ಪಿಡಿಒ ನಿರ್ಲಕ್ಷ್ಯ: ಕೂಡಿಯುವ ನೀರಿಗಾಗಿ ಪರದಾಟ

ಗಬ್ಬೂರು,ಏ.೧೨- ದೇವದುರ್ಗ ತಾಲೂಕಿನ ಪಟ್ಟಣ ಎಂದು ಅನಿಸಿಕೊಂಡಿರುವ ಗಬ್ಬೂರು ಗ್ರಾಮದ ಐದನೇ ವಾರ್ಡಿನಲ್ಲಿ ಪೂಜಾರಿ (ಕುರುಬರು) ಓಣಿಗೆ ಕುಡಿಯುವ ನೀರಿಗಾಗಿ ಸುಮಾರು ವರ್ಷಗಳಿಂದ ಜನರು ತುಂಬಾ ಸಂಕಷ್ಟದಿಂದ ಪರದಾಟವನ್ನು ಅನುಭವಿಸುತ್ತಾ ಇದ್ದಾರೆ. ಹಾಗೆ ಎಷ್ಟು ಸಾರಿ ಗ್ರಾಮ ಪಂಚಾಯತಿ ಸದಸ್ಯರಿಗೂ ಅಧ್ಯಕ್ಷರಗೂ ಹಾಗೂ ಪಿಡಿಒ ಗಮನಕ್ಕೆ ತಂದರು ಸಹ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ.
ಐದದೇ ವಾರ್ಡಿನ ಜನರು ಸುಮಾರು ವರ್ಷಗಳಿಂದ ಬೇರೆ-ಬೇರೆ ವಾರ್ಡುಗಳಿಗೆ ಹೋಗಿ ಇನ್ನೊಬ್ಬರ ಮನೆ ಮುಂದೆ ನಲ್ಲಿ ನೀರು ತರಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ನಲ್ಲಿ ನೀರು ಇಲ್ಲವೆಂದರೆ ಎರಡು ಕಿಲೋಮೀಟರ್ ದೂರದಿಂದ ನೀರು ತರಬೇಕಾಗುತ್ತದೆ ಅದಕ್ಕೆ ಇಂದು ಎಲ್ಲಾ ಐದನೇ ವಾರ್ಡಿನ ಜನರು ಗ್ರಾಮ ಪಂಚಾಯಿತಿಗೆ ಬಂದು ನಮಗೆ ಕೂಡಿಯೋಕ್ಕೆ ನೀರು ಕೊಡಿ ಇಲ್ಲ ಒಂದು ಚೂರು ವಿಷವನ್ನಾದರೂ ಕೊಡಿ ಎಂದು ಅಧಿಕಾರಿಗಳಿಗೂ ಮನವಿ ಪತ್ರವನ್ನು ಸಲ್ಲಿಸಿದರು.
ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಐದನೇ ವಾರ್ಡಿಗೆ ಕೂಡಿಯುವ ನೀರು ಸಿ.ಸಿ ರಸ್ತೆ ಚರಂಡಿ ಇನ್ನು ಮುಂತಾದ ಸಮಸ್ಯೆಗಳಿಂದಲೂ ಸಹ ಇದ್ದಾವೆ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಗ್ರಾಮ ಪಂಚಾಯಿತಿಯ ಮುಂದೆ ಪಂಚಾಯಿತಿಗೆ ಬೀಗ ಜಡೆದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜನರು ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಹನುಮಂತ ಮಾಜಿ ಗ್ರಾಮ ಪಂಚಾಯತಿ ಸದಸ್ಯರು, ರಮೇಶ್, ಹನುಮೇಶ್, ಮಲ್ಲಯ್ಯ, ರೇವಣಸಿದ್ದ, ಬಸವರಾಜ್, ಬೂದೇಪ್ಪ ಕಟಲಿ, ನಿಂಗಪ್ಪ, ಬೂದೇಪ್ಪ, ಭೋಜಪ್ಪ ಒಡವಟ್ಟಿ, ರೇವಣ್ಣ, ಬುಳ್ಳಪ್ಪ, ಬೂದೇಪ್ಪ, ಗೋವಿಂದಪ್ಪ, ಶಾಂತಪ್ಪ ಬಳೆ, ನರಸಪ್ಪ, ಅಡಿವೆಪ್ಪ, ವಿಶ್ವನಾಥ್, ಶಿವಣ್ಣ, ಶಂಕರ್ ಬೊಗ್, ಅಂಬರೀಶ್ ಹಾಗೂ ಇನ್ನೂ ಮುಂತಾದ ಜನರು ಭಾಗವಹಿಸಿದ್ದರು.