
ರಾಯಚೂರು,ಫೆ.೨೭ – ಧಡೇಸೂಗೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ೧೪ ಮತ್ತು ೧೫ನೇ ಹಣಕಾಸು ಯೋಜನೆಯಲ್ಲಿ ಪ್ರಶ್ನಾರ್ಥಕ ಚಿಹ್ನೆ ಬಳಸಿ ಬೊಗಸ್ ಬಿಲ್ಲು ಮಾಡಿರುವ ಹಿನ್ನಲೆ ಲೋಕಾಯುಕ್ತದಲ್ಲಿ ಕೇಸು ದಾಖಲೆ ಮಾಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶೇಖರ ಪಲ್ಲೇದ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಧಡೇಸೂಗೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ವಾಜೇಂದ್ರ ಆಚಾರ್ಯ ವಿರುದ್ದ ಈಗಾಗಲೇ ಲೋಕಾಯುಕ್ತದಲ್ಲಿ ಕೇಸ್ ದಾಖಲಾಗಿದ್ದು, ಪ್ರತಿಯನ್ನು ಸಿಂಧನೂರು ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗೆ ತಲುಪಿಸಿದ್ದು, ೬೦- ೭೦ ಲಕ್ಷ ಪ್ರಶ್ನಾರ್ಥಕ ಚಿಹ್ನೆ ಬಳಸಿ, ಬ್ರಷ್ಟಾಚಾರ ಮಾಡಿದ್ದಾರೆ. ತನಿಖೆ ಹಂತದಲ್ಲಿದ್ದರು ಸಹ ಮೇಲಾಧಿಕಾರಿಗಳು ಆ ಅಧಿಕಾರಿಗೆ ಸ್ವಯಂ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆ ಅಧಿಕಾರಿಯನ್ನು ಸ್ವಯಂ ನಿವೃತ್ತಿಯಿಂದ ಬಿಡುಗಡೆಗೊಳಿಸಬಾರದು ಒಂದು ವೇಳೆ ಬಿಡುಗಡೆಗೊಳಿಸಿದರೆ ಜಿಲ್ಲಾ ಪಂಚಾಯತ ಕಾರ್ಯಾಲಯದ ಮುಂದೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರಾಘವೇಂದ್ರ,ವೀರೇಶ ನಾಯಕ ಇದ್ದರು.