ರಾಯಚೂರು, ಏ.೦೬- ತಾಲೂಕಿನ ಮನ್ಸಲಾಪೂರು ಗ್ರಾಮ ಪಂಚಾಯತಿಯಲ್ಲಿ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ ರಾಮ್ ಜಯಂತಿ ಆಚರಣೆ ಮಾಡದೇ ಕರ್ತವ್ಯಲೋಪವಸಗಿದ ಪಿ.ಡಿ.ಓ ಅನ್ನಪೂರ್ಣೇಶ್ವರಿ ಮತ್ತು ಕಾರ್ಯದರ್ಶಿಯನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡುವಂತೆ ಕರ್ನಾಟಕ ರಣಧೀರ ಪಡೆ ಪದಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಹಸಿರು ಕ್ರಾಂತಿಯ ಹರಿಕಾರ, ಉಪಪ್ರಧಾನಿ ಬಾಬು ಜಗಜೀವನ ರಾಂ ರವರ ಜಯಂತಿಯನ್ನು ದೇಶಾದ್ಯಂತ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಹಾಗೂ ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡುವಂತೆ ಸರ್ಕಾರದ ಕಟ್ಟುನಿಟ್ಟಿನ ಆದೇಶವಿದ್ದು, ಮನ್ಸಲಾಪೂರು ಗ್ರಾಮ ಪಂಚಾಯತಿಯಲ್ಲಿ ಡಾ. ಬಾಬು ಜಗಜೀವನ ರಾಂ ಅವರ ಜಯಂತಿ ಆಚರಣೆ ಮಾಡದೇ ಹಸಿರು ಕ್ರಾಂತಿ ಹರಿಕಾರರಿಗೆ ಅಪಮಾನ ಮಾಡಿದ ಪಿಡಿಒ ವಿರುದ್ಧ ಸೂಕ್ತ ಕಾನೂನು ಜರುಗಿಸಿ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿದರು. ಸರ್ಕಾರಿ ಕಛೇರಿಯಲ್ಲಿ ಬೆಳಿಗ್ಗೆ ೯ ಗಂಟೆಗೆ ಜಯಂತ್ಯೋತ್ಸವ ಆಚರಣೆ ಮಾಡಬೇಕೆಂಬ ನಿಯಮಿವಿದ್ದು, ಆದರೆ ಪಿ.ಡಿ.ಓ
ಅನ್ನಪೂರ್ಣೇಶ್ವರಿ ಅವರು ಉದ್ದೇಶ ಪೂರಕವಾಗಿ ಪಂಚಾಯತಿಗೆ ಬಂದಿರುವುದಿಲ್ಲ. ಊರಿನ ಹಿರಿಯರು, ಪಂಚಾಯತಿಗೆ ಭೇಟಿ ನೀಡಿದಾಗ ಪಂಚಾಯತಿಯಲ್ಲಿ ಜಯಂತ್ಯೋತ್ಸವ ಆಚರಣೆ ಮಾಡದೇ ಇರುವುದು ಕಂಡು ಬಂದಿರುತ್ತದೆ. ಆ ಸಮಯದಲ್ಲಿ ಗ್ರಾಮದ ಹಿರಿಯರು. ಪಂಚಾಯತಿಯಲ್ಲಿ ಇರುವ ಬಿಲ್ ಕಲೆಕ್ಟರ್ ಮಲ್ಲಿ ಕಾರ್ಜುನ ರವರೊಂದಿಗೆ ವಾದ ಮಾಡಿದ್ದು, ಬಿಲ್ ಕಲೆಕ್ಟರ್ ರವರು ಮದ್ಯಾಹ್ನ ೧.೩೦ ರ ಸುಮಾರಿಗೆ ಡಾ. ಬಾಬು ಜಗಜೀವನ ರಾಂ ರವರ ಭಾವಚಿತ್ರಕ್ಕೆ ಪೂಜೆ ಮಾಡಿ. ಕಾಟಾಚಾರವೆಂಬಂತೆ ಆಚರಣೆ ಮಾಡಲಾಗಿರುತ್ತದೆ. ಸದರಿ ಪಿ.ಡಿ.ಓ ರವರು ಪ್ರತೀ ಸಹ ಇದೇ ರೀತಿ ನಿರ್ಲಕ್ಷ್ಯವಹಿಸುತ್ತಿದ್ದು, ಗ್ರಾಮದ ಹಿರಿಯರು ಬೆಳಿಗ್ಗೆ ೧೦ ಗಂಟೆಯಿಂದ ಮದ್ಯಾಹ್ನ ೩.೩೦ ಗಂಟೆಯವರೆಗೆ ಪಂಚಾಯತಿಯಲ್ಲಿಯೇ ಕುಳಿತು, ದೂರವಾಣಿ ಮೂಲಕ ಕರೆ ಮಾಡಿದರೆ ಸುಖಾ ಸುಮ್ಮನೆ ನಾನು ಜಿಲ್ಲಾ ಪಂಚಾಯತಿಯಲ್ಲಿ ಮೀಟಿಂಗ್‌ನಲ್ಲಿ ಇದ್ದೇನೆ ಎಂದು ಹಾರಿಕೆ ಉತ್ತರವನ್ನು ನೀಡುತ್ತಿದ್ದಾರೆ. ಇವರು ಯಾವುದೇ ಮೇಲಾಧಿಕಾರಿಗಳ ಭಯವಿಲ್ಲದೇ ತಮ್ಮ ಅಧಿಕಾರವನ್ನುದುರುಪಯೋಗ ಪಡಿಸಿಕೊಂಡಿದ್ದರೆ ನಮ್ಮ ಮನವಿಗೆ ಸ್ಪಂದಿಸಿ ಪಿಡಿಒ ಅನ್ನಪೂರ್ಣಶ್ವೇರಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಪಂಚಾಯತ್ ಬೀಗ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಮೇಶ, ರಾಜು, ಯುವರಾಜ, ಪ್ರತಾಪ್ ಸೇರಿದಂತೆ ಉಪಸ್ಥಿತರಿದ್ದರು.