ಪಿಕೆಪಿಎಸ್ ಸರ್ವ ಸಾಧಾರಣ ಸಭೆ


ಬಾದಾಮಿ,ಡಿ.25-ನಮ್ಮ ಪಿ.ಕೆ.ಪಿ.ಎಸ್ ನಿಂದ 2019-20 ಸಾಲಿನಲ್ಲಿ ಉತ್ತಮವಾದ ಹಣಕಾಸಿನ ವಹಿವಾಟು ನಡೆಸುವುವ ಮೂಲಕ 7. 38 ಸಾವಿರ ರೂಪಾಯಿ ನಿವ್ವಳ ಲಾಭವನ್ನು ಹೊಂದಿದೆ ಎಂದು ಪಿ.ಕೆ.ಪಿ.ಎಸ್ ಅಧ್ಯಕ್ಷ ರಾದ ಮಂಜುನಾಥ ಹೇಗ್ರಿ ಹೇಳಿದರು.
ಅವರು ತಾಲೂಕಿನ ಎರಗೂಪ್ಪ ಎಸ್ ಬಿ ಗ್ರಾಮದ 2019-20 ನೇ ಸಾಲಿನ ಪಿ.ಕೆ.ಪಿ.ಎಸ್.ಸರ್ವ ಸಾಧಾರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿ ಸಹಕಾರಿ ಸಂಘದವರು ಲಾಭ ಮಾಡಬೇಕಾದರೆ ಕೃಷಿಯೇತರ ಚಟುವಟಿಕೆಗಳಲ್ಲಿ ಹೆಚ್ಚಿನ ಕಾರ್ಯಮಾಡಬೇಕು ಸಹಕಾರಿ ಸಂಘವು ಬಡವರ ಹಾಗೂ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಸಾದಿಸುವ ಸಲುವಾಗಿ ಸಾಲವಿತರಣೆ ಮಾಡಿ ಸಂಘದ ಸದಸ್ಯರ ಉಳಿತಾಯ ಮನೋಬಾವನೆ ಬೆಳಸಿದೆ ಎಂದರು. ನಂತರ ಗ್ರಾಮದ ಹಿರಿಯರಾದ ಈರಣ್ಣ ಹುನಗುಂಡಿ ಮಾತನಾಡಿ ಪ್ರತಿ ಯೂಬ್ವ ರೈತರು ಬ್ಯಾಂಕ್ ನೂಂದಿಗೆ ಒಳ್ಳೆಯ ವಹಿವಾಟು ಮಾಡಬೇಕು ಇದರ ಲಾಭವನ್ನು ಪಡೆಯಬೇಕು ಎಂದರು.ಬ್ಯಾಂಕಿನ ಸದಸ್ಯರಾದ ಆರ್.ಎಚ್ ಹಳ್ಳಿ ಮಾತನಾಡಿ ಬ್ಯಾಂಕಿನ ಮತ್ತು ರೈತರ ನಡುವಿನ ಸಹಕಾರವನ್ನು ಸವಿಸ್ತಾರವಾಗಿ ವಿವರಿಸಿದರು ನಂತರ ಬ್ಯಾಂಕಿನ ಉಪಾಧ್ಯಕ್ಷ ರಾದ ಪಿ.ಬಿ.ಅಂಗಡಿ ಮಾತನಾಡಿ ರೈತರಿಗೆ ಸಲಹೆ ಸೂಚನೆ ನಿಡಿದರು ಈ ಸಂದರ್ಭದಲ್ಲಿ ಸದಸ್ಯರಾದ ಮಲ್ಲಪ್ಪ ಶಿವಪುರ, ಬೋಜಪ್ಪ ಬೂದಿಹಾಳ, ಕುಬೇರ ಮರಿಯನ್ನವರ,ಉಮೇಶ ಬಂಜೇತ್ರಿ,ದ್ಯಾಮಣ್ಣ ವಾಲಿಕಾರ,ಈರಪ್ಪ ಮುಚ್ಚಳಗುಡ್ಡ,ಶಿವಾನಂದ ಕೋಪ್ಪಣ್ಣವರ,ದ್ಯಾಮವ್ವ ಹೆಬ್ವಳಿ,ರೇಣುಕಾ ಅನಸಾಲಿ ಹಾಗೂ ಎರಗೋಪ್ಪ ಎಸ್.ಬಿ ಹಾಗೂ ಮಲ್ಲಾಪೂರ ಊರಿನ ಗುರು ಹಿರಿಯರು ಯುವಕ ಮಿತ್ರರು ಅಕ್ಕ ತಂಗಿಯರು ಎಲ್ಲಾ ರೈತ ಬಾಂದವರು ಬಾಗವಹಿಸಿದ್ದರು.