ಪಿಡಿಓ ಅಮಾನತ್‌ಗೆ ಒತ್ತಾಯಿಸಿ: ಮೇ ೬ರಂದು ಗ್ರಾ.ಪಂ.ಗೆ ಬೀಗ

ಲಿಂಗಸುಗೂರು.ಏ.೨೧-ತಾಲೂಕಿನ ನರಕಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಬ್ರಷ್ಟಾಚಾರದಲ್ಲಿ ತೊಡಗಿರುವ ಪಿಡಿಓ, ಕಂಪ್ಯೂಟರ್ ಆಪರೇಟರ್‌ಗಳನ್ನು ಸೇವೆಯಿಂದ ಅಮಾನತ್ ಮಾಡಬೇಕೆಂದು ಒತ್ತಾಯಿಸಿ ಮೇ ೬ರಂದು ಗ್ರಾ.ಪಂ ಕಚೇರಿಗೆ ಬೀಗ ಹಾಕಿ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಕಮಲದಿನ್ನಿ ಗ್ರಾಮದ ಮುಖಂಡ ಲಕ್ಕಪ್ಪ ಹೇಳಿದರು.
ಪಟ್ಟಣದ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರಕಲದಿನ್ನಿ ಗ್ರಾ.ಪಂಯಲ್ಲಿ ೧೪ ಮತ್ತು ೧೫ನೇ ಹಣಕಾಸು ಯೋಜನೆಯಡಿಯಲ್ಲಿ ೧೩ ಲಕ್ಷಕ್ಕೂ ಅಧಿಕ ಹಣ ಬ್ರಷ್ಟಚಾರ ಮಾಡಿದ್ದಾರೆ, ಇದುಲ್ಲದೆ ಸಾರ್ವಜನಿಕರ ಹಾಗೂ ಸದಸ್ಯರಿಗೆ ಗೌರವ ನೀಡದೇ ಮನಸ್ಸೋ ಇಚ್ಛಯೆಂತೆ ಕೆಲಸ ಮಾಡುತ್ತಿದ್ದಾರೆ. ಪಿಡಿಓ ಮಹ್ಮದ್ ಖಾಜಾ, ಅನಧಿಕೃತವಾಗಿ ನೇಮಕಗೊಂಡಿರುವ ಕಂಪ್ಯೂಟರ್ ಆಪರೇಟರ್‌ಗಳಾದ ಅಮರೇಶ ರಾಠೋಡ್, ಬಸವರಾಜ ನರಕಲದಿನ್ನಿ ಈ ಮೂವರು ಕೂಡಿಕೊಂಡು ಸರ್ಕಾರದ ಅನುದಾನ ದುರುಪಯೋಗ ಮಾಡುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಸೇವೆಯಿಂದ ಅಮಾನತ್‌ಗೊಳಿಸಬೇಕು. ಇಲ್ಲಾವಾದಲ್ಲಿ ಮೇ ೬ರಂದು ಗ್ರಾ.ಪಂ ಕಚೇರಿಗೆ ಬೀಗ ಹಾಕಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಮುಖಂಡರಾದ ಮಲ್ಲಯ್ಯ ನರಕಲದಿನ್ನಿ, ಮಹಾಂತೇಶ ಪೂಜಾರಿ, ಬಸನಗೌಡ ಹುನುಕುಂಟಿ, ಗಿರಿಯಪ್ಪ, ಯಲ್ಲಪ್ಪ ಬಂಡಗರಕಲ್, ವೆಂಕಟೇಶ ಹಾಗೂ ಇನ್ನಿತರಿದ್ದರು.