ಪಿಡಿಒ ಮೇಲೆ ಹಲ್ಲೆ: ಪ್ರಕರಣ ದಾಖಲಿಸಲು ಹಿಂದೆಟು

ಲಿಂಗಸುಗೂರು.ಏ.೩೦-ತಾಲೂಕಿನ ಉಪ್ಪಾರನಂದಿಹಾಳ ಗ್ರಾಮ ಪಂಚಾಯತ್‌ಯಲ್ಲಿ ಇಲ್ಲಾದ ಬಿಲ್ಲ್‌ನ್ನು ಬರೆದು ಕೊಡಲು ಒಪ್ಪದ ಪಂಚಾಯತ್ ಪಿಡಿಓ ಮೆಲೆ ಪಂಚಾಯತಿ ಅಧ್ಯಕ್ಷ ಪತಿ ಪರಮೇಶಪ್ಪ ಅವರ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆಯಿತು.
ಕ್ಷೇತ್ರದ ಶಾಸಕ ಡಿ.ಎಸ್.ಹೂಲಗೇರಿ ಯವರು ಹಲ್ಲೆ ಮಾಡಿದವರನ್ನ ಉಳಿಸುವಲ್ಲಿ ಮುಂದಾಗಿದ್ದು. ಈ ಘಟನೆಯು ಸಿಇಓ ಮತ್ತು ಇಓ ಅವರು ಹಲ್ಲೆ ಮಾಡಿರುವ ಗೂಂಡಾಗಳ ವಿರುದ್ಧ ದೂರು ನೀಡಲು ಮೂಂದಾಗಿದ್ದು ದೂರು ನೀಡಲಾರದಾಗೆ ಶಾಸಕ ಡಿ.ಎಸ್.ಹೂಲಗೇರಿ ಒತ್ತಾಡ ಹಾಕುತ್ತಿರುವದು ಕಂಡು ಬರುತ್ತಿದೆ.
ಕಾನೂನನ್ನು ಕಾಯಬೇಕಿರುವ ಶಾಸಕರೆ ಕಾನೂನು ಬಾರಿಹೀರವಾಗಿ ಗುಂಡಾಗಿರಿ ಚಟುವಟಿಕೆಗೆ ಪ್ರೋತ್ಸಾಹಿಸುತ್ತಿರುವುದು ನಾಚಿಕೆಗೆಡಿನ ಸಂಗತಿ, ಪಿಡಿಒ ಮೇಲೆ ಹಲ್ಲೆ ಮಾಡಿರುವುದು ಅಮಾನವೀಯ ಕೃತ್ಯವಾಗಿದೆ ಕೂಡಲೇ ಅಧಿಕಾರಿಗಳು ಪಿಡಿಒಗಳ ರಕ್ಷಣೆಗೆ ನಿಲ್ಲಬೇಕು, ಇಲ್ಲದಿದ್ದರೆ ತಾಲೂಕಿಗೆ ವಗಾ೯ವಣೆ ಆಗಿ ಬರುವ ಅಧಿಕಾರಿಗಳು ರಕ್ಷಣೆ ಇಲ್ಲದೆ ಇರುವುದರಿಂದ ಈ ಘಟನೆ ಸಾಕ್ಷಿಯಾಗಿರುತ್ತದೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳಿಗೆ ಆಡಳಿತ ಪಕ್ಷದ ಶಾಸಕರು ಪ್ರತಿಯೊಂದು ಗ್ರಾಮ ಪಂಚಾಯತ್‌ಯಲ್ಲಿ ಪಿಡಿಒಗಳ ಮೇಲೆ ತಮ್ಮ ಹಿಂಬಾಲಕರ ಮೂಲಕ ದಪ೯ ತೋರಿಸಿ ವಿನಕಾರಣ ಕಿರುಕುಳ ನೀಡುವ ಮೂಲಕ ಮಾನಸಿಕವಾಗಿ ಅಧಿಕಾರಿಗಳು ಕುಗ್ಗಿಹೋಗಿದ್ದಾರೆ ಅಲ್ಲೆ ಮಾಡಿದ ಆರೋಪಿಗಳನ್ನ ಕೂಡಲೆ ಬಂದಿಸಿ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗಬೇಕೆಂದು – ಬಾಜಪಾ ತಾಲೂಕ ಅಧ್ಯಕ್ಷ ,ವೀರನಗೌಡ ಪಾಟೀಲ್, ಲೇಕ್ಕಿಹಾಳ ಒತ್ತಾಯಿಸಿದರು.
ಆ ಘಟನೆ ಬಗ್ಗೆ ಸರಿಯಾದ ಮಾಹಿತಿ ತೆಗೆದುಕೊಂಡು ಮುಂದಿನ ಕಾನೂನುನಾತ್ಮಕ, ನಮ್ಮ ಹಿರಿಯ ಅಧಿಕಾರಿಗಳ ಮಾಗ೯ದಶ೯ನದಲ್ಲಿ ಮುಂದುವರಿಯುತ್ತೇವೆ- ತಾಲೂಕ ಪಂಚಾಯತ್ ಕಾಯ೯ನಿವಾ೯ಹಕ ಅಧಿಕಾರಿ ಲಕ್ಷ್ಮಿದೇವಿ ಇನ್ನಿತರರು ಉಪಸ್ಥಿತರಿದ್ದರು.