ಪಿಡಿಒ ನಿರ್ಲಕ್ಷ್ಯ : ಮೂಲಭೂತ ಸೌಕರ್ಯ ಇಲ್ಲದೇ ಜನರು ಪರದಾಟ

ಲಿಂಗಸುಗೂರು.ಮೇ.೨೯- ತಾಲೂಕ ಈಚನಾಳ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳ ಅಭಿವೃದ್ಧಿಗೇ ಸರ್ಕಾರ ವಿಶೇಷ ಒತ್ತು ನೀಡುತ್ತಿದ್ದರೂ ಗ್ರಾಮ ಪಂಚಾಯತ್ ಪಿಡಿಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದ ಕಾಲೋನಿಗಳಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಗೊಬ್ಬೆದ್ದು ನಾರುತ್ತೀವೆ, ಇದರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನರು ಜೀವನ ನಿರ್ವಹಣೆ ಮಾಡುವಂತಾಗಿದೆ. ಪ್ರಸ್ತುತ ಈಚನಾಳ ಗ್ರಾಮ ಪಂಚಾಯತ್ ಪಿಡಿಒ ಅಧಿಕಾರ ವಹಿಸಿಕೊಂಡು ವರ್ಷಗಳೇ ಕಳೆಯುತ್ತೀವೆ, ಆದರೂ ತಾವೇ ಸ್ವತಃ ಕಾಳಜಿಯಿಂದ ಯಾವುದೇ ವಾರ್ಡ್‌ಗಳಿಗೇ ಭೇಟಿ ನೀಡಿಲ್ಲ, ಖುದ್ದು ಸಾರ್ವಜನಿಕರೇ ಸಮಸ್ಯೆ ಹೇಳಿಕೊಂಡು ಅವರ ಮುಂದೆ ನಿಂತಾಗ ಸಾರ್ವಜನಿಕ ಒತ್ತಾಯ ದ ನಂತರ ಸ್ಥಳ ಪರಿಶೀಲನೆ ಮಾಡಲು ಮುಂದಾಗುತ್ತೀರುವುದು ಬೇಸರದ ಸಂಗತಿ. ಹಾಗೆಯೇ ಚರಂಡಿ ಮತ್ತು ವಿವಿಧ ಕಾಮಗಾರಿಗಳಿಗೆ ಒತ್ತು ನೀಡಿ ಕೆಲಸ ಪ್ರಾರಂಭ ಮಾಡಿ ಅಂದ್ರೇ ಸಾಕು ಗ್ರಾಮ ಪಂಚಾಯತ್ ಸದಸ್ಯರ ಸಭೆ ಕರೆಯಬೇಕು ಅಂತಾರೆ ಸಾರ್ವಜನಿಕರು ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿ ಅಂದ್ರೆ ಕರೋನಾ ಇದೆ, ಸಭೆ ಕರೆಯಲು ಬರಲ್ಲ ಅನ್ನುವ ಪಿಡಿಒ ಅಧಿಕಾರಿ ತಾವೇ ಖುದ್ದಾಗಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ವಿಡಿಯೋ ಕಾನ್ಫರೆನ್ಸ್ ಸಭೆ ಗ್ರಾಮ ಪಂಚಾಯತ್ ದಲ್ಲಿ ಯಾವುದೇ ಸಾಮಾಜಿಕ ಅಂತರದ ಪಾಲನೆ ಇಲ್ಲದೇ ಮಾಡ್ತಾರೆ. ಒಟ್ಟಿನಲ್ಲಿ ಗ್ರಾಮಗಳ ಅಭಿವೃದ್ಧಿ ಸಭೆಗೇ ಕರೊನಾ ಅಡ್ಡಿಯಾಗುತ್ತಿದಿಯಾ???? ಇದು ಸಾರ್ವಜನಿಕರ ಪ್ರಶ್ನೆ. ಅದಲ್ಲದೇ ಕೆಸರಟ್ಟಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ರೀಪೇರಿ ಗೇ ಇತ್ತೀಚಿನ ೨೦೨೧-೨೨ ನೇ ಸಾಲಿನಲ್ಲಿ ೩೧,೮೬೦ ಮೊತ್ತ ಖರ್ಚು ಮಾಡಿ ರೀಪೇರಿ ಮಾಡಿದರೂ ಕೂಡ ಕೆಲವೇ ದಿನಗಳಲ್ಲಿ ಮತ್ತೆ ಕೆಟ್ಟು ಹೋಗಿರುವುದು ಪಂಚಾಯತ್ ಆಡಳಿತ ದ ವೈಪ್ಯಲ್ಯತೆ ಯನ್ನ ಎತ್ತು ತೋರಿಸುತ್ತಿದೆ.
ಈಗ ಮತ್ತೆ ಕೆಸರಟ್ಟಿ ಗ್ರಾಮದ ಗ್ರಾಮಸ್ಥರು ಶುದ್ಧ ಕುಡಿಯುವ ನೀರು ಇಲ್ಲದೇ ಅಸಹಾಯಕ ಸ್ಥಿತಿಯಲ್ಲಿ ಸಾರ್ವಜನಿಕರು ಇಂದು ಪಿಡಿಒ ಮುಂದೆ ತಮ್ಮ ಸಮಸ್ಯೆ ಯನ್ನ ತೊಡಿಕೊಂಡರು.