ಪಿಕಾರ್ಡ ಬ್ಯಾಂಕ್ಅಧ್ಯಕ್ಷರಾಗಿ ಪಿ.ಬಿ.ಗೌಡ ಆಯ್ಕೆ


ಸಂಜೆವಾಣಿ ವಾರ್ತೆ
ಹರಪನಹಳ್ಳಿ, ಮಾ.28: ಇಲ್ಲಿಯ ಪ್ರಾಥಮಿಕ ಸಹಕಾರ ಕೃಷಿ ಪತ್ತಿನ ಗ್ರಾಮೀಣ ಅಭಿವೃದ್ದಿ ಬ್ಯಾಂಕ್(ಪಿಕಾರ್ಡ) ಗೆ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಬಿ.ಗೌಡ ರವರು ಅವಿರೋಧವಾಗಿ ಆಯ್ಕೆಯಾದರು.
ವಿಶಾಲಾಕ್ಷಮ್ಮನವರು ಒಪ್ಪಂದದ ಪ್ರಕಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಜರುಗಿತು.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಪವನಕುಮಾರ ಕಾರ್ಯನಿರ್ವಹಿಸಿದರು.
ಚುನಾವಣಾ ಸಭೆಗೆ ಬ್ಯಾಂಕಿನ ಉಪಾದ್ಯಕ್ಷ ಬಿ.ರಾಜಕುಮಾರ, ನಿರ್ದೆಶಕರಾದ ಬೇಲೂರು ಸಿದ್ದೇಶ, ಪಿ.ಕೆ.ಮಹಾದೇವಪ್ಪ, ಎಸ್.ಜಂಬಣ್ಣ, ಶಿವಕುಮಾರಗೌಡ, ಎ.ಬಸವರಾಜ, ಟಿ.ಜಗದೀಶ, ಎಚ್.ವಿಶಾಲಾಕ್ಷಮ್ಮ ಹಾಜರಿದ್ದರು.
ಕಾಂಗ್ರೆಸ್ಪಕ್ಷದ ಮುಖಂಡರಾದ ಎಚ್.ಬಿ.ಪರಶುರಾಮಪ್ಪ, ಎಚ್.ಕೆ.ಹಾಲೇಶ, ಬೇಲೂರು ಅಂಜಪ್ಪ, , ಅಲಮರಸಿಕೇರಿ ಪರಶುರಾಮ, ಪುರಸಭಾ ಸದಸ್ಯರಾದ ಜಾಕೀರ ಹುಸೇನ್, ಭರತೇಶ, ಮುತ್ತಿಗೆ ಜಂಬಣ್ಣ ಮುಂತಾದವರು ಆಗಮಿಸಿ ನೂತನ ಅಧ್ಯಕ್ಷರಿಗೆ ಶುಭಕೋರಿದರು.