ಪಿತ್ತಕ್ಕೆ ಮನೆಮದ್ದು

ಸಾಮಾನ್ಯವಾಗಿ ದೇಹದಲ್ಲಿ ಅಧಿಕ ಉಷ್ಣತೆಯಿಂದ ಈ ರೀತಿಯ ಪಿತ್ತ ಉಂಟಾಗುತ್ತದೆ. ಆದ್ದರಿಂದ ರಾತ್ರಿ ಊಟ ಮಾಡಿ ೩-೪ ಗಂಟೆಗಳ ನಂತರ ಮಲಗುವ ಅಭ್ಯಾಸ ಒಳ್ಳೆಯದು.

ಪಿತ್ತವನ್ನು ತಡೆಯಲು ಕಡಿಮೆ ಕೊಬ್ಬಿನ ಆಹಾರವನ್ನು ರಾತ್ರಿಗೆ ಸೇವಿಸುವುದು ಒಳ್ಳೆಯದು.

ಅಧಿಕ ಎಣ್ಣೆ ಮತ್ತು ಖಾರದ ಪದಾರ್ಥಗಳನ್ನು ರಾತ್ರಿ ಊಟದಲ್ಲಿ ಸೇವಿಸಬಾರದು. ಇಂತಹ ಆಹಾರಗಳ ಸೇವನೆ ಪಿತ್ತವನ್ನು ಹೆಚ್ಚು ಮಾಡುತ್ತದೆ.

ಪಿತ್ತ ಕಾಯಿಲೆ ಇರುವರು ಜ್ಯೂಸ್ ಸೇವನೆ ಮಾಡುವುದು ಒಳ್ಳೆಯದಲ್ಲ, ನಿಂಬೆ ಜ್ಯೂಸ್ ನಲ್ಲಿರುವ ಸಿಟ್ರಿಕ್ ಅಂಶ ಪಿತ್ತವನ್ನು ಹೆಚ್ಚು ಮಾಡುತ್ತದೆ. ಅಲ್ಲದೆ ಈ ಕಾಯಿಲೆ ಇರುವಾಗ ಮದ್ಯ ಸೇವನೆ ಮಾಡಿದರೆ ಅದರಿಂದ ಅಪಾಯ ಖಂಡಿತ.

ಪಿತ್ತ ಕಾಯಿಲೆ ಇರುವರು ಕಾಫಿ, ಚಾಕಲೇಟ್, ಟೊಮೆಟೊ, ಪುದೀನ, ಸಿಟ್ರಸ್, ಸೋಡಾ ಮತ್ತು ಕೊಬ್ಬಿನ ಪದಾರ್ಥಗಳನ್ನು ಸೇವಿಸಬಾರದು.

ರಾತ್ರಿ ಊಟವಾದ ಬಳಿಕ ಸ್ವಲ್ಪ ದೂರ ನಡೆಯುವ ಅಭ್ಯಾಸ ಆಹಾರವನ್ನು ಬೇಗನೆ ಜೀರ್ಣವಾಗುವಂತೆ ಮಾಡುತ್ತದೆ.

ಪ್ರತಿ ನಿತ್ಯ ವ್ಯಾಯಾಮ ಸಹ ಈ ಕಾಯಿಲೆ ಹೋಗಲಾಡಿಸಲು ತುಂಬಾನೆ ಒಳ್ಳೆಯದು.

ಮಲಗುವ ಮೊದಲು ಬಿಸಿ ನೀರು ಕುಡಿಯುವುದು ಈ ಕಾಯಿಲೆ ನಿವಾರಣೆಗೆ ಒಳ್ಳೆಯದು.