ಪಿಡಿಒ ಮೈಲಪ್ಪ ನಿಧನ

ಕೊಟ್ಟೂರು 18: ತಾಲೂಕಿನ ರಾಂಪುರ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೈಲಪ(55) ಮೃತಪಟ್ಟಿದ್ದಾರೆ.
ವಾರದ ಹಿಂದೆ ಚಿಕಿತ್ಸೆ ಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಗೆ ಸ್ಪಂದಿಸದೇ ಕೊನೆಯುಸಿರೆಳೆದರು. ಕೆ ಅಯ್ಯನಹಳ್ಳಿ,ತೂಲಹಳ್ಳಿ, ಉಜ್ಜಿನಿ ಸೇರಿದಂತೆ ಅನೇಕ ಗ್ರಾಮಪಂಚಾಯತ್ ಗಳಲ್ಲಿ ಕಾರ್ಯನಿರ್ವಹಿಸಿ ಪ್ರಸ್ತುತ ರಾಂಪುರ ಗ್ರಾಮಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂತಾಪ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪಪೂಜಾರ್, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ, ಸೇರಿದಂತೆ ತಾಲೂಕಿನ ಪಿಡಿಒಗಳು ಅಗಲಿದ ಮೈಲಪ್ಪ ಇವರಿಗೆ ಸಂತಾಪ ಸೂಚಿಸಿದರು.