ಪಿಡಿಒ ಲೋಕಾಯುಕ್ತ ಬಲೆಗೆ

ಸಂಜೆವಾಣಿ ವಾರ್ತೆ

ದಾವಣಗೆರೆ: ಮನೆಯ ಖಾತೆ ಇ-ಸ್ವತ್ತು ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಡಾಟಾ ಎಂಟ್ರಿ ಆಪರೇಟರ್, ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಜಗಳೂರು ತಾಲೂಕು ಕೆಚ್ಚೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಎಸ್.ಎಂ. ನಂದಿಲಿAಗೇಶ ಸಾರಂಗಮಠ (35) ಮತ್ತು ಡಾಟಾಎಂಟ್ರಿ ಆಪರೇಟರ್ ಅಜ್ಜಯ್ಯ (32) ಲೋಕಾಯುಕ್ತರ ದಾಳಿ ವೇಳೆ ಬಲೆಗೆ ಬಿದ್ದಿದ್ದಾರೆ. ಪ್ರಸ್ತುತ ದಾವಣಗೆರೆ ನಿಟ್ಟುವಳ್ಳಿಯಲ್ಲಿ ವಾಸವಿರುವ, ಮೂಲತಃ ಜಗಳೂರು ತಾಲೂಕು ಕೆಳಗೋಟೆ ಗ್ರಾಮದ ಬಸವನಗೌಡ ಎಂಬುವರು ಕೆಳಗೋಟೆ ಗ್ರಾಮದಲ್ಲಿನ ತಮ್ಮ ಮನೆಯ ಖಾತೆಗೆ ಇ-ಸ್ವತ್ತು ಮಾಡಿಸಲು ಕೆಚ್ಚೇನಹಳ್ಳಿ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಇ-ಖಾತೆ ಮಾಡಿಕೊಡಲು ಪಿಡಿಒ ನಂದಿಲಿAಗೇಶ 10,000 ರೂ. ಲಂಚಕ್ಕೆ ಬೇಡಿಕೆ ಇರಿಸಿದ್ದರು. ಅದರಂತೆ ಅ.27ರಂದು ಹಣ ನೀಡುವುದಾಗಿ ಹೇಳಿದ್ದ ಬಸವನಗೌಡ, ಈ ಸಂಬAಧ ಅ.21ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.ದೂರಿನನ್ವಯ ಯೋಜನೆ ರೂಪಿಸಿದ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅÃಕ್ಷಕ ಎಂ.ಎಸ್. ಕೌಲಾಪೂರೆ ನೇತೃತ್ವದ ತಂಡ, ಶುಕ್ರವಾರ ಗ್ರಾಪಂ ಕಚೇರಿಯಲ್ಲಿ ಬಸವನಗೌಡ ಅವರಿಂದ 10,000 ರೂ. ಲಂಚ ಪಡೆಯುತ್ತಿದ್ದ ಎಸ್.ಎಂ. ನಂದಿಲಿAಗೇಶ ಸಾರಂಗಮಠ ಮತ್ತು ಅಜ್ಜಯ್ಯನನ್ನು ರೆಡ್‌ಹ್ಯಾಂಡಾಗಿ ಹಿಡಿದಿದೆ..