ಪಿಡಿಒ ಹುದ್ದೆಗೆ ೭ ವರ್ಷದಿಂದ ಕಾತುರ
ಹುಸೇನಪ್ಪ ಗಂಜಳ್ಳಿ
ರಾಯಚೂರು,ಜೂ.೨೭-
ರಾಜ್ಯದಲ್ಲಿ ಕಳೆದ ಏಳು ವರ್ಷಗಳಿಂದ ಪಿಡಿಒ ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಸರಕಾರ ಗಮನಕ್ಕೆ ಇದ್ದರೂ ನಿರ್ಲಕ್ಷ ಮುಂದುವರಿಯುತ್ತಿದೆ. ಇದರಿಂದ ಉದ್ಯೋಗ ಆಕಾಂಕ್ಷಿಗಳಿಗೆ ತೀವ್ರ ನಿರಾಸೆಗೊಳ್ಳುವಂತೆ ಮಾಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಮಂತ್ರ ಜಪಿಸಬೇಕಾದರೆ ಪಿಡಿಒಗಳೇ ಮುಖ್ಯ ಕಾರಣ
ಬಹುಮುಖ್ಯ ಸಮಸ್ಯೆಗಳಲ್ಲಿ ಒಂದಾದ ಪಿಡಿಒಗಳ ಹುದ್ದೆ ಭರ್ತಿಗೆ ಎಲ್ಲಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಪಿಡಿಒ ಹುದ್ದೆ ಭರ್ತಿಗೆ ಸರಕಾರ ನಿರ್ಲಕ್ಷ ತನದಿಂದ ಉದ್ಯೋಗ ಆಕಾಂಕ್ಷಿಗಳಲ್ಲಿ ನಿರಾಸೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗುಳೆ ತಪ್ಪಿಸುವ ಉದ್ದೇಶದಿಂದ ಜಾರಿಗೆ ತಂದಿರುವ ನರೇಗಾ ಕಾಮಗಾರಿ ಸ್ಥಗಿತದಿಂದ ಗ್ರಾಮೀಣ ಜನತೆ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೆ ಗುಳೆ ಹೋಗುವುದು ಮತ್ತಿಷ್ಟು ತೀವ್ರಗೊಂಡಿದೆ.
ಪಿಡಿಒ ಖಾಲಿ ಇರುವ ಗ್ರಾ ಪಂ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಕೊರೆತೆ ತಾಂಡವಾಡುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಹಿತದೃಷ್ಟಿಯಿಂದ ಸರಕಾರ ಪಿಡಿಒಗಳ ನೇಮಕಾತಿಗೆ ಮುಂದಾಗಬೇಕು ಎಂಬ ಕೂಗು ರಾಜ್ಯಾದ್ಯಂತ ಕೇಳಿಬರುತ್ತಿದೆ.
ರಾಜ್ಯದಲ್ಲಿ ಈಗಿನ ಕಾಂಗ್ರೇಸ್ ಸರಕಾರ ಆದರೂ ಪಿಡಿಒ ಹುದ್ದೆ ಭರ್ತಿಗೆ ಮುಂದಾಗಿ ಉದ್ಯೋಗ ಆಕಾಂಕ್ಷಿಗಳು ನಿರಾಸೆಗೆ ಸಿಹಿಸುದ್ದಿ ನೀಡುತ್ತ ಎಂಬುದು ಕಾದು ನೋಡಬೇಕಾಗಿದೆ.
ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಅಭಿವೃದ್ಧಿ ಗ್ರಾಪಂ ಅಧಿಕಾರಿ (ಪಿಡಿಒ), ಕಾರ್ಯದರ್ಶಿ ಹುದ್ದೆಗಳು ರಾಜ್ಯಾದ್ಯಂತ ೨೦೦೦ ಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದರೂ ಏಳು ವರ್ಷಗಳಿಂದ ಹುದ್ದೆಗಳ ಭರ್ತಿಗೆ ಸರಕಾರ ಗಮನಹರಿಸದೇ ನಿರ್ಲಕ್ಷ ಮುಂದುವರಿದ ಕಾರಣ ಉದ್ಯೋಗ ಆಕಾಂಕ್ಷಿಗಳು ಅಂದು ಇಂದು ಎಂದು ಎಂಬ ನಿರೀಕ್ಷೆಯೊಂದಿಗೆ ಕಾತುರದಿಂದ ಕಾಯುವಂತೆ ಮಾಡಿದೆ.
ರಾಜ್ಯಾದ್ಯಂತ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳ ಹುದ್ದೆ ಖಾಲಿ ಇವೆ.
ಉಳಿದಿರುವ ಪಿಡಿಒಗಳಿಗೆ ಕಾರ್ಯದೊತ್ತಡ ಹೆಚ್ಚಾಗಿದೆ. ಜತೆಗೆ ಇರುವವರಿಗೆ ಹಲವೆಡೆ ಎರಡೆರಡು ಗ್ರಾಪಂ ಜವಾಬ್ದಾರಿ ವಹಿಸಲಾಗಿದೆ. ಇದರಿಂದ ಖಾಲಿ ಹುದ್ದೆಗಳ ಭರ್ತಿಗೆ ಸರಕಾರ ಏಕೆ ಮುಂದಾಗುತ್ತಿಲ್ಲ ಎಂದು ಪ್ರೆಶ್ನೆಗಳ ಸುರು ಮಳೆ ಹೆಚ್ಚಾಗಿದೆ.
ಎಷ್ಟು ಹುದ್ದೆ ಖಾಲಿ?
ರಾಜ್ಯಾದ್ಯಂತ ೬೦೨೧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಮಂಜೂರಾಗಿವೆ. ಇದರಲ್ಲಿ ೫೧೭೦ ಹುದ್ದೆ ಭರ್ತಿಯಾಗಿದ್ದು, ಇನ್ನೂ ೮೫೧ ಹುದ್ದೆ ಖಾಲಿಯಿವೆ. ಅದರಂತೆ ಗ್ರಾಪಂ ಕಾರ್ಯದರ್ಶಿ ಗ್ರೇಡ್-೧ ಹುದ್ದೆ ೨೨೪೫ ಮಂಜೂರಾಗಿದ್ದು, ೧೮೫೫ ಭರ್ತಿಯಾಗಿ ೩೯೦ ಹುದ್ದೆ ಖಾಲಿ ಉಳಿ ದಿವೆ. ಅದೇರೀತಿ ಗ್ರಾಪಂ ಕಾರ್ಯದರ್ಶಿ ಗ್ರೇಡ್-೨ ೩೭೭೭ ಹುದ್ದೆ ಮಂಜೂರಾಗಿದ್ದು, ೩೦೮೦ ಭರ್ತಿಯಾಗಿದ್ದರೆ ೬೯೭ ಹುದ್ದೆ ಖಾಲಿಯಿವೆ. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳು ೨೫೭೯ ಹುದ್ದೆ ಮಂಜೂರಾಗಿದ್ದರೆ ೨೪೨೮ ಭರ್ತಿಯಾಗಿ ೧೫೧ ಹುದ್ದೆ ಖಾಲಿ ಉಳಿದವೆ. ಒಟ್ಟು ೨೦೮೯ ಹುದ್ದೆಗಳು ಖಾಲಿ ಉಳಿದಂತಾಗಿವೆ.
ವಯಸ್ಸು ಮೀರುವ ಆತಂಕ :
ಹಲವು ವರ್ಷಗಳಿಂದ ಪಿಡಿಒ, ಕಾರ್ಯದರ್ಶಿ ಹುದ್ದೆಗಳನ್ನು ಭರ್ತಿಗೆ ಮುಂದಾಗದ ಕಾರಣ ಈ ಹುದ್ದೆ ಪಡೆಯಬೇಕೆಂದು ಬಯಸಿ ತೊಡಗಿದವರು ಹಲವು ವರ್ಷಗಳಿಂದ ಅಧಿಸೂಚನೆಗಾಗಿ ಕಾಯುತ್ತಿದ್ದಾರೆ. ವಯಸ್ಸು ಮೀರುವ ಆತಂಕವಿದ್ದು, ಶೀಘ್ರ ಹುದ್ದೆ ಭರ್ತಿ ಮಾಡಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ಏಳು ವರ್ಷದ ಹಿಂದೆ ಅಧಿಸೂಚನೆ :
ಈ ಹಿಂದೆ ಪಿಡಿಒ, ಕಾರ್ಯದರ್ಶಿ ಹುದ್ದೆಗಳನ್ನು ೨೦೧೬ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಒಟ್ಟು ಏಳು ವರ್ಷಗಳಿಂದ ಈ ಹುದ್ದೆಗಳ ಭರ್ತಿಗೆ ಸರಕಾರಗಳು ಕ್ರಮಕೈಗೊಂಡಿಲ್ಲ. ಆದ್ದರಿಂದ ಹುದ್ದೆ ಭರ್ತಿ ಮಾಡಿಕೊಳ್ಳಬೇಕೆಂಬ ಒತ್ತಡ ಉದ್ಯೋಗ ಆಕಾಂಕ್ಷಿಗಳಿಂದ ಬಲವಾಗಿ ಕೇಳಿಬರುತ್ತಿದೆ.
ಹುದ್ದೆ ಮಂಜೂರು ಖಾಲಿ
ಪಿಡಿಒ ೬೦೨೧ ೮೫೧
ಕಾರ್ಯದರ್ಶಿ ಗ್ರೇಡ್-೧ ೨೨೪೫ ೩೯೦
ಕಾರ್ಯದರ್ಶಿ ಗ್ರೇಡ್ -೨ ೩೭೭೭ ೬೯೭
ಎಸ್ ಡಿಎ ೨೫೭೯ ೧೫೧
ಹಿಂದಿನ ಸರಕಾರದ ಭರವಸೆ ಹುಸಿ
ಈ ಹಿಂದಿನ ಬಿಜೆಪಿ ಸರಕಾರ ೮೭೦ ಪಿಡಿಒ ಹುದ್ದೆಗಳ ಭರ್ತಿ ಮಾಡಲಾಗುವುದು ಎಂದು ತಿಳಿಸಿತ್ತು. ಆದರೆ, ಅಧಿ ಸೂಚನೆಯನ್ನೇ ಹೊರಡಿಸಲಿಲ್ಲ. ಆದ್ದರಿಂದ ಈಗಿನ ಕಾಂಗ್ರೆಸ್ ಸರಕಾರವಾದರೂ ಈ ಹುದ್ದೆಗಳ ಭರ್ತಿಗೆ ಮನಸ್ಸು ಮಾಡುತ್ತಾ ಎಂಬ ಪ್ರಶ್ನೆ ಉದ್ಯೋಗಾಕಾಂಕ್ಷಿಗಳು ಕೇಳುತ್ತಿದ್ದಾರೆ.
ಗ್ರಾಮ ಪಂಚಾಯಿತಿಗಳಲ್ಲಿ ಸಕಾಲಕ್ಕೆ ಅಭಿವೃದ್ಧಿ ಕಾರ್ಯ ಜರುಗಬೇಕಾದರೆ ಪಿಡಿಒಗಳು ಇರಲೇಬೇಕು. ಹುದ್ದೆಗಳ ಭರ್ತಿಗೆ ಅಳುವ ಸರಕಾರಗಳ ಬೇಜವಾಬ್ದಾರಿ ಮುಂದುವರಿಯುತ್ತಿದೆ. ಪಿಡಿಒಗಳ ಕೊರೆತೆಯಿಂದ ಅಭಿವೃದ್ಧಿ ಕಾರ್ಯ ವಿಳಂಬವಾಗುತ್ತಿದೆ. ಶೀಘ್ರ ಹುದ್ದೆಗಳ ಭರ್ತಿಗೆ ಸರಕಾರ ಮುಂದಾಗಬೇಕು.
ಗಿರೇಶ ಉದ್ಯೋಗಕಾಂಕ್ಷಿ ರಾಯಚೂರು