ಪಿಜಿ ಪಾಳ್ಯ ವಲಯದಲ್ಲಿ ಸಫಾರಿ ಆರಂಭ

ಸಂಜೆವಾಣಿ ವಾರ್ತೆ
ಹನೂರು: ಡಿ.03:- ಸಮೃದ್ಧ ಅರಣ್ಯ ಪ್ರದೇಶ ವನ್ಯಪ್ರಾಣಿಗಳನ್ನು ಸಫಾರಿ ಮೂಲಕ ವೀಕ್ಷಣೆ ಮಾಡಲು ನಾಗರಿಕರಿಗೆ ಪಿ.ಜಿ ಪಾಳ್ಯ ವನ್ಯಜೀವಿ ವಲಯ ಅವಕಾಶ ಮಾಡಿ ಕೊಡಲಾಗಿದೆ ನಾಗರಿಕರು ಸದ್ಬಳಕೆ ಮಾಡಿಕೊಳ್ಳುವಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಪಿ.ಜಿ ಪಾಳ್ಯ ವಿಭಾಗ ಲೋಕ್ಕನಹಳ್ಳಿಯಲ್ಲಿ ಶನಿವಾರ ಸಫಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು ಜಿಲ್ಲೆಯ ಹನೂರು ತಾಲೂಕಿನ ಮಲೆ ಮಾದೇಶ್ವರ ಪಿ.ಜಿ ಪಾಳ್ಯ ವನ್ಯಜೀವಿ ವಲಯದಲ್ಲಿ ಸಾರ್ವಜನಿಕರಿಗೆ ಸಫಾರಿಗೆ ಚಾಲನೆ ನೀಡಲಾಗಿದೆ.
ಇದು ನಾಲ್ಕನೇ ಸಫಾರಿ ಕೇಂದ್ರ ಈಗಾಗಲೇ ಬಂಡಿಪುರ ಬಿ ಆರ್ ಟಿ ಕೆ ಗುಡಿಯಲ್ಲಿ ಸಫಾರಿ ವ್ಯವಸ್ಥೆ ಇರುವುದರಿಂದ ಕಾವೇರಿ ವನ್ಯ ಧಾಮದ ಗೋಪಿನಾಥಂನಲ್ಲಿ ಪ್ರಾಯೋಗಿಕವಾಗಿ ಸಫಾರಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.
ನಾಗರಿಕರು ಸಫಾರಿ ವ್ಯವಸ್ಥೆಯನ್ನು ಸದ್ಬಳಕೆ ಮಾಡಿಕೊಂಡು ಅರಣ್ಯದಲ್ಲಿ ಪ್ರಾಣಿಗಳಿಗೆ ಯಾವುದೇ ತೊಂದರೆ ಉಂಟು ಮಾಡದೆ ಅರಣ್ಯ ಪ್ರದೇಶದಲ್ಲಿರುವ ವನ ಸಂಪತ್ತು ಮತ್ತು ಪ್ರಾಣಿಗಳನ್ನು ವೀಕ್ಷಿಸಲು ಒಳ್ಳೆಯ ಸದಾ ಅವಕಾಶ ಜನತೆಗೆ ಸಿಕ್ಕಿದೆ ಹೀಗಾಗಿ ಸದ್ಬಳಕೆ ಮಾಡಿಕೊಳ್ಳಬೇಕು.
ಅದೇ ರೀತಿ ಸದಾ ಜಂಜಾಟದಲ್ಲಿ ಇರುವ ನಾಗರಿಕರಿಗೆ ಸಫಾರಿಯಿಂದ ಉತ್ತಮ ಗಾಳಿ ಬೆಳಕ್ಕು ಸಮೃದ್ಧ ಅರಣ್ಯ ಪ್ರದೇಶವನ್ನು ಕಣ್ತುಂಬಿಕೊಳ್ಳಲು ಸದಾ ಅನುಕೂಲವಾಗಲಿದೆ ಇದು ಬೆಳಗ್ಗೆ ಆರರಿಂದ ಒಂಬತ್ತು ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ರಿಂದ 6 ಗಂಟೆವರೆಗೆ ಸಫಾರಿ ವ್ಯವಸ್ಥೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ ನಿಗದಿತ ಸಮಯದಲ್ಲಿ ನಾಗರಿಕರು ಸದ್ಬಳಕೆ ಮಾಡಿಕೊಳ್ಳಬೇಕಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕೊಳ್ಳೇಗಾಲ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ಸಹಕಾರ ಸಂರಕ್ಷಣಾಧಿಕಾರಿ ಕಾವೇರಿ ವನ್ಯಜೀವಿ ವಿಭಾಗ ಅಂಕರಾಜು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಪ ವಿಭಾಗ ಕೊಳ್ಳೇಗಾಲ ಶಶಿಧರ್, ವಲಯ ಅರಣ್ಯ ಅಧಿಕಾರಿ ಬೈಲೂರು ಪ್ರಮೋದ್ ಸೇರಿದಂತೆ ಇನ್ನಿತರ ಮುಖಂಡರುಗಳು ಇದ್ದರು.