ್ಟುಭಸ್ಮಮಾಡಿ ಆ ಬೂದಿಯನ್ನು ಜರಡಿ ಹಿಡಿದು ನುಣುಪಾದ ಪುಡಿ ಮಾಡಿಟ್ಟುಕೊಂಡು ಇದನ್ನು ಕೊಬ್ಬರಿ ಎಣ್ಣೆಯಲ್ಲಿ ಕಲಸಿ ಪಿತ್ತದ ಗಂಧೆಗಳ ಮೇಲೆ ಲೇಪನವನ್ನು ಮಾಡಿ.
೫. ಗರಿಕೆಯ ರಸವನ್ನು ನೊರೆ ಹಾಲಿನೊಡನೆ ಖಾಲಿಹೊಟ್ಟೆಯಲ್ಲಿ ನೆಕ್ಕಿದರೆ ಪಿತ್ತದ ಗಂಧೆ ಕಡಿಮೆಯಾಗುತ್ತದೆ.
೬. ಗುಲಾಬಿ ಹೂವಿನ ರೇಕುಗಳನ್ನು ನುಣ್ಣಗೆ ರುಬ್ಬಿಕೊಂಡು ಇದನ್ನು ಪಿತ್ತದ ಗಂಧೆಗಳ ಮೇಲೆ ಲೇಪಿಸುವುದರಿಂದ ಗುಣವಾಗುತ್ತದೆ.
೭. ಸಾಸಿವೆ ಎಣ್ಣೆ ಹಾಗೂ ಬೇವಿನ ಎಣ್ಣೆಯನ್ನು ಮಿಶ್ರ ಮಾಡಿ ಹಗುರವಾಗಿ ಮಾಲೀಷ್ ಮಾಡುವುದರಿಂದ ಪಿತ್ತದ ಗಂಧೆ ಕ್ರಮೆಣ ಗುಣವಾಗುತ್ತದೆ.
೮. ಹಸಿ ಶಂಠಿರಸ ೨ ಚಮಚ, ನಿಂಬೆರಸ ೨ ಚಮಚ ,೧ ಚಮಚ ಜೇನುತುಪ್ಪಮೂರುನ್ನು ಮಿಶ್ರ ಮಾಡಿಟ್ಟುಕೊಂಡು ೨ ಗಂಟೆಗೊಮ್ಮೆ ೧ ಚಮಚದಂತೆ ಕೆಲವು ಬಾರಿ ಸೇವಿಸುವುದರಿಂದ ಪಿತ್ತದ ಗಂಧೆ ಕ್ರಮೇಣ ಕಡಿಮೆಯಾಗುತ್ತದೆ.
೯.ಅರಳೀ ಎಲೆಯನ್ನು ಸುಟ್ಟುಭಸ್ಮಮಾಡಿ ಆ ಭಸ್ಮವನ್ನು ಬೇವಿನ ಎಣ್ಣೆ ಅಥವಾ ಕೊಬ್ಬರಿಎಣ್ಣೆಯಲ್ಲಿಕಲಸಿ ಹಚ್ಚುವುದರಿಂದ ಪಿತ್ತದ ಗಂಧೆ ಗುಣವಾಗುತ್ತದೆ.

೧. ಗೌರಮ್ಮನ ಆರೋಗ್ಯ ಸೂತ್ರಗಳು ಪ್ರಿಸ್ಮ್ ಬುಕ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಪ್ರಕಟಣೆ
೨. ಡಾ. ಗೌರಿ ಸುಬ್ರಮಣ್ಯ ಆಯುರ್ವೇದ ತಜ್ಞರು ಮತ್ತು ಧರ್ಮದರ್ಶಿಗಳು ಮುಕ್ತಿನಾಗ ದೇವಸ್ಥಾನ ಫೋನ್ ನಂ. ೯೫೩೫೩೮೩೯೨೧