ಪಿಡಿಓ ಹಾಗೂ ಬಿಲ್ ಕಲೆಕ್ಟರ್‍ಗಳಿಗೆ ಪಿಓಎಸ್ ತರಬೇತಿ

ಚಿತ್ರದುರ್ಗ.ಜೂ.೨೮;   ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿಯಲ್ಲಿ ಪಾದರ್ಶಕತೆ ತರುವ ಸಲುವಾಗಿ ಹಾಗೂ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಗ್ರಾಮ ಪಂಚಾಯತಿ ಪಿಡಿಓ ಹಾಗೂ ಬಿಲ್ ಕಲೆಕ್ಟರ್‍ಗಳಿಗೆ ಪಿಓಎಸ್ ತರಬೇತಿಯನ್ನು ಚಿತ್ರದುರ್ಗ ಜಿಲ್ಲಾ ಪಂಚಾಯತಿ ವತಿಯಿಂದ ಆಯೋಜಿಸಲಾಗಿತ್ತು. ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಜರುಗಿದ ತರಬೇತಿ ಕಾರ್ಯಗಾರವನ್ನು ಸಿಇಓ ಎಂ.ಎಸ್.ದಿವಾಕರ್ ಉದ್ಘಾಟಿಸಿದರು. ತೆರಿಗೆ ಸೇರಿದಂತೆ ಇತರೆ ಫೀಜುಗಳನ್ನು ವಸೂಲು ಮಾಡಲು ಆಡ್ರಾಂಯ್ಡ್ ಪಿಓಎಸ್ ಉಪಕರಣವನ್ನು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತಿಗಳಿಗೆ ಆಕ್ಸಿಸ್ ಬ್ಯಾಂಕ್ ವತಿಯಿಂದ ನೀಡಲಾಗಿದೆ. ಕಾರ್ಯಗಾರದಲ್ಲಿ ಜಿ.ಪಂ. ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಉಪಸ್ಥಿತರಿದ್ದರು.