ಪಿಡಿಒ ರಕ್ಷಣೆಗೆ ಕಾಯ್ದೆ ರೂಪಿಸಲು ಮನವಿ

ದಾವಣಗೆರೆ.ಮೇ.೨:  ರಾಜಾದ್ಯಂತ ಗ್ರಾಮಗಳ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿರುವ ಪಿಡಿಒಗಳ ಮೇಲೆ ನಿರಂತರವಾಗಿ ಹಲ್ಲೆ ನಡೆದಿದ್ದು ಅವರ ರಕ್ಷಣೆಗೆ ರಾಜ್ಯ ಸರ್ಕಾರ ಈ ಕೂಡಲೆ ಕಾಯ್ದೆಯೊಂದನ್ನು ಜಾರಿಗೆ ತರಬೇಕೆಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಬೋರಯ್ಯ ಒತ್ತಾಯಿಸಿದರು .ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ 1ವಾರದಲ್ಲಿ ಹದಿನೈದು ಪ್ರಕರಣಗಳು ನಡೆದಿವೆ ಬಳ್ಳಾರಿಯಲ್ಲಿ 2, ತುಮಕೂರಿನಲ್ಲಿ 2, ರಾಯಚೂರಿನಲ್ಲಿ, 2ಬೆಳಗಾವಿಯಲ್ಲಿ 2ಹಾವೇರಿಯಲ್ಲಿ 1ಈ ರೀತಿ ಒಟ್ಟು ೧೫ ಪ್ರಕರಣಗಳು ನಡೆದಿದೆ .ಈ ಹದಿನೈದು ಪ್ರಕರಣಗಳ ಪೈಕಿ ಈಗಾಗಲೇ ಹತ್ತು ಕಡೆಗಳಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು ಇನ್ನೂ 5ಕಡೆಗಳಲ್ಲಿ ವಿವಿಧ ಕಾರಣಗಳಿಗಾಗಿ ಎಫ್ಐಆರ್ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದರು .ಲಾಕ್ ಡೌನ್ ನಂತಹ  ಕಠಿಣ ಸಂದರ್ಭದಲ್ಲೂ ಸಹ ಪಿಡಿಒಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿದ್ದು ನಿರಂತರವಾಗಿ ಸಣ್ಣಪುಟ್ಟ ಕಾರಣಗಳಿಗಾಗಿ ಅವರ ಮೇಲೆ ಪದೇಪದೇ ಹಲ್ಲೆ ನಡೆಯುತ್ತಿದೆ ಕಾರಣ  ವೈದ್ಯರಿಗೆ ತಂದಿರುವ ರೀತಿಯಲ್ಲಿ ಪಿಡಿಒಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಕಾಯ್ದೆಯೊಂದನ್ನು ಜಾರಿಗೆ ತಂದು ಪಿಡಿಒಗಳ ಮೇಲೆ ಹಲ್ಲೆ ನಡೆಸಿದವರಿಗೆ ಗೂಂಡಾ ಕಾಯ್ದೆಯಡಿ ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು .ರಾಜ್ಯದ ಯಾವುದೇ  ಪಿಡಿಒಗಳಾಗಲಿ ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸುವುದು ತಪ್ಪು ನಾವುಗಳು ಸಾರ್ವಜನಿಕರ ಸೇವೆಗಾಗಿ ಇದ್ದೇವೆ ಸರ್ಕಾರದ ನೀತಿ ನಿಯಮಗಳ ಅನುಸಾರವಾಗಿ ಜನಪ್ರತಿನಿಧಿಗಳು ಮತ್ತು ಮೇಲಧಿಕಾರಿಗಳ ಮಾರ್ಗದರ್ಶನದಂತೆ ಕೆಲಸ ನಿರ್ವಹಿಸಬೇಕು ಯಾವುದೇ ಕೆಲಸಗಳಾಗಲಿ ಸರ್ಕಾರದ ನಿಯಮಾವಳಿಗಳ ಪ್ರಕಾರವೇ ಮಾಡಬೇಕು ಯಾರದೋ ಮಾತನ್ನು ಕೇಳಿ ಕೆಲಸ ಮಾಡಬಾರದು ಎಂದು ಕಿವಿಮಾತು ಹೇಳಿದರು ಸುದ್ದಿಗೋಷ್ಠಿಯಲ್ಲಿ ದಾವಣಗೆರೆ ಜಿಲ್ಲಾಧ್ಯಕ್ಷ ಡಿ.ಶಿವಕುಮಾರ್ ಇದ್ದರು.