
ಕೋಲಾರ,ಏ.೩ಕೋಲಾರ ತಾಲೂಕಿನ ನರಸಾಪುರ ಗ್ರಾಮಪಂಚಾಯ್ತಿಯ ಪಿಡಿಓ ರವಿ ಎಂಬ ಅಧಿಕಾರಿ, ಅಭಿವೃದ್ದಿ ಕೆಲಸಗಳ ಹೆಸರಿನಲ್ಲಿ ಪಂಚಾಯ್ತಿ ಹಣವನ್ನ ದುರುಪಯೋಗಪಡಿಸಿಕೊಂಡಿದ್ದು, ಇವರ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಪಂ ಸದಸ್ಯರು ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪಂಚಾಯ್ತಿ ಉಪಾಧ್ಯಕ್ಷ ಸುಮನ್, ಕಳೆದ ಆರು ತಿಂಗಳ ಹಿಂದೆ ಪಂಚಾಯ್ತಿ ಚನಾವಣೆಗಳಿದ್ದ ಹಿನ್ನಲೆ ವರ್ಗಾವಣೆ ಮೇಲೆ ಬಂದಂತಹ ಪಿಡಿಓ ರವಿ ಅವರು, ಮೇಲಧಿಕಾರಿಗಳ ಗಮನಕ್ಕೂ ಬಾರದೆ, ನೂತನವಾಗಿ ಆಯ್ಕೆಯಾಗಿರುವ ಪಂಚಾಯ್ತಿ ಅದ್ಯಕ್ಷ ಉಪಾದ್ಯಕ್ಷರ ಗಮನಕ್ಕೂ ಬಾರದೆ, ತನಗಿಷ್ಟ ಬಂದ ಹಾಗೆ ಹಣವನ್ನ ಡ್ರಾ ಮಾಡಿದ್ದು, ಅದಕ್ಕೆ ಯಾವುದೇ ದಾಖಲಾತಿಗಳಾಗಲಿ, ವರ್ಕ್ ಆರ್ಡರ್ಸ್ ಆಗಲಿ ಜೊತೆಗೆ ಯಾವುದೇ ಅಭಿವೃದ್ದಿ ಕೆಲಸಗಳಿಗೂ ಹಣವನ್ನ ಬಳಕೆ ಮಾಡದೆ, ನುಂಗಿ ನೀರು ಕುಡಿದಿದ್ದಾರೆಂದರು. ಅಲ್ಲದೆ ಆರು ತಿಂಗಳಿನಿಂದ ಸಾಕಷ್ಟು ಹಣವನ್ನ ಅಕ್ರಮವಾಗಿ ಡ್ರಾ ಮಾಡಿದ್ದು, ದಾಖಲೆಗಳ ಸಮೇತ ನೀಡಿರುವುದಾಗಿ ಹೇಳಿದರು.
ಅಲ್ಲದೆ ಅಕ್ರಮವಾಗಿ ಹಣ ಡ್ರಾ ಮಾಡಿರುವುದರ ಕುರಿತು, ಪಂಚಾಯತಿ ಅದ್ಯಕ್ಷರು ಉಪಾಧ್ಯಕ್ಷರು ಅಭಿವೃದ್ದಿ ಕಾರ್ಯಗಳಿಗೆ ಬಳಕೆ ಮಾಡಲಾಗಿರುವ ಅನುದಾನದ ಕುರಿತು, ದಾಖಲೆ ಸಮೇತ ಮಾಹಿತಿ ನೀಡಿ ಎಂದು ಪಿಡಿಓ ಗೆ ಸೂಚಿಸಿದ್ದರು ಸಹ, ಇದುವರೆಗೂ ಅಭಿವೃದ್ದಿ ಕಾಮಗಾರಿಗಳಿಗೆ ಹಣ ಡ್ರಾ ಮಾಡಿಕೊಂಡಿರುವುದರ ಕುರಿತು ದಾಖಲೆಗಳು ನೀಡಿಲ್ಲ ಎಂದು ದೂರಿದರು. ಪಂಚಾಯ್ತಿ ಅದ್ಯಕ್ಷ ಹಾಗೂ ಉಪಾದ್ಯಕ್ಷರ ಗಮನಕ್ಕೆ ತರದೆ, ಅದ್ಯಕ್ಷರ ಸಹಿ ಪಡೆಯದೆ, ಸಭೆ ನಡೆಸದೆ, ಪಿಡಿಓ ಅವರು ಏಕತೀರ್ಮಾನವನ್ನ ತೆಗೆದುಕೊಳ್ಳುವುದರ ಮೂಲಕ ಹಿಟ್ಲರ್ ಧೋರಣೆ ಅನುಸರಿಸುತ್ತಿದ್ದಾರೆಂದರು. ಕಳೆದ ಮೂರು ತಿಂಗಳಿಂದ ಈಚೆಗೆ ಸಾಕಷ್ಟು ಹಣವನ್ನ ಡ್ರಾ ಮಾಡಿರುವ ಪಿಡಿಓ, ಖರ್ಚು ಮಾಡಿರುವ ಹಣಕ್ಕೆ ದಾಖಲಾತಿ ನೀಡಿ ಎಂದು ಕೇಳಿದ್ದರಿಂದಾಗಿ, ಜೊತೆಗೆ ಸಾಮಾನ್ಯ ಸಭೆ ಮಾಡುವುದರ ಹಿನ್ನಲೆ, ಸ್ಟಾಕ್ ರಿಜಿಸ್ಟಾರ್ ಪುಸ್ತಕವನ್ನ ಮನೆಗೆ ತೆಗೆದುಕೊಂಡು ಹೋಗಿ , ತಪ್ಪು ಲೆಕ್ಕಗಳನ್ನ ಮೆಟಿರಿಯಲ್ ಪುಸ್ತಕದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದರು. ಅಲ್ಲದೆ ಈ ರೀತಿ ಸ್ಟಾಕ್ ರಿಜಿಸ್ಟಾರ್ ಪುಸ್ತಕದಲ್ಲಿ, ಅದಲುಬದಲು ಮಾಡಿ, ತಿದ್ದಿರುವುದು ಸಹ ದಾಖಲೆ ನೀಡಲಾಗಿದೆ ಎಂದು ಹೇಳಿದರು. ಜೊತೆಗೆ ಸ್ಟಾಕ್ ರಿಜಿಸ್ಟಾರ್ ಪುಸ್ತಕವನ್ನ ಪಂಚಾಯ್ತಿಯಿಂದ ಹೊರಗೆ ತೆಗೆದುಕೊಂಡು ಹೋಗಬಾರದೆಂಬ ನಿಯಮವಿದ್ದರು, ಪಿಡಿಓ ಮಾಡಿರುವಂತಹ ಅಕ್ರಮಗಳನ್ನ ಮುಚ್ಚಿಹಾಕುವ ಸಲುವಾಗಿ, ಮನೆಗೆ ಸ್ಟಾಕ್ ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿ ತನಗಿಷ್ಟ ಬಂದ ಹಾಗೆ ತಿದ್ದಿರುವಂತದ್ದು, ದಾಖಲೆ ಸಮೇತ ನೀಡಿದ್ದೇವೆಂದರು. ನೂತನವಾಗಿ ಆಯ್ಕೆಯಾಗಿರುವ ಪಂಚಾಯ್ತಿ ಸದಸ್ಯರುಗಳು ತಮ್ಮನ್ನ ಗೆಲ್ಲಿಸಿರುವಂತಹ ಜನತೆಯ ಸೇವೆ ಮಾಡುವಂತಹ ಉತ್ಸಹದಲ್ಲಿರುವ ಹಿನ್ನಲೆ, ಪಂಚಾಯ್ತಿ ಅಭಿವೃದ್ದಿಯಾಗಬೇಕಾದರೆ, ಇಂತಹ ಪಿಡಿಓ ಅವರ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವುದರೊಂದಿಗೆ ಅಮಾನತುಗೊಳಿಸಬೇಕೆಂದು ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಿದ್ದಾರೆ.