ಪಿಟೀಲು ವಿಧ್ವಾಂಸ ಟಿ.ಎನ್ ಕೃಷ್ಣನ್ ಇನ್ನಿಲ್ಲ


ಚೆನ್ನೈ, ನ 3- ಸುಪ್ರಸಿದ್ದ ಪಿಟೀಲು ವಿಧ್ವಾಂಸ, ಪದ್ಮ ಪ್ರಶಸ್ತಿ ಪುರಸ್ಕೃತ ಟಿ.ಎನ್.ಕೃಷ್ಣನ್ (92) ಚೆನ್ನೈನಲ್ಲಿ ನಿಧನರಾದರು. ಅಕ್ಟೋಬರ್ 6, 1926 ರಂದು ಕೇರಳದಲ್ಲಿ ಜನಿಸಿದ ಕೃಷ್ಣನ್, ತಮಿಳುನಾಡಿನ ಚೆನ್ನೈನಲ್ಲಿ ನೆಲೆಸಿದ್ದರು. ಚೆನ್ನೈ ಸಂಗೀತ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದ ಕೃಷ್ಣನ್ ಅವರು ಬಹಳಷ್ಟು ವಿದ್ಯಾರ್ಥಿಗಳಿಗೆ ಪಿಟೀಲು ಕಲಿಸಿದ್ದರು.
ದೆಹಲಿ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಮ್ಯೂಸಿಕ್ ಅಂಡ್ ಫೈನ್ ಆರ್ಟ್ಸ್ ನ ಡೀನ್ ಆಗಿಯೂ ಸೇವೆ ಸಲ್ಲಿಸಿದರು. ಕೃಷ್ಣನ್ ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಸಂಗೀತ ಕಲಾನಿಧಿ ಪುರಸ್ಕಾರಗಳಿಗೆ ಭಾಜನವಾಗಿದ್ದರು.
ದೇಶದಲ್ಲಿ ಸಾವಿರಾರು ಸಂಗೀತ ಕಚೇರಿಗಳನ್ನು ನೀಡಿದ್ದ ಟಿ.ಎನ್. ಕೃಷ್ಣನ್ ಅವರ ನಿಧನದಿಂದ ಅಸಂಖ್ಯಾತ ಸಂಗೀತ ಪ್ರಿಯರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ

ಪ್ರಧಾನಿ ಸಂತಾಪ

ಟಿ ಎನ್ ಕೃಷ್ಣನ್ ಸೋಮವಾರ ಸಂಜೆ ಚೆನ್ನೈನಲ್ಲಿ ನಿಧನರಾಗಿದ್ದು, ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ವಿಷಾದ ವ್ಯಕ್ತಪಡಿಸಿದ್ದಾರೆ. ”ಪ್ರಸಿದ್ಧ ಪಿಟೀಲು ವಾದಕ ಟಿ.ಎನ್. ಕೃಷ್ಣನ್ ಸಂಗೀತ ಜಗತ್ತಿನಲ್ಲಿ ದೊಡ್ಡ ಹೆಸರು. ಅವರ ಕೃತಿಗಳು ಸುಂದರವಾಗಿ ವ್ಯಾಪಕವಾದ ವ್ಯಾಪ್ತಿಯನ್ನು ಹೊಂದಿವೆ. ಯುವಕರಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದ ಅವರ ನಿಧನದಿಂದ ಸಂಗೀತ ಕ್ಷೇತ್ರ ಶೂನ್ಯವಾಗಿದೆ. ಅವರ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪವಿದೆ. ಓಂ ಶಾಂತಿ” ಎಂದು ಟ್ವೀಟ್ ಮಾಡಿದ್ದಾರೆ