ಪಿಡಿಓ ನಿರ್ಲಕ್ಷ್ಯ: ರಸ್ತೆಗೆ ಚರಂಡಿ ನೀರು ತೊಂದರೆ

ಗಬ್ಬೂರು.ನ.09- ದೇವದುರ್ಗ ತಾಲೂಕಿನ ಹೀರೆಬೂದುರು ಗ್ರಾಮ ಪಂಚಾಯಿತಿ ವಾಪ್ತಿಗೆ ಬರುವ ಬೂದಿನಾಳ ಎಸ್ಸಿ, ಎಸ್ಟಿ, ಒಣಿಗಳಲ್ಲಿ ಮತ್ತು ಮಾರೆಮ್ಮ ದೇವಸ್ಥಾನ ಪಕ್ಕದ ಮನೆ ಮುಂದೆ ಚರಂಡಿ ನೀರು ರಸ್ತೆ ಮೇಲೆ ಹರಿಯುವುದಲ್ಲದೆ ಅಲ್ಲಲ್ಲಿ ಸಂಗ್ರಹವಾಗುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.ಗ್ರಾಮದ ಮುಖ್ಯ ರಸ್ತೆಯನ್ನು ಸಿ.ಸಿ ರಸ್ತೆಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದರೂ ಸಹ ಸಂಬಂಧಿಸಿದ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ಚರಂಡಿ ನೀರು ರಸ್ತೆಗೆ ಹರಿಯುವಂತಾಗಿದೆ. ಹೀರೆಬೂದುರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್ ಅವರಿಗೆ ಸಾಕಷ್ಟು ಬಾರಿ ಮನವಿ ಮಾಡಿದರು. ಯಾವುದೇ ಪ್ರಯೋಜನವಾಗಿಲ್ಲ. ಚಂರಡಿ ನೀರು ರಸ್ತೆ ಮೇಲೆ ಮಲಿನವಾಗಿ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳ ತಾಣವಾಗುತ್ತಿದೆ ಎಂದು ಮಲ್ಲಿಕಾರ್ಜುನ, ಮರಿಲಿಂಗ, ಯಲ್ಲಮ್ಮ, ಶಶಿರೇಖಾ, ಮಾರೆಮ್ಮ, ಲಕ್ಷ್ಮೀ, ಪಿಡಿಓ ವಿರುದ್ಧ ಕಿಡಿಕಾರಿದರು.