ಪಿಎಸ್ ಐ ನೇಮಕಾತಿಯಲ್ಲಿ ರಾಜ್ಯಕ್ಕೆ 16 ನೇ ರ್ಯಾಂಕ ಬಡತನದಲ್ಲಿ ಅರಳಿದ ಬರಡೋಲ ಪ್ರತಿಭೆ ‘ಜಗದೇವಿ’

ಲಕ್ಷಣ ಶಿಂದೆ,
ಚಡಚಣ:ಸೆ.16:ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಛಲವಿದ್ದರೆ ಬಡತನ ಅಡ್ಡಿಯಾಗದು ಎಂಬುದಕ್ಕೆ ಈಚಗೆ ಪ್ರಕಟಗೊಂಡ ಪಿಎಸ್‍ಐ ನೇಮಕಾತಿಯಲ್ಲಿ ರಾಜ್ಯಕ್ಕೆ 16 ನೇ ರ್ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಚಡಚಣ ತಾಲ್ಲೂಕಿನ ಬರಡೋಲ ಗ್ರಾಮದ ಜಗದೇವಿ ಸಾಲೂಟಗಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಕಿತ್ತು ತಿನ್ನುವ ಬಡತನ,ಬಾಲ್ಯದಲ್ಲಿಯೇ ತಂದೆಯನ್ನು ಕಳೆದಕೊಂಡ ಜಗದೇವಿಗೆ ಹೋಟೆಲ್ ನಲ್ಲಿ ಕೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ತಾಯಿ ಸುಸಿಲಾ ಆಸರೆ.
ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಜಗದೇವಿ,ಪದವಿ ಮುಗಿಸಿದ್ದು ಚಡಚಣದ ಶ್ರೀ ಸಂಗಮೇಶ್ವರ ಪದವಿ ಮಹಾವಿದ್ಯಾಲಯದಲ್ಲಿ.ನಂತರ ಹಾಸ್ಟೆಲ್ ನಲ್ಲಿ ಇದ್ದುಕೊಂಡೇ ಪಿಎಸ್‍ಐ ಪರೀಕ್ಷೆ ತರಬೇತಿ ಪಡೆದು 300 ಹುದ್ದೆಗಳಲ್ಲಿ 16 ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಸಾಧನೆ ಕುರಿತು ಪ್ರತಿಕ್ರೀಯೆ ವ್ಯಕ್ತಪಡಿಸಿದ ಜಗದೇವಿ ಸಾಲೂಟಗಿ,ಕಠಿಣ ಪರಿಶ್ರಮ ಹಾಗೂ ಬಡತನವನ್ನೇ ಅಸ್ತ್ರವನ್ನಾಗಿಸಿ ಕಷ್ಟಪಟ್ಟು ಓದಿದರೆ ನಮ್ಮಂತಹ ಅಬಲೆಯರೂ ಸಬಲರಾಗಿ ಏನನ್ನಾದರೂ ಸಾಧಿಸಬಹುದು ಎಂದರು.
ಬಾಲಕೀಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಗ್ರಾಮದ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ,ತಾ.ಪಂ.ಸದಸ್ಯ ರಾಜು ಝಳಕಿ,ಗ್ರಾಮ ಪಂಚಾಯ್ತಿ ಸದಸ್ಯರಾದ ತುಕಾರಾಮ ಶಿಂಧೆ,ಲಾಲಸಾಬ ಬಡಿಗೇರ,ಜಗದೇವಿ ಸಾಧನೆ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ.ಇನ್ನೂ ಹೆಚ್ಚಿನ ಸಾಧನೆಗೆ ಮಾಡುವ ವಿಶ್ವಾಸ ನಮಗಿದೆ ಎಂದಿದ್ದಾರೆ.