ಪಿಡಿಓ ನಿರ್ಲಕ್ಷ್ಯ: ಕೆಸರು ಗದ್ದೆ ತಿರುಗಾಡಲು ತೊಂದರೆ

ಗಬ್ಬೂರು,ಜು.೧೯- ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮ ಪಂಚಾಯತಿಯ ಗ್ರಾಮದ ಎಸ್ಸಿ, ಎಸ್ಟಿ ಕಾಲೋನಿ ಹಾಗೂ ನಾಲ್ಕನೇ ವಾರ್ಡ್ ಜನತಾ ರಸ್ತೆಯ ಮೇಲೆ ಚರಂಡಿ ನೀರು ನಿಂತು ಮನೆಗಳಿಗೆ ತೆರಳಲು ಆಗುತ್ತಿಲ್ಲ ಈ ಕೊಳಚೆ ಚರಂಡಿ ನೀರು ದುರ್ವಾಸನೆಯಿಂದ ಜನರಿಗೆ ಊಟ ಸೇರದೆ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಮನೆಗಳಿಗೆ ತೆರಳಬೇಕಾದರೆ ಮೈತುಂಬ ಕೆಸರು ಮಾಡಿಕೊಂಡು ಹೋಗುವಂತಹ ಪರಿಸ್ಥಿತಿ ಉಂಟಾಗಿದೆ ಇದರಿಂದ ಗ್ರಾಮದ ಜನರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಾರೆ, ಮನೆಯ ಮುಂದೆ ಚರಂಡಿ ನೀರು ಮತ್ತು ಮಳೆಯ ನೀರು ನಿಂತು ಮನೆಗಳು ತೆವಿನಾಂಶ ಹಿಡಿದಿವೆ ಇದ್ದರಿಂದಾಗಿ ಮನೆಗಳು ಬೀಳುವ ಸ್ಥಿತಿಯಲ್ಲಿ ಇವೆ, ಮನೆಯ ಮುಂದೆ ನೀರು ಯಾವುದೇ ಕಡೆ ಹರಿಯಲು ಜನರು ಸಹಕರಿಸದ ಹಿನ್ನಲೆಯಲ್ಲಿ ಚರಂಡಿ ನೀರು ರಸ್ತೆ ಮೇಲೆ ನಿಂತು ಮಲೀನವಾಗಿ ಸೊಳ್ಳೆಗಳು ಜಾಸ್ತಿಯಾಗಿರುವುದರಿಂದ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದು ಹಾಗೂ ಜನರಿಗೆ ಕೆಟ್ಟ ವಾಸನೆ ಬರುತ್ತಿದ್ದು ಊಟ ಮಾಡಲು ಕೂಡಾ ಆಗುತ್ತಿಲ್ಲ.
ಈ ಸಮಸ್ಯೆ ಕುರಿತು ಮಸರಕಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪೈಯಜ್ ಸೈಯದ್ ಅಲಿ ಅವರಿಗೆ ಮಾಹಿತಿ ನೀಡಿದರೂ, ಏನೂ ಪ್ರಯೋಜನವಿಲ್ಲ ಮಸರಕಲ್ ಗ್ರಾಮ ಮೂಲಭೂತ ಸೌಕರ್ಯಗಳಿಂದ ವಂಚಿತ ಗ್ರಾಮವಾಗಿದೆ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಗ್ರಾಮದ ನಿವಾಸಿಗಳು ಒತ್ತಾಯಿಸಿದರು.
ಕೊಳವೆ ನೀರು ಮತ್ತು ಚರಂಡಿ ನೀರು ಮಿಶ್ರಿತಗೊಂಡು ಬರುವ ನೀರನ್ನು ಕುಡಿಯುವುದ್ದರಿಂದ ಜನರಿಗೆ ಅನೇಕ ರೋಗ ರುಜಿನಿಗಳು ಬರುತ್ತಿವೆ ಎಂದು ದೂರಿದರು. ಊರು ಒಳಗಿನ ರಸ್ತೆಗಳಿಗೆ ತೆರಳಲು ಕೇಸರು ಗದ್ದೆ ನೋಡಿ ವಾಪಸು ಬರುವಂತ ಪರಿಸ್ಥಿತಿ ಗ್ರಾಮದಲ್ಲಿ ನಿರ್ಮಾಣವಾಗಿದ್ದು, ಗ್ರಾಮದ ಕೆಲ ರಸ್ತೆಗಳಲ್ಲಿ ವಾಹನ ಸವಾರರು ಹರಸಾಹಸ ಮಾಡಿಕೊಂಡು ರಸ್ತೆ ದಾಟಿದ ಬಳಿಕ ಮೈತುಂಬ ಕೇಸರು ಮಾಡಿಕೊಳ್ಳುವಂತಹ ದುಸ್ಥಿತಿ ಗ್ರಾಮದ ಜನರಿಗೆ ಎದುರಾಗಿದೆ.
ಸಾಕಷ್ಟು ಜನರು ಈ ಕೆಸರಿನಲ್ಲಿ ಬಿದ್ದು ಗಾಯಮಾಡಿ ಕೊಂಡಿರುವ ಉದಾಹರಣೆಗಳು ಇವೆ ಎಂದು ಗ್ರಾಮಸ್ಥರು ಆರೋಪಿಸಿದರು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೈಯಜ್ ಸೈಯದ್ ಅಲಿ ಅವರು ಗ್ರಾಮದ ಕೆಸರು ಗದ್ದೆಯಾದ ಕೆಲವು ವಾರ್ಡ್‌ಗಳನ್ನು ನೋಡದೆ ದಿವ್ಯ ನಿರ್ಲಕ್ಷ್ಯದಿಂದ ಗಾಡ ನಿದ್ರೆಯಲ್ಲಿ ಜಾರಿದ್ದಾರೆ ಎಂದು ಜನರು ಗ್ರಾಮದಲ್ಲಿ ಮಾತನಾಡುತ್ತಿದ್ದಾರೆ.
ಜನರು ಮಾತ್ರ ತೊಂದರೆಯಲ್ಲೇ ಕಾಲಕಳೆಯುವ ದುಸ್ಥಿತಿ ಬರುತ್ತದೆ ಎನ್ನುವುದಕ್ಕೆ ದೇವದುರ್ಗ ತಾಲೂಕಿನ ಮಸರಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಗ್ರಾಮದ ಪರಿಸ್ಥಿತಿಯೇ ಸಾಕ್ಷಿಯಾಗಿದೆ.
ಗ್ರಾಮದಲ್ಲಿನ ಸಮಸ್ಯೆ ಬಗ್ಗೆ ಪಂಚಾಯಿತಿ ಗಮನಕ್ಕೆ ತಂದಾರೂ ಯಾರೊಬ್ಬರೂ ಗಮನ ಹರಿಸುತ್ತಿಲ್ಲ ಎನ್ನುವ ಮಾತುಗಳು ಗ್ರಾಮಸ್ಥರಲ್ಲಿ ಕೇಳಿ ಬರುತ್ತಿವೆ.
ಮಳೆಗಾಲವಾದ್ದರಿಂದ ಕಲುಶಿತ ನೀರು, ಮಳೆಯ ನೀರು ಸೇರಿಕೊಂಡು ಊರು-ಕೇರಿಗಳಲ್ಲಿ ಗಲೀಜು ಆವರಿಸುತ್ತಿದೆ.
ಊರಿನ ಗ್ರಾಮ ಪ್ರದೇಶದ ಮುಖ್ಯ ರಸ್ತೆಯಾಗಿದ್ದರಿಂದ ಎಲ್ಲಾರು ಇದೇ ರಸ್ತೆ ಮೂಲಕ ಓಡಾಡಬೇಕು, ರಸ್ತೆಯಲ್ಲಿನ ಚರಂಡಿ ನೀರು ತುಳಿದು ಮನೆಗೆ ಹೋಗುವುದ್ದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುವುದಲ್ಲದೆ ದುರ್ವಾಸನೆಗೆ ಹತ್ತಿರದ ಮನೆಗಳಲ್ಲಿ ವಾಸಮಾಡುವವರಿಗೆ ಪ್ರಾಣ ಸಂಕಟ ಏದುರಾಗಿದೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ತುರ್ತಾಗಿ ಕ್ರಮಕ್ಕೆ ಮುಂದಾಗಬೇಕು ಎನ್ನುವ ಒತ್ತಾಯಗಳು ಗ್ರಾಮಸ್ಥರದ್ದಾಗಿದೆ.
ಜನರ ಸಮಸ್ಯೆಗಳಿಗೆ ಸ್ಪಂಧಿಸಲು ವಿಳಂಬ ಹಾಗೂ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳ ಮೇಲೆ
ಮೇಲಾಧಿಕಾರಿಗಳು ಶಿಸ್ತು ಕ್ರಮಕ್ಕೆ ಮುಂದಾಗಬೇಕೆನ್ನುವ ಮಾತುಗಳು ಸಾರ್ವಜನಿಕರದ್ದಾಗಿದೆ.