ಪಿಟ್ ತೆಗೆಸಲು ಕಿತ್ತಾಟ; ಶೌಚಾಲಯಕ್ಕೆ ಬೀಗ

ನಂಜನಗೂಡು:ಜ:08: ಕೆಎಸ್‍ಆರ್‍ಟಿಸಿ ಬಸ್ಟಾಂಡ್ ಶೌಚಾಲಯ ಬಂದ್. ಸಾರ್ವಜನಿಕರ ಪರದಾಟ ತುಂಬಿರುವ ಪಿಟ್ ಗುಂಡಿ ತಗ್ಗಿಸುವಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರನ ಕಚ್ಚಾಟದಿಂದ ಮುಚ್ಚಿದ ಶೌಚಾಲಯ.
ನಂಜನಗೂಡು ಕೆಎಸ್ ಆರ್ ಟಿ ಸಿ ಬಸ್ಟಾಂಡ್ ನಲ್ಲಿರುವ ಶೌಚಾಲಯ ಹತ್ತು ದಿನಗಳಿಂದ ಬಂದಾಗಿದೆ ಇದರಿಂದ ಸಾರ್ವಜನಿಕರಿಗೆ ಪರದಾಡುವಂತಾಗಿದೆ ಈ ಬಸ್ಟ್ಯಾಂಡಿನಲ್ಲಿ ನೂರಾರು ವಾಹನಗಳು ಬರುವುದರಿಂದ ಓಡಾಡುವ ಸಾರ್ವಜನಿಕರು ಶೌಚಾಲಯ ಇಲ್ಲದೆ ಯಾರಿಗೂ ತಮ್ಮ ಸಂಕಟವನ್ನು ಹೇಳಿಕೊಳ್ಳಲಾಗದೆ ಸಂಬಂಧಪಟ್ಟವರು ಹಿಡಿಶಾಪ ಹಾಕುತ್ತಿದ್ದಾರೆ ಅದರಲ್ಲೂ ಮಹಿಳೆಯರಿಗೆ ಬಹಳ ತೊಂದರೆಯಾಗಿದೆ ಪುರುಷರು ಗೋಡೆಗಳನ್ನು ಸೌಚಾಲಯ ಮಾಡಿಕೊಂಡಿದ್ದಾರೆ.
ಕಾರಣ ಶೌಚಾಲಯದಲ್ಲಿ ಇರುವ 2 ಬಿಟ್ ಗುಂಡಿಗಳು ತುಂಬಿಕೊಂಡಿವೆ ಇದನ್ನು ತೆರವುಗೊಳಿಸಲು ಟೆಂಡರ್ ಮಲಿಕ ನನಗೆ ಸಂಬಂಧಪಟ್ಟಿದ್ದಲ್ಲ ಕೆಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸಂಬಂಧಪಟ್ಟಿದ್ದು ಎಂದು ಹೇಳಿಕೊಂಡು ಇಬ್ಬರೂ ಕೂಡ ತೆರವುಗೊಳಿಸದೆ ಶೌಚಾಲಯ ಮುಚ್ಚಿದ್ದಾರೆ ಎಂದು ತಿಳಿದುಬಂದಿದೆ ಇವರಿಬ್ಬರ ಕಚ್ಚಾಟದಿಂದ ಶೌಚಾಲಯ ಮುಚ್ಚಿರುವುದು ಬಹಳ ತೊಂದರೆಯಾಗಿದೆ.
ಆದ್ದರಿಂದ ತಕ್ಷಣ ಸಂಬಂಧಪಟ್ಟವರು ಗಮನಹರಿಸಿ ಶೌಚಾಲಯವನ್ನು ತೆಗೆಯಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.