ಪಿಡಿಎ ಇಂಜನೀಯರಿಂಗ್ ಕಾಲೇಜಿನಲ್ಲಿ ಕಾರ್ಯಾಗಾರ

ಕಲಬುರಗಿ,ಮಾ 3: ಚಿಪ್ ವಿನ್ಯಾಸ ಮತ್ತು ಅಭಿವೃದ್ಧಿಯ ಒಂದು ಅವಲೋಕನ ಕುರಿತು ಎರಡು ದಿನಗಳ ಉದ್ಯಮ ಆಧಾರಿತ ಕಾರ್ಯಾಗಾರವನ್ನು ನಗರದ ಪಿಡಿಎ ಇಂಜನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಯಿತು.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ಇಲಾಖೆ, ಪಿಡಿಎ ಐಎಸ್‍ಪಿ ಸೆಲ್ ಮತ್ತು ಬೆಂಗಳೂರಿನ ಸಿಯಾಕಾನ್ ಟೆಕ್ನಾಲಜೀಸ್ ಸಹಯೋಗದೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಪಿಡಿಎಸಿಇಕೆಯ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಡಾ.ನಾಗೇಂದ್ರ ಎಚ್‍ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಸಿಯಾಕಾನ್ ಟೆಕ್ನಾಲಜೀಸ್ ಸಿಇಒ,ಸಂಜಯ ಬಿರಾದಾರ್ ಸಮಾರಂಭವನ್ನುಉದ್ಘಾಟಿಸಿ ಮಾತನಾಡಿ ತಾಂತ್ರಿಕ ಉನ್ನತ ಶಿಕ್ಷಣ ವ್ಯವಸ್ಥೆಯು ತಾಂತ್ರಿಕವಾಗಿ ಉತ್ತಮ ಮತ್ತು
ಸಾಮಾಜಿಕ ಜವಾಬ್ದಾರಿಯುತ ಮಾನವ ಶಕ್ತಿಯನ್ನು ಸೃಷ್ಟಿಸಲು ಅಪಾರವಾದ ಒತ್ತಡವನ್ನು ಹೊಂದಿದೆ. ಈ ನಿಟ್ಟಿನಲ್ಲಿ ಉನ್ನತ
ಶಿಕ್ಷಣ ಸಂಸ್ಥೆಗಳು ಪ್ರಾಯೋಗಿಕ ಆಧಾರಿತ ಬೋಧನಾ ವಿಧಾನದತ್ತ ಗಮನಹರಿಸಬೇಕು.
ತಮ್ಮ ಕಂಪನಿಯು ವಿದ್ಯಾರ್ಥಿಗಳಿಗೆ ಕ್ಯಾಡೆನ್ಸ್ ಸಾಫ್ಟ್‍ವೇರ್‍ನಲ್ಲಿ ತರಬೇತಿ ನೀಡುತ್ತದೆ ಚಿಪ್ ವಿನ್ಯಾಸ ಮತ್ತು ಅಭಿವೃದ್ಧಿಗೆ ನೈಜ ಸಮಯದ ವಿಧಾನವನ್ನು ಒದಗಿಸಲುಕಾರ್ಯಾಗಾರವು ಸಹಾಯಕವಾಗಲಿದೆ ಎಂದರು. ಈ ಕಾರ್ಯಾಗಾರವು ವಿದ್ಯಾರ್ಥಿಗಳ ಕೌಶಲ್ಯಗಳನ್ನು ಹೊಸ
ತಂತ್ರಜ್ಞಾನಗಳೊಂದಿಗೆ ಉತ್ಕøಷ್ಟಗೊಳಿಸುತ್ತದೆ, ಇದು ವಿದ್ಯಾರ್ಥಿಗಳಿಗೆ ಇಂಟೆಲ್, ಕ್ವಾಲ್ಕಾಮ್, ಎಎಮ್‍ಡಿ, ಎಚ್‍ಸಿಎಲ್ ಇತ್ಯಾದಿ
ಕಂಪನಿಗಳಲ್ಲಿ ಸ್ಥಾನ ಪಡೆಯಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.