ಪಿಡ್ಲ್ಯೂಡಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಇದು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.30: ರಸ್ತೆ ಮೇಲೆ ಮಳೆ‌ನೀರು ನಿಲ್ಲದಂತೆ ಡಾಂಬರ್ ರಸ್ತೆ ಮಾಡುವ ತಂತ್ರಜ್ಞಾನ ಪಿಡಬ್ಲುಡಿ ಇಲಾಖೆಯದ್ದು. ಆದರೆ ಇದೇ ಇಲಾಖೆ ನಗರದ ಸತ್ಯನಸರಾಯಣ ಪೇಟೆಯ ಮೊದಲ ಕ್ರಾಸ್ ರಸ್ತೆಯಲ್ಲಿ ಕೋಟಿ ರೂಗಳ ವೆಚ್ಚದಲ್ಲಿ ಅಭಿವೃದ್ಧಿ ಪಡೆಸಿದ್ದರೂ, ನಿನ್ನೆ ರಾತ್ರಿ ಬಿದ್ದ ಮಳೆ ನೀರು ರಸ್ತೆಯಲ್ಲೇ ನಿಂತಿದೆ.
ಮಳೆ ನೀರು ರಸ್ತೆಯಿಂದ ಸರಾಗವಾಗಿ ಹರಿದು ಹೋಗುವಂತೆ ಮಾಡದಿರಯವುದರಿಂದ ಮತ್ತೊಂದು ಎರೆಡು ಮಳೆ ಬಂದರೆ ಈ ರೀತಿ ನೀರು ನಿಂತು ರಸ್ತೆಯಲ್ಲಿ ಗುಂಡಿ ಬೀಳುತ್ತೆ. ಮತ್ತೆ  ಜನರಿಗರ ಅದೇ ಹಾಳಾದ ರಸ್ತೆಯ ದರ್ಶನ.
ಗುಂಡಿ ಮುಚ್ಚಲ್ಲ ನೆಮ್ಮದಿಯ ಸಂಚಾರಕ್ಕೆ ಅವಕಾಶ ಇರಲ್ಲ.
ನೀರು ರಸ್ತೆ ಪಕ್ಷದ ಚರಂಡಿಗೆ ಹೋಗುವಂತೆ ಸೂಕ್ತವಾಗಿ ಮಾಡದಿರುವುದೇ ಇದಕ್ಕೆ ಕಾರಣ ಎನ್ನಬಹುದು. ಈ ರೀತಿ ಸಮಸ್ಯೆ ಆಗುತ್ತೆ ಎಂದು ರಸ್ತೆ ನಿರ್ಮಾಣ ಮಾಡಿದಾಗಲೇ  ಸಂಜೆವಾಣಿಯಲ್ಲಿ ಮಳೆ ಬಂದರೆ ಸಮಸ್ಯೆ ಆಗುತ್ತೆ ಎಂದು ವರದಿ ಮಾಡಿತ್ತು. ಸಾಮಾಜಿಕ ಕಾರ್ಯಕರ್ತರು ದೂರಿದ್ದರು.
ಆದರೂ ಅಧಿಕಾರಿಗಳು ಮಾತ್ರ ತಪ್ಪನ್ನು ಸರಿಪಡಿಸದೇ ನಿರ್ಲಕ್ಷ್ಯ ಧೋರಣೆ ತಳೆದು ಕಾಮಗಾರಿ ಮಾಡಿ ಮುಗಿಸಿದ್ದಾರೆ.
ಸಾರ್ವಜನಿಕರು ತೆರಿಗೆ ಕಟ್ಟಿರುವ  ಹಣ ದಿಂದ ಮಾಡುವ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಅಂದರೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ ಜನತೆ.
ಈಗಲಾದರೂ ಮಳೆ ನೀರು ನಿಲ್ಲುವ ಕಡೆ ಆಗುವ ಸಮಸ್ಯೆಯನ್ನು ಅಧಿಕಾರಿಗಳು ಸರಿಪಡಿಸಬೇಕಿದೆ.