ಪಿಡಿಒಗಳು ಸಾರ್ವಜನಿಕರಿಗೆ ಸ್ಪಂದಿಸಿ ಕಾರ್ಯನಿರ್ವಹಿಸಿ

ಮಂಡ್ಯ: ಮೇ.27:- ನಾಗಮಂಗಲ ತಾಲ್ಲೂಕು, ಅಂಚೆಚಿಟ್ಟಿನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಅವರು ಮನೆ ಕಳ್ಳತನದ ಬಗ್ಗೆ ನೀಡಿದ ದೂರಿನ ಅನ್ವಯ ನಾಗಮಂಗಲ ಗ್ರಾಮಾಂತರ ಪೆÇಲೀಸರ ಕಾರ್ಯಾಚರಣೆ ನಡೆಸಿ ಮನೆ ಕಳ್ಳತನದ ಆರೋಪಿಗಳನ್ನು ಬಂಧಿಸಿ 20 ಲಕ್ಷ ರೂ ಮೌಲ್ಯದ ಚಿನ್ನ ಬೆಳ್ಳಿ ಆಭರಣಗಳನ್ನು ವಶಪಡಿಸಿ
ಕೊಳ್ಳಲಾಗಿದೆ ಎಂದು ಜಿಲ್ಲಾ ಪೆÇೀಲಿಸ್ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
ಘಟನೆ ವಿವರ: ನಾಗಮಂಗಲ ತಾಲ್ಲೂಕು, ಅಂಚೆಚಿಟ್ಟಿನಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಮೇ.4 ರಂದು ನಾನು ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಯಾರೋ ಕಳ್ಳರು ಮನೆಯ ಬೀಗ ಒಡೆದು ಮನೆಯೊಳಗೆ ನುಗ್ಗಿ ಬೀರುವಿನಲ್ಲಿದ್ದ ಚಿನ್ನ ಮತ್ತು ಬೆಳ್ಳಿಯ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ನೀಡಿದ ದೂರನ್ನು ನೀಡಿದ್ದರು.
ಇದರ ಮೇರೆಗೆ ಮಂಡ್ಯ ಜಿಲ್ಲಾ ಅಪರ ಪೆÇಲೀಸ್ ಅಧೀಕ್ಷಕರಾದ ಸಿ.ಈ. ತಿಮ್ಮಯ್ಯ ಹಾಗೂ ನಾಗಮಂಗಲ ಡಿ.ಎಸ್.ಪಿ ಲಕ್ಷ್ಮೀನಾರಾಯಣ ಪ್ರಸಾದ್ ಮಾರ್ಗದರ್ಶನದಲ್ಲಿ, ನಿರಂಜನ ಕೆ.ಎಸ್, ಸಿ.ಪಿ.ಐ, ನಾಗಮಂಗಲ ವೃತ್ತ ರವರ ನೇತೃತ್ವದಲ್ಲಿ ರವಿಕುಮಾರ್,ವೈ.ಎನ್, ಪಿ.ಎಸ್.ಐ ನಾಗಮಂಗಲ ಗ್ರಾಮಾಂತರ ಠಾಣೆ, ಲೋಕೇಶ್, ಪಿಎಸ್‍ಐ, ಬೆಳ್ಳೂರು ರಾಣೆ, ರಾಜೇಂದ್ರ, ಪಿಎಸ್‍ಐ, ಬಿಂಡಿಗನವಿಲೆ ಠಾಣೆ, ಎಎಸ್‍ಐ, ಟಿ. ಲಿಂಗರಾಜು, ಸಿಹೆಚ್‍ಸಿ ರವರಾದ ಪ್ರಶಾಂತ್ ಕುಮಾರ್, ನಟೇಶ್ ಬಾಬು, ಉಮೇಶ್, ಎ.ಹೆಚ್.ಸಿ ಸಿದ್ದರಾಜು, ಚೇತನ್, ಬಿ.ಆರ್. ಸಿಪಿಸಿ ಸಿದ್ದಪ್ಪ.ಎಂ ರವರನ್ನೊಳಗೊಂಡ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡ ರಚನೆ ಮಾಡಲಾಗಿತ್ತು.
ಸದರಿ ಆರೋಪಿಗಳ ಪತ್ತೆ ತಂಡವು ಮನೆಕಳ್ಳತನ ಎಂ.ಓ ಗಳ ಮಾಹಿತಿ ಪಡೆದುಕೊಂಡು ರಾಮನಗರ ತಾಲ್ಲೂಕು ಕೂಟಕಲ್ ಹೋಬಳಿ ತಡಿಕೋಗಿಲು ಗ್ರಾಮದ ಎಂ.ಓ ಆಸಾಮಿಯನ್ನು ಪತ್ತೆ ಮಾಡಿ ತುಮಕೂರು ಜಿಲ್ಲೆಯ ಯಡಿಯೂರು ಟೌನ್‍ನಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದಾಗ ತನ್ನ ಸಹಚರನ ಜೊತೆಗೂಡಿ, ಮನೆಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡ ಮೇರೆಗೆ ಕುಣಿಗಲ್ ಟೌನ್‍ನಲ್ಲಿ ಆತನ ಸಹಚರನನ್ನು ಪತ್ತೆ ಮಾಡಿ ವಶಕ್ಕೆ ಪಡೆದುಕೊಂಡು ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಈ ಕೆಳಕಂಡ ಪ್ರಕರಣಗಳು ಪತ್ತೆಯಾಗಿರುತ್ತವೆ.
ನಾಗಮಂಗಲ ಗ್ರಾಮಾಂತರ ಪೆÇಲೀಸ್ ಠಾಣೆ, ನಾಗಮಂಗಲ ಗ್ರಾಮಾಂತರ ಪೆÇಲೀಸ್, ಬೆಳ್ಳೂರು ಪೆÇಲೀಸ್, ಬಿಂಡಿಗನವಿಲೆ ಪೆÇಲೀಸ್ ಠಾಣೆಗಳಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ 360 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 1300 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ ಸುಮಾರು ರೂ. 20,00,000/-(ಇಪ್ಪತ್ತು ಲಕ್ಷ) ರೂ. ಗಳಾಗಿರುತ್ತದೆ ಎಂದು ತಿಳಿದು ಬಂದಿದೆ.
ನಾಗಮಂಗಲ ಗ್ರಾಮಾಂತರ ಪೆÇಲೀಸ್ ಠಾಣಾ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ಈ ಕಾರ್ಯವನ್ನು ಮಂಡ್ಯ ಜಿಲ್ಲಾ ಪೆÇಲೀಸ್ ಅಧೀಕ್ಷಕರು,ಶ್ಲಾಘಿಸಿ ಪ್ರಶಂಸಿರುತ್ತಾರೆ.