ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಸಭೆ ಸಾಲ ಸರಳೀಕರಣಗೊಳಿಸಲು ಕ್ರಮ

ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಸೆ.24 ರೈತರಿಗೆ ಸಹಕಾರ ಬ್ಯಾಂಕುಗಳು ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಕ್ರಮಕೈಗೊಳ್ಳಲಾಗುವುದೆಂದು ಬ್ಯಾಂಕ್ ಜಿಲ್ಲಾ ನಿರ್ದೇಶಕ ಜೆ. ಎಂ. ವೃಷಭೇಂದ್ರ ಯ್ಯ  ತಿಳಿಸಿದರು
ಪಟ್ಟಣದ ಹಳೆ ಊರಿನ ಸಮುದಾಯಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿಕಾರ್ಡ್ ಬ್ಯಾಂಕ್ ವಾರ್ಷಿಕ ಮಹಾಜನ ಸಭೆಯಲ್ಲಿ ಮಾತನಾಡಿದರು
ರೈತರಿಗೆ ಸರಿಯಾದ ಸಮಯಕ್ಕೆ ಸಾಲ ನೀಡುವ ಮೂಲಕ ಅವರ ಕೃಷಿ ಚಟುವಟಿಕೆಗಳಿಗೆ ಉತ್ತೇಜಿಸಲು ಸಹಕಾರಿ ಕ್ಷೇತ್ರ ನೆರವಾಗಲಿದೆ ಎಂದರು.
ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ ಗಂಗಾಧರ್ ಮಾತನಾಡಿ ವಾರ್ಷಿಕ ಆದಾಯ ಈ ಸಾಲಿನಲ್ಲಿ 75.24 ಲಕ್ಷ ರೂ. ಲಾಭ ಗಳಿಸುವ ನಿಟ್ಟಿನಲ್ಲಿ ರೈತರು ಮತ್ತು ಸಿಬ್ಬಂದಿ ಕಾರಣಗಿದೆ ಎಂದರು.
ಬ್ಯಾಂಕ್ ವ್ಯವಸ್ಥಾಪಕ ಶಿವಸಾಲಿ ತಿಪ್ಪೇಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷೆ ನಾಗಮ್ಮ ನಿರ್ದೇಶಕರಾದ ಕೃಷ್ಣಮೂರ್ತಿ ಕೊಟ್ರಪ್ಪ ಬಿ.ಎಂ ಗುರುವಯ್ಯ ಮಂಜುನಾಥ್ ಪಾಟೀಲ್  ಇತರರಿದ್ದರು.